29ರಿಂದ ಭಾರತ ಸೇಡಂನಲ್ಲಿ ವಿಕಾಸ ಸಂಗಮ ಉತ್ಸವ

KannadaprabhaNewsNetwork |  
Published : Jan 23, 2025, 12:47 AM IST
ಚಿತ್ರ 22ಬಿಡಿಆರ್50 | Kannada Prabha

ಸಾರಾಂಶ

ಹುಮನಾಬಾದ್ ಪಟ್ಟಣದ ಲಕ್ಷ್ಮೀ ವೆಂಕಟೇಶ್ವರ ಶಾಲೆಯ ಸಭಾ ಮಂಟಪದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಶಿವಶಂಕರ ತರನಳ್ಳಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ, ಹುಮನಾಬಾದ್ / ಕಮಲನಗರ

ಭಾರತ ವಿಕಾಸ ಸಂಗಮದ ಏಳನೇ ಭಾರತೀಯ ಸಂಸ್ಕೃತಿ ಉತ್ಸವ ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ಜ.29 ರಿಂದ ಫೆ.6ರವರೆಗೆ 9 ದಿವಸಗಳ ಕಾಲ ಜರುಗಲಿದೆ ಎಂದು ಜಿಲ್ಲಾ ಸಂಚಾಲಕ ಶಿವಶಂಕರ ತರನಳ್ಳಿ ಮಾಹಿತಿ ನೀಡಿದರು.ಪಟ್ಟಣದ ಲಕ್ಷ್ಮೀ ವೆಂಕಟೇಶ್ವರ ಶಾಲೆಯ ಸಭಾ ಮಂಟಪದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಭಾರತ ವಿಕಾಸ ಸಂಗಮ ಹಾಗೂ ವಿಕಾಸ ಅಕಾಡೆಮಿ ಕಲಬುರಗಿ ಇವುಗಳ ಸಹಯೋಗದಲ್ಲಿ ಸೇಡಂನ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶೀಕ್ಷಣ ಸಮಿತಿಯ ಸ್ವರ್ಣ ಜಯಂತಿ ಅಂಗವಾಗಿ ಪ್ರಕೃತಿ ಯಿಂದ ಸಂಸ್ಕೃತಿಯೆಡೆಗೆ ಘೋಷಣೆಯ ಮೂಲಕ ಭಾರತ ವಿಕಾಸ ಸಂಗಮ 7ನೇ ಭಾರತ ಸಂಸ್ಕೃತಿ ಉತ್ಸವ ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದ ಬೀರನಳ್ಳಿ ಸೀಮಾಂತರ ಪ್ರದೇಶದಲ್ಲಿ ಆಯೋಜಿಸಲಾಗಿದೆ.ಭಾರತೀಯ ಮೌಲ್ಯ, ಸಂಸ್ಕೃತಿ ಹಾಗೂ ಪರಂಪರೆಯನ್ನು ಯುವ ಪೀಳಿಗೆಯಲ್ಲಿ ಗಟ್ಟಿಗೊಳಿಸಲು ಮತ್ತು ದೇಶದ ವಿವಿಧ ಕ್ಷೇತ್ರಗಳಲ್ಲಿ ನೇತೃತ್ವ ವಹಿಸಲು ಬೇಕಾಗಿರುವ ಆತ್ಮವಿಶ್ವಾಸವನ್ನು ಆಯೋಜಿಸುತ್ತಿರುವ ಕಾರ್ಯಕ್ರಮ 240 ಎಕರೆ ಪ್ರದೇಶದಲ್ಲಿ ಸಿದ್ದೇಶ್ವರ ಸ್ವಾಮೀಜಿಯ ನೆನಪಿನಲ್ಲಿ ಉತ್ಸವ ಜರುಗಲಿದೆ. 60 ಎಕರೆ ಪ್ರದೇಶದಲ್ಲಿ ವಾಹನಗಳ ನಿಲುಗಡೆಗೆ ಮೀಸಲಿಡಲಾಗಿದೆ ಎಂದರು.ರಾಷ್ಟ್ರದ ಶ್ರೇಷ್ಠ ವ್ಯಕ್ತಿಗಳಿಂದ ಪ್ರೇರಣಾದಾಯಕ ಉಪನ್ಯಾಸಗಳು, ಜಾಗೃತಿ ಮೂಡಿಸುವ ಉಪನ್ಯಾಸಗಳು, ವಿಶೇಷ ಚಿಂತನಾ ಸಭೆಗಳು, ದೂರಗಾಮಿ ಪರಿಣಾಮ ಬೀರುವ ಕೃಷಿ ಪದ್ಧತಿಗಳ ಪ್ರದರ್ಶನ, ಪ್ರಾತ್ಯಕ್ಷಿಕೆ, ಯೋಗ ಪ್ರದರ್ಶನ, ವಿಜ್ಞಾನ ಪ್ರದರ್ಶನ, ಚಿತ್ರಕಲಾ ಸ್ಪರ್ಧೆ, ಕಾರ್ಯಾಗಾರ, ಪುಸ್ತಕ ಪ್ರದರ್ಶನ ಮತ್ತು ಮಾರಾಟ, 300 ಸ್ವದೇಶಿ ಉತ್ಪನ್ನಗಳ ಮಾರಾಟ ಮಳಿಗೆಗಳು, 300 ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆಗಳು ಇರಲಿವೆ.

ವಸತಿ ಟೆಂಟ್‌ಗಳನ್ನೂ ಸಿದ್ಧಪಡಿಸಲಾಗಿದೆ. ಸಂಪೂರ್ಣ ಉತ್ಸವ ಮೇಲ್ವಿಚಾರಣಾ ಸಮಿತಿಯ ಮುಖ್ಯ ಸಂಯೋಜಕ ಬಸವರಾಜ ಪಾಟೀಲ ಸೇಡಂ ವಹಿಸಲಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಗಮೇಶ್ ಜವಾದಿ ಸೇರಿದಂತೆ ಅನೇಕರಿದ್ದರು.

ಮಾಜಿ ರಾಷ್ಟ್ರಪತಿ ಕೋವಿಂದ್ ಚಾಲನೆ

ಹಾರಕೂಡ ಮಠದ ಚನ್ನವೀರ ಶಿವಾಚಾರ್ಯರ ಅಧ್ಯಕ್ಷತೆಯಲ್ಲಿ 9 ದಿನಗಳ ಕಾಲ ನಡೆಯಲಿರುವ ಅದ್ಧೂರಿ ಉತ್ಸವವನ್ನು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉದ್ಘಾಟಿಸಲಿದ್ದಾರೆ. ಅಮೆರಿಕದ ಮಾಜಿ ಉಪಾಧ್ಯಕ್ಷ ಅಲ್‌ ಗೋ, ಮಾರಿಷಸ್‌ನ ಶಿಕ್ಷಣ ಕಾರ್ಯದರ್ಶಿ ಯುಧಿಷ್ಕರ್ ಮನ್‌ಬೋದ್, ನಾಡಿನ ಮಠಾಧೀಶರು, ಸಂತ ಮಹಾಂತರು, ಧರ್ಮದರ್ಶಿಗಳು, ಧಾರ್ಮಿಕ ಮುಖಂಡರು, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಚಿಂತಕರು, ಕ್ರೀಡಾಪಟುಗಳು, ಅರ್ಜುನ ಪ್ರಶಸ್ತಿ ವಿಜೇತರು, ದೇಶದ 50ಕ್ಕೂ ಹೆಚ್ಚು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು, ದೇಶದ ಮಾಜಿ ಸೇನಾಧಿಕಾರಿಗಳು, ವಿವಿಧ ಕ್ಷೇತ್ರದ ತಜ್ಞರು ಸೇರಿದಂತೆ ನಾಡಿನ ಖ್ಯಾತ ಕಲಾವಿದರು, ರಾಷ್ಟ್ರಮಟ್ಟದ ಸಂಗೀತ ದಿಗ್ಗಜರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಬಸವ ರಥ ಸಂಚಾರಕ್ಕೆ ಕಮಲನಗರದಲ್ಲಿ ಅದ್ಧೂರಿ ಸ್ವಾಗತ

ಕಮಲನಗರ: ಸೇಡಂನಲ್ಲಿ ಜ.29 ರಿಂದ ಫೆ.6 ರವರೆಗೆ ನಡೆಯಲಿರುವ ಭಾರತೀಯ ಸಂಸ್ಕೃತಿ ಉತ್ಸವದ ಪ್ರಚಾರಾರ್ಥ ಬಸವ ರಥ ಸಂಚಾರಕ್ಕೆ ಬುಧವಾರ ವಿಕಾಸ ಆಕಾಡೆಮಿ, ಕಸಾಪ ಪದಾಧಿಕಾರಿಗಳು, ಸ್ಥಳಿಯರು ಸ್ವಾಗತಿಸಿ ಬರಮಾಡಿಕೊಂಡು ಪೂಜೆ ಸಲ್ಲಿಸಿದರು.

ನಿವೃತ್ತ ಪ್ರಾಂಶುಪಾಲ ಎಸ್‌ಎನ್ ಶಿವಣಕರ ಮಾತನಾಡಿ, ಜ.29 ರಿಂದ ಫೆ. 6 ರ ವರೆಗೆ ಸೇಡಂನಲ್ಲಿ ಬಸವರಾಜ ಪಾಟೀಲ್ ಸೇಡಂ ಅವರ ನೇತೃತ್ವದಲ್ಲಿ ಭಾರತೀಯ ಸಂಸ್ಕೃತಿ ಉತ್ಸವ ಮತ್ತು ಕೊತ್ತಲ ಸ್ವರ್ಣ ಜಯಂತಿ ಜರುಗಲಿದೆ. ಕೃಷಿ, ಶಿಕ್ಷಣ, ಗ್ರಾಮಾಭಿವೃದ್ಧಿ, ಮಹಿಳಾ ಸಬಲೀಕರಣ ಸೇರಿದಂತೆ ಈ ಭಾಗದಲ್ಲಿ ವಿವಿಧ ಸಾಮಾಜಿಕ ಕಾರ್ಯಗಳು ನಡೆಯಲಿವೆ. ಯುವಕರು, ಮಕ್ಕಳು ಇದರ ಪ್ರಯೋಜನ ಪಡೆಯಬೇಕೆಂದರು.ತಾ.ಪಂ. ಮಾಜಿ ಅಧ್ಯಕ್ಷ ಶ್ರೀರಂಗ ಪರಿಹಾರ, ಕಸಾಪ ತಾಲೂಕು ಅಧ್ಯಕ್ಷ ಪ್ರಶಾಂತ ಮಠಪತಿ ಮಾತನಾಡಿದರು. ಬೀದರ್ ನಗರದಿಂದ ಕಮಲನಗರ ಪಟ್ಟಣಕ್ಕೆ ಭಾರತೀಯ ಸಂಸ್ಕೃತಿ ಉತ್ಸವದ ಪ್ರಚಾರಾರ್ಥ ಬಸವ ರಥ ಸಂಚಾರ ಆಗಮಿಸಿ ನಂತರ ಔರಾದ ಪಟ್ಟಣದತ್ತ ಸಂಚರಿಸಿತು.ವಿಕಾಸ ಅಕಾಡೆಮಿ ತಾಲೂಕು ಅಧ್ಯಕ್ಷ ಯಶವಂತ ಬಿರಾದಾರ, ಬಸವರಾಜ ಅಷ್ಟಗಿ, ಪಿಎಸ್‌ಐ ಚಂದ್ರಶೇಖರ ನಿರ್ಣೆ, ಗ್ರಾ.ಪಂ. ಮಾಜಿ ಅಧ್ಯಕ್ಷ ಶಿವರಾಜ ಝಲ್ಪೆ, ಗ್ರಾ.ಪಂ. ಸದಸ್ಯ ಸಂತೋಷ ಬಿರಾದಾರ, ಸಾಯಿನಾಥ ಕಾಂಬಳೆ, ಪಿಡಿಓ ರಾಜಕುಮಾರ ತಂಬಾಕೆ, ಪ್ರಶಾಂತ ಖಾನಾಪೂರೆ, ರಾಜಕುಮಾರ ಬಿರಾದಾರ, ಮುಖಂಡರಾದ ಬಸವರಾಜ ಪಾಟೀಲ್, ಶಿವಾನಂದ ವಡ್ಡೆ, ಅವಿನಾಶ ಶಿವಣಕರ, ಪ್ರವೀಣ ಪಾಟೀಲ್, ಚಂದ್ರಕಾಂತ ಸಂಗಮೆ, ಸಂತೋಷ ಸೋಲ್ಲಾಪೂರೆ, ಧನರಾಜ ಸೋಲ್ಲಾಪೂರೆ, ಸಂಗ್ರಾಮಪ್ಪಾ ರಾಂಪೂರೆ, ಪಂಡಿತ ಪಾಟೀಲ್, ದಯಾನಂದ, ಪ್ರಕಾಶ ಸೊಲ್ಲಾಪೂರೆ, ಪೂಜಾ ಜಗತಾಪ, ಹಾವಗಿ ಟೋಣ್ಣೆ, ಗಣೇಶ ಟೋಣ್ಣೆ, ಶರಣಪ್ಪ ಹಾಗೂ ವಿವಿಧ ಶಾಲಾ ಮಕ್ಕಳು, ಶಿಕ್ಷಕರು ಹಾಜರಿದ್ದರು.

--

ಚಿತ್ರ 22ಬಿಡಿಆರ್51:

ಕಮಲನಗರ ಪಟ್ಟಣದ ಅಲ್ಲಮಪ್ರಭು ವೃತ್ತದ ಬಳಿ ಭಾರತೀಯ ಸಂಸ್ಕೃತಿ ಉತ್ಸವ ಪ್ರಚಾರಾರ್ಥ ಬಸವ ರಥ ಸಂಚಾರಕ್ಕೆ ವಿಕಾಸ ಅಕಾಡೆಮಿ ಪದಾಧಿಕಾರಿ ಗಳು ಬುಧವಾರ ಸ್ವಾಗತಿಸಿ ಬರಮಾಡಿಕೊಂಡರು.

--

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''