ಕನ್ನಡಪ್ರಭ ವಾರ್ತೆ ಆಲೂರು
ಪಟ್ಟಣದ ಕಂದಾಯ ಇಲಾಖೆಗೆ ಭೇಟಿ ನೀಡಿದ ಗ್ರಾಮ ಆಡಳಿತ ಅಧಿಕಾರಿಗಳು ಸರ್ಕಾರವು ರೈತಪರ, ಸಮಾಜಮುಖಿ ಕೆಲಸಗಳಾದ ನಮೂನೆ 1ರಿಂದ 5 (ದುರಸ್ತಿ) ಇ ಆಫೀಸ್, ಪಹಣಿಗೆ ಆಧಾರ್ ಜೋಡಣೆ, ಲ್ಯಾಂಡ್ ಬೀಟ್ ಆಫ್ ಸಂಯೋಜನೆ, ನವೋದಯ, ಗರುಡ ಆಫ್, ಇ ಜನ್ಮ ತಂತ್ರಾಂಶಗಳ ಮೂಲಕ ಬಗರ್‌ಹುಕುಂ, ಹಕ್ಕುಪತ್ರ, ಬೆಳೆ ಸಂರಕ್ಷಣೆ, ( ಬೆಳೆ ಕಟಾವ್, ಮೊಬೈಲ್ ಆಪ್) ಪಿ.ಎಂ. ಕಿಸಾನ್ ವೆಬ್ಆಪ್, ಕೃಷಿ ಗಣತಿ, ನೀರಾವರಿ ಗಣತಿ, ದಿಶಾಂಕ್, ಸಿ- ವಿಜಯ್, ಹಾಗೂ ಇನ್ನೂ ಹತ್ತು ಹಲವಾರು ಕೆಲಸಗಳನ್ನು ಮೊಬೈಲ್ ಹಾಗೂ ಕಂಪ್ಯೂಟರ್ ಮೂಲಕ ಕೆಲಸ ನಿರ್ವಹಿಸಬೇಕಾದ ಅವಶ್ಯಕತೆಯಿರುತ್ತದೆ. ಆದ್ದರಿಂದ ಸದರಿ ಕೆಲಸ ನಿರ್ವಹಿಸಲು ಯಾವುದೇ ಮೂಲಭೂತ ಸೌಕರ್ಯಗಳನ್ನು ನೀಡದಿರುವುದು ಪ್ರಗತಿ ಹಿನ್ನೆಡೆಗೆ ಕಾರಣವಾಗಿದೆ. ಆದ್ದರಿಂದ ಈ ಎಲ್ಲಾ ಕೆಲಸಗಳ ನಿರ್ವಹಣೆಗೆ ಮೊಬೈಲ್, ಸಿಮ್ ಹಾಗೂ ದಿನ ಬಳಕೆಗೆ ಮೊಬೈಲ್, ಡಾಟಾ, ಲ್ಯಾಪ್‌ಟಾಪ್, ಪ್ರಿಂಟಿಂಗ್, ಸ್ಕ್ಯಾನರ್ ಸೌಲಭ್ಯ ಹಲವು ಕೆಲಸ ನಿರ್ವಹಣೆಗೆ ಮಾಸಿಕ ಹೆಚ್ಚುವರಿ ಭತ್ಯೆ 5000 ರು. ಗಳನ್ನು ನೀಡಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತೇವೆ.
ಈ ಸಂದರ್ಭದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಾದ ಅಭಿಷೇಕ್ ಎಂ.ಡಿ, ಸಂಜೀವ್ ಚೌಹಾಣ್, ದೇವೆಂದ್ರಪ್ಪ ಪೂಜಾರಿ, ರಾಘವೇಂದ್ರ ಭಂಡಾರಿ, ರವಿ ನಾಯ್ಕ್ ಜೆ. ಗೀತಾ ಸಿ.ವಿ. ಚಂದ್ರಶೇಖರ್ ಬಿ.ಎಸ್ ಹೇಮರಾಜ್, ಮನು, ಚಂದ್ರಶೇಖರ್, ರಂಗಸ್ವಾಮಿ ಕರಿಬಸವರಾಜು ಮುಂತಾದವರು ಉಪಸ್ಥಿತರಿದ್ದರು.