ಸರ್ವ ಸಮಾಜಗಳ ಸಭೆಯಲ್ಲಿ ಒಮ್ಮತದ ನಿರ್ಧಾರ । ಶ್ರಾವಣ ಮಾಸದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಅಡಿಗಲ್ಲು
ಕನ್ನಡಪ್ರಭ ವಾರ್ತೆ ಕಾರಟಗಿಇಲ್ಲಿನ ಕೋಟೆ ಪ್ರದೇಶದಲ್ಲಿ ಗ್ರಾಮ ದೇವತೆ ದ್ಯಾವಮ್ಮ ದೇವಿ ದೇವಸ್ಥಾನ ನಿರ್ಮಾಣಕ್ಕೆ ಮತ್ತು ಅದಕ್ಕೆ ಸಂಬಂಧ ಟ್ರಸ್ಟ್ ರಚನೆ ಮಾಡಲು ಮಂಗಳವಾರ ನಡೆದ ಸರ್ವ ಸಮಾಜಗಳ ಸಭೆ ಒಕ್ಕೂರಲಿನಿಂದ ತೀರ್ಮಾನ ಕೈಗೊಳ್ಳಲಾಯಿತು.
ಗ್ರಾಮ ದೇವತೆ ದೇವಸ್ಥಾನದ ಅವರಣದಲ್ಲಿ ಕರೆಯಲಾಗಿದ್ದ ಸರ್ವ ಸಮಾಜಗಳ ಬಹಿರಂಗ ಸಭೆಯಲ್ಲಿ ದೇವಸ್ಥಾನ ನಿರ್ಮಾಣ, ನಿರ್ವಹಣೆಗೆ ಸಂಬಂಧ ಸುದೀಘವಾಗಿ ಚರ್ಚಿಸಿದ ಬಳಿಕ ಬರುವ ಶ್ರಾವಣ ಮಾಸದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಅಡಿಗಲ್ಲಿಗೆ ಮುಹೂರ್ತ ನಿಗದಿ ಪಡಿಸುವುದು ಮತ್ತು ದೇವಸ್ಥಾನ ನಿರ್ವಹಣೆ ಮೇಲ್ಚಿಚಾರಣೆ ಮತ್ತು ನಿಗಾಕ್ಕೆ ಸರ್ವ ಜನಾಂಗದವರನ್ನು ಒಳಗೊಂಡ ಒಂದು ಟ್ರಸ್ಟ್ ರಚನೆ ಮಾಡಲು ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.ದೇವಸ್ಥಾನದ ಆವರಣದಲ್ಲಿ ಶೆಡ್‌ಹಾಕಿಕೊಂಡಿದ್ದ ಸುಮಾರು ೧೮ ಕುಟುಂಬಗಳಿಗೆ ದೇವಕ್ಯಾಂಪಿನ ಗುಡ್ಡದಲ್ಲಿ ನಿವೇಶನ ನಿಗದಿ ಪಡಿಸಲಾಗಿದ್ದು, ಅಲ್ಲಿ ಶೆಡ್ ನಿರ್ಮಾಣಕ್ಕೆ ಮತ್ತು ಆ ಪ್ರದೇಶದಲ್ಲಿ ಮೂಲ ಸೌಲಭ್ಯ ಒದಗಿಸಲು ತಹಸೀಲ್ದಾರ್ ಮತ್ತು ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳಬೇಕು. ಎರಡು ದಿನಗಳಲ್ಲಿ ಸಚಿವ ಶಿವರಾಜ್ ತಂಗಡಗಿ ಮತ್ತು ಮಾಜಿ ಸಚಿವ ನಾಗಪ್ಪ ಸಾಲೋಣಿ ಸೇರಿದಂತೆ ಇನ್ನು ಕೆಲವರಿಂದ ಸಲಹೆ ಸೂಚನೆ ಪಡೆದು ಒಂದು ಪಾರದರ್ಶಕವಾದಂಥ ಟ್ರಸ್ಟ್ ರಚನೆ ಮಾಡಲು ಸಭೆ ನಿರ್ಧರಿಸಿತು.
ನೈಜ ಫಲಾನುಭವಿಗಳಿಗೆ ಕೊಡಿ:ದೇವಸ್ಥಾನ ಸುತ್ತಲು ಇದ್ದ ಗುಡಿಸಲುಗಳನ್ನು ಈಗಾಗಲೇ ಒಕ್ಕಲು ಎಬ್ಬಿಸಲಾಗಿದ್ದು, ಕೆಲವರು ಬಸವೇಶ್ವರ ನಗರ, ರಾಜೀವಗಾಂಧಿ ನಗರ ಮತ್ತು ರಾಮನಗರದಲ್ಲಿ ಈಗಾಗಲೇ ಸರ್ಕಾರದಿಂದ ನಿವೇಶನ ಪಡೆದು ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಅಲ್ಲಿಗೆ ಹೋಗದೆ ಕೆಲವರು ದೇವಸ್ಥಾನದ ಆವರಣದಲ್ಲಿ ಠಿಕಾಣೆ ಹೂಡಿದ್ದರು. ಇಂಥವರಿಗೆ ಪುನಃ ಪುನರ್‌ವಸತಿ ಕಲ್ಪಿಸುವ ಪಟ್ಟಿಯಲ್ಲಿ ಹೆಸರು ಸೇರಿಸಲಾಗಿದೆ. ಅದಕ್ಕೆ ಅವಕಾಶ ನೀಡದಂತೆ ನೈಜ ಸಂತ್ರಸ್ತರಿಗೆ ಮಾತ್ರ ನಿವೇಶನ ಕೊಡಿ ಎನ್ನುವ ಕೂಗು ಸಭೆಯಲ್ಲಿ ಕೇಳಿ ಬಂತು.ದೇವಸ್ಥಾನದ ಅರ್ಚಕ ಕುಟುಂಬದ ಸದಸ್ಯ ವೀರಭದ್ರಪ್ಪ ಬಡಿಗೇರ್ ಮಾತನಾಡಿದರು.ಸರ್ವ ಸಮುದಾಯಗಳ ಸಭೆಯಲ್ಲಿ ವಿಶೇಷ ಎಪಿಎಂಸಿ ಮಾಜಿ ಅಧ್ಯಕ್ಷರಾದ ಶಶಿಧರಗೌಡ ಪಾಟೀಲ್ ಮತ್ತು ಶಿವರೆಡ್ಡಿ ನಾಯಕ್, ಪ್ರಮುಖರಾದ ಚೆನ್ನಬಸಪ್ಪ ಸುಂಕದ್, ವೀರೇಶ ಸಾಲೋಣಿ, ಕೆ. ಸಿದ್ದನಗೌಡ, ಬೂದಿ ಗಿರಿಯಪ್ಪ, ಜಿ. ಯಂಕನಗೌಡ, ಅಮರೇಶ್ ಕುಳಗಿ, ಪ್ರಹ್ಲಾದ ಜೋಶಿ, ಮರುಳಸಿದ್ದಯ್ಯಸ್ವಾಮಿ ಹಿರೇಮಠ, ನಾಗರಾಜ ಬಿಲ್ಗಾರ್ ಸೇರಿದಂತೆ ಇತರರು ಮಾತನಾಡಿದರು.
ಈ ಸಂದರ್ಭ ಪುರಸಭೆ ಸದಸ್ಯ ಎಚ್. ಈಶಪ್ಪ, ನಾಗರಾಜ ಅರಳಿ, ಶರಣಪ್ಪ ಪರಕಿ, ತಾಯಪ್ಪ ಕೋಟ್ಯಾಳ, ಸಂಜೀವಪ್ಪ ಸಾಲೋಣಿ, ನಾಗರಾಜ ಅರಳಿ, ಖಾಖಾ ಹುಸೇನ್ ಮುಲ್ಲಾ, ಅಯ್ಯಪ್ಪ ಉಪ್ಪಾರ, ಮರಿಯಪ್ಪ ಸಾಲೋಣಿ, ನಾರಾಯಣ ಈಡಿಗೇರ್, ಶರಣಯ್ಯಸ್ವಾಮಿ ಯರಡೋಣಿ, ಡಾ. ಶರಣಪ್ಪ ಮಾವಿನಮಡ್ಗು, ಶರಣು ನಗಾರಿ, ಶೇಷಗಿರಿ ಕಟ್ಟೆಮನಿ, ವೀರೇಶ್ ಪತ್ತಾರ, ಮಲ್ಲಪ್ಪ ಭಜಂತ್ರಿ, ಹನುಮೇಶ್ ವಡ್ಡರಹಟ್ಟಿ, ವಿವಿಧ ಸಂಘ-ಸಂಸ್ಥೆಗಳ, ಸಮಾಜಗಳ ಪ್ರಮುಖರು ಇದ್ದರು.