ಮುಂದುವರಿದ ಗ್ರಾಮೀಣ ಅಂಚೆ ನೌಕರರ ಮುಷ್ಕರ

KannadaprabhaNewsNetwork | Published : Dec 14, 2023 1:30 AM

ಸಾರಾಂಶ

ಗ್ರಾಮೀಣ ಅಂಚೆ ನೌಕರರ ಸೇವೆಯನ್ನು ಕಾಯಂ ಮಾಡುವಂತೆ ಹಾಗೂ ಕಮಲೇಶನ್ ಸಮಿತಿ ಶಿಫಾರಸು ಮಾಡಿರುವ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನಗರದ ಸಿಟಿ ಬಸ್ ನಿಲ್ದಾಣ ಬಳಿ ಇರುವ ಮುಖ್ಯ ಅಂಚೆಕಚೇರಿ ಮುಂದೆ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದಿಂದ ಆರಂಭವಾಗಿರುವ ಅನಿರ್ದಿಷ್ಟಾವಧಿ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಹಾಸನದ ಪ್ರಧಾನ ಅಂಚೆ ಕಛೇರಿಯ ಮುಂದೆ ವಿಭಾಗದ ನೂರಾರು. ಗ್ರಾಮೀಣ ಅಂಚೆ ನೌಕರರು ಎ.ಐ.ಜಿ.ಡಿ.ಎಸ್.ಯು.ಹಾಗೂ ಎನ್.ಯು.ಜಿ.ಡಿ.ಎಸ್.ಸದಸ್ಯರಿಂದ ಪ್ರತಿಭಟನೆ ನಡೆಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಹಾಸನ

ಗ್ರಾಮೀಣ ಅಂಚೆ ನೌಕರರ ಸೇವೆಯನ್ನು ಕಾಯಂ ಮಾಡುವಂತೆ ಹಾಗೂ ಕಮಲೇಶನ್ ಸಮಿತಿ ಶಿಫಾರಸು ಮಾಡಿರುವ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನಗರದ ಸಿಟಿ ಬಸ್ ನಿಲ್ದಾಣ ಬಳಿ ಇರುವ ಮುಖ್ಯ ಅಂಚೆಕಚೇರಿ ಮುಂದೆ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದಿಂದ ಆರಂಭವಾಗಿರುವ ಅನಿರ್ದಿಷ್ಟಾವಧಿ ಮುಷ್ಕರ ಬುಧವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.

ಇದೆ ಸಂದರ್ಭದಲ್ಲಿ ಎ.ಐ.ಜಿ.ಡಿ.ಎಸ್‌.ಯು. ಸಂಘಟನೆಯ ಅಧ್ಯಕ್ಷ ಜಿ.ಬಿ. ಕಾಳೇಗೇಗೌಡ ಮತ್ತು ಕಾರ್ಯದರ್ಶಿ ಕೆ.ಜೆ. ಶಿವಾಜಿ ಮಾಧ್ಯಮದೊಂದಿಗೆ ಮಾತನಾಡಿ, ಗ್ರಾಮೀಣ ಅಂಚೆ ನೌಕರರನ್ನು ಖಾಯಂ ಮಾಡುವಂತೆ ಹಾಗೂ ಕಮಲೇಶನ್ ಕಮಿಟಿ ಶಿಫಾರಸು ಮಾಡಿರುವ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರದ ವಿರುದ್ಧ ಹಾಸನದ ಪ್ರಧಾನ ಅಂಚೆ ಕಛೇರಿಯ ಮುಂದೆ ವಿಭಾಗದ ನೂರಾರು. ಗ್ರಾಮೀಣ ಅಂಚೆ ನೌಕರರು ಎ.ಐ.ಜಿ.ಡಿ.ಎಸ್.ಯು.ಹಾಗೂ ಎನ್.ಯು.ಜಿ.ಡಿ.ಎಸ್.ಸದಸ್ಯರಿಂದ ಪ್ರತಿಭಟನೆ ನಡೆಸಲಾಗುತ್ತಿದೆ.

ಪ್ರಮುಖ ಬೇಡಿಕೆಗಳೆಂದರೇ ೮ ಗಂಟೆಗಳ ಕೆಲಸ ನೀಡುವುದು ಮತ್ತು ಪಿಂಚಣಿ ಸೇರಿದಂತೆ ಎಲ್ಲ ಸವಲತ್ತಗಳನ್ನು ಒದಗಿಸಬೇಕು. ಸೇವಾ ಹಿರಿತನದ ಆಧಾರದ ಮೇಲೆ ೧೨-೨೪-೩೬ ಸೇವೆ ಸಲ್ಲಿಸಿದ ಜಿಡಿಎಸ್ ನೌಕರರಿಗೆ ವಿಶೇಷ ಇಂಕ್ರೀಮೆಂಟ್ ನೀಡಲು ಗಮನವಹಿಸಬೇಕು ಎಂದರು. ಅವೈಜ್ಞಾನಿಕ ಗುರಿ ನೀಡಿ ಮೇಳಗಳನ್ನು ನಡೆಸುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು. ಗುಂಪು ಇನ್ಸೂರೆನ್ಸ್ ಕವರೇಜಿ ರೂ ೫ ಲಕ್ಷದವರೆಗೆ ಹೆಚ್ಚಿಸಬೇಕು ಮತ್ತು ಅವೈಜ್ಞಾನಿಕ ಗುರಿ ಸಾಧಿಸದಿರುವ ಜಿಡಿಎಸ್ ನೌಕರರಿಗೆ ನೀಡುತ್ತಿರುವ ಕಿರುಕುಳವನ್ನು ನಿಲ್ಲಿಸುವಂತೆ ಒತ್ತಾಯಿಸಿದರು. ಜಿಡಿಎಸ್ ಗ್ರಾಚ್ಯುಟಿ ಹಣವನ್ನು ರು. ೫ ಲಕ್ಷಗಳವರೆಗೆ ಹೆಚ್ಚಿಸಿ ೧೮೦ ದಿನಗಳ ರಜೆ ಉಳಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ಜಿಡಿಎಸ್ ಮತ್ತು ಅವರ ಕುಟುಂಬದ ಸದಸ್ಯರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕೆಂಬುದು ನಮ್ಮ ಬೇಡಿಕೆ ಆಗಿದೆ ಎಂದು ತಮ್ಮ ಆಗ್ರಹವಾಗಿದೆ ಎಂದು ಹೇಳಿದರು. ಇದೆ ವೇಳೆ ಎ.ಐ.ಜಿ.ಡಿ.ಎಸ್‌.ಯು.ಸಂಘಟನೆಯ ಕಾರ್ಯಾಧ್ಯಕ್ಷರು ಎಚ್‌.ಇ. ಜಯಣ್ಣ, ಸಂಘಟನಾ ಕಾರ್ಯದರ್ಶಿ ದಿನೇಶ್‌, ಮಲ್ಲೇಶ್‌, ಸತೀಶ್‌, ವಾಸು, ವಿನೋದ್‌ ಕುಮಾರ್‌, ಮಧು, ಎನ್‌.ಯು.ಜಿ.ಡಿ.ಎಸ್‌.ಯು.ನ. ವಲಯ ಕಾರ್ಯದರ್ಶಿ ಇತರರು ಭಾಗವಹಿಸಿದ್ದರು.

Share this article