ರಾಮನಗರ: ನರೇಗಾ ಅನುಷ್ಠಾನದಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯದ ಗಮನ ಸೆಳೆದಿರುವ ರಾಮನಗರ ಜಿಲ್ಲೆ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತೆರಿಗೆ ವಸೂಲಿಯಲ್ಲೂ ಪ್ರಗತಿ ಪಥದತ್ತ ಸಾಗಿ ಮೊದಲ ಸ್ಥಾನದಲ್ಲಿದೆ.
ಪ್ರಸ್ತುತ ಆರ್ಥಿಕ ವರ್ಷ ಮುಗಿಯಲು ಇನ್ನೂ ಮೂರು ತಿಂಗಳು ಬಾಕಿಯಿದ್ದು, ಈಗಾಗಲೇ ಜಿಲ್ಲಾ ವ್ಯಾಪ್ತಿಯ 126 ಗ್ರಾಮ ಪಂಚಾಯಿತಿಗಳು ತೆರಿಗೆ ಸಂಗ್ರಹದಲ್ಲಿ ಶೇಕಡ 62.45ರಷ್ಟು ಗುರಿ ಸಾಧಿಸಿವೆ. ಅಂದರೆ 49.56 ಕೋಟಿ ರುಪಾಯಿ ನಿರೀಕ್ಷೆಯಲ್ಲಿ 30.95ಕೋಟಿ ರುಪಾಯಿಯಷ್ಟು ತೆರಿಗೆ ಸಂಗ್ರಹ ಮಾಡಲಾಗಿದೆ.
ತೆರಿಗೆ ವಸೂಲಿ ಮಾಡಿ ಆರ್ಥಿಕ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಗ್ರಾಪಂಗಳು ಅಸಡ್ಡೆ ತೋರುತ್ತಿರುವ ಆರೋಪ ಕೇಳಿ ಬರುತ್ತಿರುವಾಗಲೇ ಬಯಲುಸೀಮೆ ಜಿಲ್ಲೆಯ ಗ್ರಾಪಂಗಳು ದಾಖಲೆ ಮಟ್ಟದಲ್ಲಿ ತೆರಿಗೆ ಸಂಗ್ರಹ ಮಾಡಿರುವುದು ವಿಶೇಷ.ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಕಾಯ್ದೆ 1993 ಯನ್ವಯ ಗ್ರಾಪಂಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಕೃಷಿಯೇತರ ಆಸ್ತಿಗಳ ಮೇಲೆ ತೆರಿಗೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಗ್ರಾಪಂಗಳು ತಮ್ಮ ಸ್ವಂತ ಸಂಪನ್ಮೂಲಗಳನ್ನು ಕ್ರೋಡೀಕರಿಸಿ ಸ್ವಾವಲಂಬಿಗಳಾಗಬೇಕು ಎಂಬುದು ಸರ್ಕಾರದ ಆಶಯ. ಆದರೆ ಹೆಚ್ಚಿನ ಗ್ರಾಪಂಗಳು ತಮಗೆ ನೀಡಲಾದ ಅಧಿಕಾರವನ್ನು ಸಮರ್ಪಕವಾಗಿ ಬಳಸಿಕೊಳ್ಳದೆ ತೆರಿಗೆ ನಿರ್ಧರಣೆ, ಪರಿಷ್ಕರಣೆ ಹಾಗೂ ವಸೂಲಾತಿಯಲ್ಲಿ ನಿರ್ಲಕ್ಷ್ಯವಹಿಸಿದ್ದವು. ಆದರೀಗ ರಾಮನಗರ ಜಿಲ್ಲೆಯ 126 ಗ್ರಾಪಂಗಳು ಕಳೆದ 3 ವರ್ಷಗಳಿಗೆ ಹೋಲಿಕೆ ಮಾಡಿದರೆ ಅತಿ ಹೆಚ್ಚು ತೆರಿಗೆ ವಸೂಲಿ ಮಾಡಿವೆ. ಇದು ಉಳಿದ ಜಿಲ್ಲೆಗಳಿಗಿಂತ ಹೆಚ್ಚು ಎನ್ನುತ್ತಾರೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ ಅಧಿಕಾರಿಗಳು.
ಗ್ರಾಪಂಗಳ ತೆರಿಗೆ ವಸೂಲಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಹಾಗೂ ತೆರಿಗೆ, ದರ ಮತ್ತು ಇತರೆ ಶುಲ್ಕಗಳನ್ನು ವಸೂಲಿ ಮಾಡುವ ಸಲುವಾಗಿ ಜಾರಿಗೆ ತರಲಾಗಿರುವ ಪಿಒಎಸ್ (ಪಾಯಿಂಟ್ ಆಫ್ ಸೇಲ್ ) ಸಾಧನ (ಡಿವೈಸ್) ಬಳಕೆಯಲ್ಲಿ ರಾಮನಗರ ಜಿಲ್ಲೆ ರಾಜ್ಯದಲ್ಲಿ 2ರಿಂದ 3ನೇ ಸ್ಥಾನಕ್ಕೆ ಕುಸಿದಿದೆ.
ಈ ಸಾಧನವನ್ನು ಪರಿಚಯಿಸಿದ ಹೊಸದರಲ್ಲಿ ಜಿಲ್ಲೆಯ 126 ಗ್ರಾಮ ಪಂಚಾಯಿತಿಗಳಲ್ಲಿಯೂ ಬಳಕೆ ಮಾಡಿಕೊಂಡು ತೆರಿಗೆ ವಸೂಲಿ ಮಾಡಲಾಯಿತು. ಒಟ್ಟು 435 ವಹಿವಾಟು (ಟ್ರಾನ್ಸ್ ಆಕ್ಷನ್ ) ನಡೆಸಿ 2ನೇ ಸ್ಥಾನ ಪಡೆದಿತ್ತು. ಆದರೀಗ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಮೊದಲ ಎರಡು ಸ್ಥಾನಗಳಿದ್ದರೆ, ರಾಮನಗರ ಜಿಲ್ಲೆ 3ನೇ ಸ್ಥಾನ ಅಲಂಕರಿಸಿದೆ.ಕೋಟ್ ..............
- ದಿಗ್ವಿಜಯ್ ಬೋಡ್ಕೆ, ಸಿಇಒ, ಜಿಪಂ, ರಾಮನಗರ
ರಾಮನಗರ ತಾಲೂಕು ಹೆಚ್ಚು ತೆರಿಗೆ ಸಂಗ್ರಹ
ಗ್ರಾಪಂಗಳ ತೆರಿಗೆ ಸಂಗ್ರಹ ವಿವರ
ಗ್ರಾಪಂಗಳ.
ಬೇಡಿಕ.ಸಂಗ್ರ.
ಶೇ.ವಾರು ಪ್ರಗತಿಚನ್ನಪಟ್ಟ.
3.7,05,99,751.5.
3,60,177.6.51.09
ಕನಕಪು.4.
11,66,85,002.1.6,90,46,288.8.
59.17ಮಾಗಡ.
3.6,58,68,804.5.
2,96,83,041.4.45.06
ರಾಮನಗ.2.
24,25,02,979.3.17,47,21,265.0.
72.05---------------------------------------------------------------------------------------------------------
ಒಟ್ಟ.12.
49,56,56,537.5.30,95,21,772.9.
62.45---------------------------------------------------------------------------------------------------------
20ಕೆಆರ್ ಎಂಎನ್ 2,3.ಜೆಪಿಜಿ2.ರಾಮನಗರ ಜಿಪಂ ಕಚೇರಿ
3.ದಿಗ್ವಿಜಯ್ ಬೋಡ್ಕೆ, ಸಿಇಒ, ಜಿಪಂ, ರಾಮನಗರ.-------------------------------