ನಿವೃತ್ತ ಶಿಕ್ಷಕಿ ಎಚ್.ಎಸ್.ಶೋಭ ಅವರಿಗೆ ಗ್ರಾಮಸ್ಥರಿಂದ ಬೀಳ್ಕೊಡುಗೆ

KannadaprabhaNewsNetwork |  
Published : Jul 06, 2026, 02:00 AM IST
1ಕೆಎಂಎನ್ ಡಿ27 | Kannada Prabha

ಸಾರಾಂಶ

ಶೋಭಾ ಅವರು 2 ಬಾರಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದರು. ಶಿಕ್ಷಕರ ಪತ್ತಿನ ಸಹಾಕರ ಸಂಘದ ವತಿಯಿಂದಲು ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದು ಸಂಘ ಸಂಸ್ಥೆಗಳು ಆದರ್ಶ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಿದ್ದರು. ಶಿಕ್ಷಕ ವೃತ್ತಿ ಜೊತೆಗೆ ಶಾಸ್ತ್ರೀಯ ಸಂಗೀತ ಹಾಗೂ ಸುಗಮ ಸಂಗೀತದಲ್ಲಿ ಸೇವೆಸಲ್ಲಿಸುತ್ತಿದ್ದರು.

ಮಂಡ್ಯ:

ತಾಲೂಕಿನ ಸಂತೆಕಸಲಗೆರೆ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ 17 ವರ್ಷಗಳ ಕಾಲ ಸುದೀರ್ಘ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಎಚ್.ಎಸ್.ಶೋಭ ಅವರನ್ನು ಗ್ರಾಮಸ್ಥರು ಆತ್ಮೀಯವಾಗಿ ಅಭಿನಂದಿಸಿ ಬೀಳ್ಕೊಟ್ಟರು.

ಶಿಕ್ಷಕಿ ಶೋಭ ಅವರು 1998 ಡಿಸೆಂಬರ್ 28 ಗ್ರಾಮಕ್ಕೆ ಪ್ರಾಥಮಿಕ ಶಾಲೆಗೆ ಶಿಕ್ಷಕಿಯಾಗಿ ನೇಮಕಗೊಂಡು ಒಂದೂವರೆ ವರ್ಷಗಳ ಕಾಲ ಕೆಲಸ ನಿರ್ವಹಿಸಿ ಬಳಿಕ ಕಾರಸವಾಡಿ ಶಾಲೆಗೆ ವರ್ಗಾವಣೆಗೊಂಡು ಅಲ್ಲಿ 10 ವರ್ಷಗಳ ಸೇವೆಸಲ್ಲಿಸಿದ್ದರು.

ನಂತರ 2010 ಜುಲೈ 28 ರಂದು ಸಂತೆಕಸಲಗೆರೆ ಶಾಲೆಗೆ ಮತ್ತೆ ಆಗಮಿಸಿ ಸುಮಾರು 17 ವರ್ಷಗಳವರೆಗೆ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕಿಯಾಗದ್ದರು. ಗ್ರಾಮಸ್ಥರ ವಿಶ್ವಾಸಗಳಿಸಿ ಉತ್ತಮ ಸೇವೆ ಸಲ್ಲಿಸುತ್ತಿದ್ದರು.

ಶೋಭಾ ಅವರು 2 ಬಾರಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದರು. ಶಿಕ್ಷಕರ ಪತ್ತಿನ ಸಹಾಕರ ಸಂಘದ ವತಿಯಿಂದಲು ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದು ಸಂಘ ಸಂಸ್ಥೆಗಳು ಆದರ್ಶ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಿದ್ದರು. ಶಿಕ್ಷಕ ವೃತ್ತಿ ಜೊತೆಗೆ ಶಾಸ್ತ್ರೀಯ ಸಂಗೀತ ಹಾಗೂ ಸುಗಮ ಸಂಗೀತದಲ್ಲಿ ಸೇವೆಸಲ್ಲಿಸುತ್ತಿದ್ದರು.

ಶಿಕ್ಷಕಿ ಎಚ್.ಎಸ್.ಶೋಭ ಅವರನ್ನು ಶಾಲಾ ಶಿಕ್ಷಕರ ವೃಂದ, ಅಭಿವೃದ್ಧಿ ಸಮಿತಿ, ಹಿರಿಯ ವಿದ್ಯಾರ್ಥಿಗಳ ಬಳಗ, ಶಿವಗಂಗಾ ಸಾಂಸ್ಕೃತಿಕ ಯುವಕ ಸಂಘ ಹಾಗೂ ಗ್ರಾಮಸ್ಥರು ಅಭಿನಂದಿಸಿ ಬೀಳ್ಕೊಡುಗೆ ನೀಡಿದರು.

ಈ ವೇಳೆ ಮುಖ್ಯ ಶಿಕ್ಷಕಿ ಆಶಾಮಣಿ, ಶಿಕ್ಷಕರಾದ ಸಿಆರ್ ಪಿ ಕೊತ್ತತ್ತಿ ಪಾಪಣ್ಣ, ಎಸ್ಟಿಎಂಸಿ ಅಧ್ಯಕ್ಷ ಸಿದ್ದರಾಜು ಹಾಗೂ ಸದಸ್ಯರು ಪ್ರೌಢಶಾಲಾ ಶಿಕ್ಷಕ ಪರಮೇಶ್, ನಿವೃತ್ತ ಶಿಕ್ಷಕ ಅರ್ಕೇಶ್ವರ್, ನಟೇಶ್, ಸುನಿಲ್, ರಾಜಣ್ಣ, ಶಿವಕುಮಾರ್ ಮತ್ತಿತ್ತರರು ಇದ್ದರು.

ಯುವ ಪರಿಷತ್ ಅಧ್ಯಕ್ಷರಾಗಿ ಹರೀಶ್ ಬಾಣಸವಾಡಿ ಆಯ್ಕೆಮಂಡ್ಯ: ತಾಲೂಕು ಯುವ ಪರಿಷತ್ ಅಧ್ಯಕ್ಷರಾಗಿ ಹರೀಶ್ ಬಾಣಸವಾಡಿ ಅವಿರೋಧವಾಗಿ ಆಯ್ಕೆಯಾದರು.ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಯುವ ಪರಿಷತ್ ಅದ್ಯಕ್ಷ ಎನ್.ಪರಮೇಶ್ ಚಿಕ್ಕಗಾಡಿಗನಹಳ್ಳಿ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಯುವ ಪರಿಷತ್ ರಚನಾ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆಗೊಂಡರು. ಯುವಜನ ಚಟುವಟಿಕೆಗಳನ್ನು ಸಕ್ರಿಯಗೊಳಿಸಲು ರಾಷ್ಟ್ರೀಯ ಯುವನೀತಿ ಅನ್ವಯ ಕಾರ್ಯನಿರ್ವಹಿಸಲು ಸಭೆ ನಿರ್ಣಯಿಸಿತು.

ಸಭೆಯಲ್ಲಿ ಪದಾಧಿಕಾರಿಗಳಾದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಕೆ.ಪಿ.ಆರುಣಕುಮಾರಿ, ಟಿ.ಎಂ.ನಾಗರಾಜು, ಸಂತೆಕಸಲಗೆರೆ ಬಸವರಾಜು, ಖಜಾಂಚಿ ಸೌಂದರ್ಯ, ಅಂತರಾಷ್ಟ್ರೀಯ ಜನಪದ ಕಲಾವಿದರಾದ ಸಬ್ಬನಹಳ್ಳಿ ರಾಜು, ಮೇಳಾಪುರ ಜಯರಾಂ, ಮಾರ್ಕಾಲು ದೇವರಾಜು, ನಿರುಪಮಾ, ಜಯಮ್ಮ , ರಾಮಕೃಷ್ಣ, ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಬೆಳಗಾವಿಗೆ ಆರ್‌ಎಸ್‌ಎಸ್‌ಸರಸಂಘಚಾಲಕ ಭಾಗವತ್‌
ಕಡೂರು ತಾಲೂಕು ಕಚೇರಿಗೆ ರಾಜೇಂದ್ರಕುಮಾರ್ ಕಠಾರಿಯಾ ಭೇಟಿ