ನಾಕೂರು ಶಿರಂಗಾಲ ಗ್ರಾಮಸಭೆಯಲ್ಲಿ ಅಧಿಕಾರಿಗಳಿಗೆ ಗ್ರಾಮಸ್ಥರ ಧಿಕ್ಕಾರ

KannadaprabhaNewsNetwork | Published : Dec 25, 2024 12:46 AM

ಸಾರಾಂಶ

ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ೨೦೨೪-೨೫ನೇ ಸಾಲಿನ ಗ್ರಾಮ ಸಭೆಗೆ ಪ್ರಮುಖ ಇಲಾಖೆ ಅಧಿಕಾರಿಗಳು ಗೈರು ಹಾಜಾರಾದ ಹಿನ್ನೆಲೆಯಲ್ಲಿ ಸಭೆಗೆ ಆಗಮಿಸಿದ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳಿಗೆ ಧಿಕ್ಕಾರ ಹಾಕಿ ಹೊರ ನಡೆದ ಘಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ೨೦೨೪-೨೫ನೇ ಸಾಲಿನ ಗ್ರಾಮ ಸಭೆಗೆ ಪ್ರಮುಖ ಇಲಾಖೆ ಅಧಿಕಾರಿಗಳು ಗೈರು ಹಾಜಾರಾದ ಹಿನ್ನೆಲೆಯಲ್ಲಿ ಸಭೆಗೆ ಆಗಮಿಸಿದ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳಿಗೆ ಧಿಕ್ಕಾರ ಹಾಕಿ ಹೊರ ನಡೆದ ಘಟನೆ ನಡೆಯಿತು.

ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ಗ್ರಾಮ ಸಭೆ ಪಂಚಾಯಿತಿ ಅಧ್ಯಕ್ಷ ಮಂದೋಡಿ ಜಗನಾಥ ಅಧ್ಯಕ್ಷತೆಯಲ್ಲಿ ಮಂಗಳವಾರ ನಾಕೂರು ಶಿರಂಗಾಲ ಕಾನ್‌ಬೈಲು ಸರ್ಕಾರಿ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಸಭೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂದೋಡಿ ಜಗನ್ನಾಥ, ಉಪಾಧ್ಯಕ್ಷ ಸತೀಶ, ಸದಸ್ಯರಾದ ಕೊಳಂಬೆ ಸುಭಾಶ್, ಪ್ರೇಮ, ಬಿ.ಜಿ.ರಮೇಶ್. ಸೀತೆ, ರಾಧಾಮಣಿ, ಅರುಣ ಕುಮಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೂಳಪ್ಪ ಕೂತಿನ ಸಮಯಕ್ಕೆ ಸರಿಯಾಗಿ ಆಗಮಿಸಿದ್ದರು. ಗ್ರಾಮಸ್ಥರು ಸಹ ಅಧಿಕ ಸಂಖ್ಯೆಯಲ್ಲಿ ಸೇರಿದ್ದರು.

ಪ್ರಮುಖ ಇಲಾಖೆಯಾದ ಕಂದಾಯ ಇಲಾಖೆ, ನೀರಾವರಿ, ಆಹಾರ ಮತ್ತು ನಾಗರಿಕ ಪೂರೈಕೆ, ಅರಣ್ಯ ಇಲಾಖೆ, ಆದಿಕಾರಿಗಳು ಗೈರಾಗಿದ್ದರಿಂದ ಗರಂ ಆದ ಗ್ರಾಮಸ್ಥರು ಸಭೆ ಮುಂದೂಡಲು ಆಗ್ರಹಿಸಿದರು.

ಅಧ್ಯಕ್ಷ ಜಗನಾಥ್ ಮಾತನಾಡಿ, ಆಯಾ ಇಲಾಖೆ ಅಧಿಕಾರಿಗಳಿಗೆ ಇಂದಿನ ಸಭೆಯ ಗ್ರಾಮಸ್ಥರ ಆಹ್ವಾನವನ್ನು ಕಳುಹಿಸಿ ಅದನ್ನು ಅನುಷ್ಠಾನಗೊಳಿಸುವ ಎಂದು ಸಭೆಗೆ ತಿಳಿಸಿದರು. ಗ್ರಾಮಸ್ಥರಾದ ರಾಮಯ್ಯ, ಅಂಬೆಕಲ್ ಚಂದ್ರು. ಶಾಂತಪ್ಪ ಮಾತನಾಡಿ ಆಹಾರ ಇಲಾಖೆ, ಕುಡಿಯುವ ನೀರಿನ ಸಮಸ್ಯೆ ಇತರ ಅರಣ್ಯ ಇಲಾಖೆ, ರಸ್ತೆ ಸಮಸ್ಯೆಗಳು ಇದ್ದು ಅಧಿಕಾರಿಗಳು ಇಲ್ಲದೆ ಸಭೆ ಸಡೆಸಿ ಪ್ರಯೋಜನವಿಲ್ಲ ಎಂದು ಸಭೆ ಮುಂದೂಡಿ ಎಂದು ಗ್ರಾಮಸ್ಥರು ಒಕ್ಕೊರಲಿನಿಂದ ಅಧಿಕಾರಿಗಳಿಗೆ ದಿಕ್ಕಾರ ಕೂಗಿ ಸಭೆ ನಡೆಸದಂತೆ ಆಗ್ರಹಿಸಿ ಹೊರ ನಡೆದರು.

ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಸಹಾಯಕ ಅಭಿಯಂತರ ಫಾಯಜ್ ಆಹ್ಮದ್ ಮಾತನಾಡಿ, ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಗೆ ಸರ್ಕಾರದಿಂದ ರಸ್ತೆ, ಕೆರೆ, ಅಂಗನವಾಡಿ ಕೇಂದ್ರ ದುರಸ್ತಿ, ತಡೆಗೋಡೆ ಸೇರಿದಂತೆ ೫೮.೫ ಲಕ್ಷ ರು. ಕ್ರಿಯಾಯೋಜನೆಗೆ ಅನುಮೋದನೆ ಸಿಕ್ಕಿದೆ ಶಾಸಕರು ಸದ್ಯದಲ್ಲೆ ಈ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆಂದು ತಿಳಿಸಿದರು. ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ಇಂಜಿನಿಯಾರ್ ವಿಷ್ಣು, ನೋಡಲ್ ಅಧಿಕಾರಿ, ಕಾನ್‌ಬೈಲು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಕೆ.ಮೂರ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾನ್ಬೆö ಬೈಲು ಸರಖರ ಪ್ರೌಡ ಶಾಲೆ ಮುಖ್ಯ ಶಿಕ್ಷಕ ಕೆ.ಮೂರ್ತಿ ಮತ್ತಿತರರು ಹಾಜರಾಗಿದ್ದರು.

Share this article