ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಹೊಸೂರು ಹೋಬಳಿಯ ಬೆಳಗೆರೆ ಗ್ರಾಮದಲ್ಲಿ ಶತಮಾನದಷ್ಟು ಹಳೆಯದಾದ ಕೆರೆ ಇದೆ, ಈಗ ಕೆರೆಯ ಜಾಗದ ಪಹಣಿಯಲ್ಲಿ ಖಾಸಗಿ ವ್ಯಕ್ತಿಗಳ ಹೆಸರು ಉಲ್ಲೇಖವಾಗಿದೆ. ಈ ಪಹಣಿದಾರರು ಸರ್ಕಾರಿ ಕೆರೆ ಜಾಗವನ್ನು ಮಾರಾಟಕ್ಕಿಟ್ಟಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಸರ್ಕಾರಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ
ಈ ಕೆರೆಯ ಅಭಿವೃದ್ಧಿಗಾಗಿ ಸರ್ಕಾರದ ವತಿಯಿಂದ ಕೆರೆ ಕಟ್ಟೆಯ ನಿರ್ಮಾಣಕ್ಕೆ ಸುಮಾರು 10 ಲಕ್ಷ ರು.ಗಳು, ಕೋಡಿ ನಿರ್ಮಾಣಕ್ಕೆ 2 ಲಕ್ಷ ರುಪಾಯಿ, ಕೆರೆ ತೂಬು ನಿರ್ಮಾಣಕ್ಕೆ 1ಲಕ್ಷ ರುಪಾಯಿಗಳನ್ನು ವೆಚ್ಚ ಮಾಡಿ ನಿರ್ಮಾಣವಾಗಿದೆ. ಪಂಚಾಯಿತಿಯಿಂದಲೂ ಕೂಡ ನರೇಗಾಯೋಜನೆ ಅಡಿಯಲ್ಲಿ, 2016-17ರಲ್ಲಿ ಸಸಿನೆಡಲು 10ಲಕ್ಷರೂಪಾಯಿಗಳು 2018-19 ಗೋಕುಂಟೆ ಕಾಮಗಾರಿಗೆ 20 ಲಕ್ಷ ರು.ಗಳನ್ನು ನೀಡಲಾಗಿದೆ ಎಂದರು.ಅಲ್ಲದೆ ಈ ಕೆರೆಯಲ್ಲಿ, ಲೋಕೋಪಯೋಗಿ ಇಲಾಖೆಯಡಿಯಲ್ಲಿ ಗ್ರಾಮದ ಕುಡಿಯುವ ನೀರಿಗಾಗಿ 15 ಲಕ್ಷ ರು. ವೆಚ್ಚದಲ್ಲಿ 8 ಬಾವಿಗಳನ್ನು ಕೊರೆಸಲಾಗಿದೆ. 2024-25ಜಲಜೀವನ್ ಮಿಷನ್ ವತಿಯಿಂದ ಮನೆ-ಮನೆಗೆ ಕೊಳಾಯಿ ಮತ್ತು ನೀರು ಯೋಜನೆಗೆ ಕೊಳವೆ ಬಾವಿಯನ್ನು ಕೂಡ ಇದೇ ಕೆರೆಯಲ್ಲಿ ಕೊರೆಸಲಾಗಿದೆ ಎಂದರು. 500 ಎಕರೆಗೆ ನೀರಾವರಿ
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಮಹೇಶ್.ಎಸ್. ಪತ್ರಿ, ಈ ಕೆರೆ ಸಂಬಂಧ ಕೆಲವು ಕಾನೂನು ತೊಡಕುಗಳಿದ್ದು, ದಾಖಲೆಗಳನ್ನು ಪರಿಶೀಲಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ನಾಗೇಶ್, ಶಾಂತರಾಜು, ವೆಂಕಟ ಸ್ವಾಮಿ, ಶಶಿಧರ್, ಕೆಂಚಣ್ಣ, ಶರತ್ ತಿಪ್ಪಣ್ಣ, ನಾಗಣ್ಣ, ಶಿವಕುಮಾರ್, ಭಾಗ್ಯಮ್ಮ, ಲತಾ, ಮಂಜುಳಾ, ಲಕ್ಷ್ಮೀ ದೇವಮ್ಮ ಮತ್ತಿತರರು ಪಾಲ್ಗೊಂಡಿದ್ದರು.