ಮುಂದಿನ ದಿನಗಳಲ್ಲಿ 100ನೇ ವರ್ಷದ ಮಹೋತ್ಸವವನ್ನು ಗ್ರಾಮಸ್ಥರೆಲ್ಲರೂ ಒಗ್ಗಟ್ಟಿನಿಂದ ವಿಶೇಷವಾಗಿ ಆಚರಿಸಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಕರೆ ನೀಡಿದರು.
ಬೀಕನಹಳ್ಳಿ ಚಾಮುಂಡೇಶ್ವರಿ ದೇವಾಲಯದಲ್ಲಿ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಅವರು ಮಾತನಾಡಿದರು.
ಮೈಸೂರಿನ ದಸರಾ ಮಹೋತ್ಸವದಲ್ಲಿ ನಡೆವ ಚಾಮುಂಡೇಶ್ವರಿ ಆರಾಧನೆ ಮತ್ತು ಅಂಬು ಹೊಡೆಯುವ ಸಂಪ್ರದಾಯದ ಮಾದರಿಯಲ್ಲಿ ಬೀಕನಹಳ್ಳಿಯಲ್ಲಿಯೂ ಭಕ್ತಿಭಾವದಿಂದ ಉತ್ಸವ ಆಚರಿಸಲಾಗುತ್ತಿದೆ ಎಂದರು.
ಪೌರಾಣಿಕ ನಂಬಿಕೆಯಂತೆ ದುಷ್ಟಶಕ್ತಿಗಳ ಸಂಹಾರ ಮತ್ತು ಧರ್ಮದ ವಿಜಯದ ಸಂಕೇತವಾಗಿ ನವರಾತ್ರಿ ಆಚರಿಸಲಾಗುತ್ತದೆ. ಒಂಬತ್ತು ದಿನ ದೇವಿಯ ವಿವಿಧ ರೂಪಗಳನ್ನು ಆರಾಧಿಸಿ ವಿಜಯದಶಮಿಯಂದು ವಿಜಯೋತ್ಸವ ಆಚರಿಸಲಾಗುತ್ತದೆ.
ಇದೇ ಆಶಯದಂತೆ ಸಮಾಜದಲ್ಲಿನ ದುಷ್ಟ ಪ್ರವೃತ್ತಿಗಳು ದೂರವಾಗಿ, ಜನರಿಗೆ ಉತ್ತಮ ಬದುಕು ದೊರೆಯಲಿ ಎಂದು ಆಶಿಸಿದರು.
ಚಾಮುಂಡೇಶ್ವರಿ ಕ್ಷೇತ್ರದ ದಸರಾ ಮಹೋತ್ಸವವು ಭಕ್ತಿ, ಸಂಪ್ರದಾಯ ಮತ್ತು ಗ್ರಾಮೀಣ ಸಾಂಸ್ಕೃತಿಕ ವೈಭವದ ಪ್ರತೀಕ. ಈ ಪರಂಪರೆ ಮುಂದಿನ ಪೀಳಿಗೆಗೂ ಪರಿಚಯಿಸಿ, ಗ್ರಾಮಸ್ಥರ ಸಹಕಾರದಿಂದ ಇನ್ನಷ್ಟು ವಿಜೃಂಭಣೆಯಿಂದ ಆಚರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷ ಬಿ.ಪಿ.ನಂಜಪ್ಪ, ಉಪಾಧ್ಯಕ್ಷ ಗುರುಬಸಪ್ಪ, ಕಾರ್ಯದರ್ಶಿ ಬಿ.ಎಂ.ಯೋಗಾನಂದ್, ಖಜಾಂಚಿ ಬಿ.ಹೆಚ್.ಸೋಮೇಗೌಡ, ಸದಸ್ಯರಾದ ಬಿ.ಹೆಚ್.ನಂಜುಂಡಪ್ಪ, ಬಿ.ಸಿ.ಗುರುಸಿದ್ಧಪ್ಪ, ಬಿ.ವಿ.ಯತಿರಾಜ್, ಎಂ.ಲೋಕನಾಥ್, ರಂಗಪ್ಪ, ಬಿ.ಎಂ.ನಾಗರಾಜ್, ಬಿ.ಎಸ್.ಪರಮೇಶ್ವರಪ್ಪ, ಬಿ.ಹೆಚ್.ವಿಜಯಕುಮಾರ್, ಚಂದ್ರಚಾರ್, ಮಲ್ಲಿಕಾರ್ಜುನ್, ಬಿ.ಎನ್.ನಾಗಭೂಷಣ, ಲಲಿತ ಬಸವರಾಜಪ್ಪ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.