ತಾಯ್ನಾಡಿಗೆ ಆಗಮಿಸಿದ ಯೋಧನನ್ನು ಅದ್ಧೂರಿ ಮೆರವಣಿಗೆ ಮೂಲಕ ಸ್ವಾಗತಿಸಿದ ಗ್ರಾಮಸ್ಥರು

KannadaprabhaNewsNetwork |  
Published : Oct 03, 2026, 02:30 AM IST
ಗದಗ ತಾಲೂಕಿನ ಹುಯಿಲಗೋಳ ಗ್ರಾಮದ ನಿವಾಸಿ, ಭಾರತೀಯ ಸೈನ್ಯದಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿ, ಸ್ವ-ಗ್ರಾಮಕ್ಕೆ ಆಗಮಿಸಿದ ಮಾಜಿ ಸೈನಿಕ ರಹಿಮಾನ ಎಂ.ಹೆಬ್ಬಳ್ಳಿ ಅವರನ್ನ ಗೆಳೆಯರ ಬಳಗ ಹಾಗೂ ಗ್ರಾಮಸ್ಥರು ಅದ್ದೂರಿಯಾಗಿ ಬರಮಾಡಿಕೊಂಡರು. | Kannada Prabha

ಸಾರಾಂಶ

ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ರಹಿಮಾನ ಎಂ. ಹೆಬ್ಬಳ್ಳಿ ಅವರು ಆಗಮಿಸುತ್ತಿದ್ದಂತೆ ಅಲ್ಲಿ ನೆರೆದಿದ್ದ ಶಾಲೆಯ ವಿದ್ಯಾರ್ಥಿಗಳು, ಶಾಲಾ ಶಿಕ್ಷಕ ವರ್ಗ, ಯುವಕರು, ಗ್ರಾಮಸ್ಥರು ಹಾಗೂ ಗೆಳೆಯರು ಹೂಮಳೆಗರೆದು ಸಂಭ್ರಮದಿಂದ ಸ್ವಾಗತಿಸಿದರು.

ಗದಗ: ತಾಲೂಕಿನ ಹುಯಿಲಗೋಳ ಗ್ರಾಮದ ನಿವಾಸಿ, ಭಾರತೀಯ ಸೈನ್ಯದಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿ, ಸ್ವ-ಗ್ರಾಮಕ್ಕೆ ಆಗಮಿಸಿದ ಮಾಜಿ ಸೈನಿಕ ರಹಿಮಾನ ಎಂ. ಹೆಬ್ಬಳ್ಳಿ ಅವರನ್ನು ಗೆಳೆಯರ ಬಳಗ ಹಾಗೂ ಗ್ರಾಮಸ್ಥರು ಅದ್ಧೂರಿಯಾಗಿ ಬರಮಾಡಿಕೊಂಡರು.

ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ರಹಿಮಾನ ಎಂ.ಹೆಬ್ಬಳ್ಳಿ ಅವರು ಆಗಮಿಸುತ್ತಿದ್ದಂತೆ ಅಲ್ಲಿ ನೆರೆದಿದ್ದ ಶಾಲೆಯ ವಿದ್ಯಾರ್ಥಿಗಳು, ಶಾಲಾ ಶಿಕ್ಷಕ ವರ್ಗ, ಯುವಕರು, ಗ್ರಾಮಸ್ಥರು ಹಾಗೂ ಗೆಳೆಯರು ಹೂ ಮಳೆಗರೆದು ಸಂಭ್ರಮದಿಂದ ಸ್ವಾಗತಿಸಿದರು.

ಅಲ್ಲಿಂದ ತೆರೆದ ಜೀಪಿನಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಮನೆಯವರೆಗೆ ಕರೆದೊಯ್ದರು. ಮಾರ್ಗ ಮಧ್ಯೆ ನಾಡಕವಿ ಹುಯಿಲಗೋಳ ನಾರಾಯಣರಾವ್, ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ನಮನ ಸಲ್ಲಿಸಿದರು. ಜೊತೆಗೆ ಗ್ರಾಮದ ಶ್ರೀ ಸೂಗೀರೇಶ್ವರ ದೇವಸ್ಥಾನ, ಶ್ರೀ ದುರ್ಗಾದೇವಿಯರ ದೇವಸ್ಥಾನ, ಶ್ರೀ ಮಾರುತಿ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ದರ್ಶನಾಶೀರ್ವಾದ ಪಡೆದರು.

ರಹಿಮಾನ ಹೆಬ್ಬಳ್ಳಿ ಅವರನ್ನು ಕುಟುಂಬಸ್ಥರು ಆರತಿ ಬೆಳಗಿ, ಮನೆಗೆ ಬರಮಾಡಿಕೊಂಡರು. ಅವರು ಜಮ್ಮು-ಕಾಶ್ಮೀರ, ಪಂಜಾಬ, ರಾಜಸ್ಥಾನ ಸೇರಿ ದೇಶದ ವಿವಿಧೆಡೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಈ ವೇಳೆ ಯುವಕರಾದ ಚಂದ್ರು ಹಂಚಿನಾಳ, ಮುತ್ತು ಪಡೇಸೂರ, ಚಂದ್ರು ಪೂಜಾರ, ಮಂಜುನಾಥ ಹುಯಿಲಗೋಳ, ಹುಸೇನಸಾಬ ಕುರಹಟ್ಟಿ, ಖಾದರಸಾಬ ಬೂದಿಹಾಳ, ಮಹಮ್ಮದಲಿ ಕೌತಾಳ, ರಮೇಶ ಹೊಸಮನಿ, ದೇವು ಹುಯಿಲಗೋಳ, ಶಿವರಾಯಪ್ಪ ಯಲಿಗಾರ, ಜಗದೀಶ ಹೊಸಳ್ಳಿ, ಶರಣಪ್ಪ ಹುಯಿಲಗೋಳ, ಶರಣಪ್ಪ ಕಡಿಯವರ, ರಮೇಶ ಕಡಿಯವರ, ರಂಗನಾಥ ಕಡಿಯವರ, ಹೇಮಂತ ದಾಸರ, ಮುತ್ತು ಅಂಗಡಿ, ಮಹೇಶ ಹಾಳಕೇರಿ, ಮಹೇಶಗೌಡ ಪಾಟೀಲ, ಹುಚ್ಚನಗೌಡ ಪಾಟೀಲ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಬಸಲಿಂಗಪ್ಪ ಮುಂಡರಗಿ, ವಿಶ್ವನಾಥ ನಾಯ್ಕರ, ಡಿ.ಎಸ್.ದಿಡ್ಡಿಮನಿ ಸೇರಿ ಮಾಜಿ ಸೈನಿಕರು, ವೀರ ನಾರಿಯರು ಇದ್ದರು.

ತಮ್ಮ ಐದು ಜನ ಮಕ್ಕಳಲ್ಲಿ ನಾಲ್ವರು ಭಾರತೀಯ ಸೇನೆಯಲ್ಲಿದ್ದಾರೆ. ರಹಿಮಾನ ಸೇರಿ ಇದೀಗ ಇಬ್ಬರು ಮಕ್ಕಳು ಮಾಜಿ ಸೈನಿಕರಾಗಿದ್ದು, ಮತ್ತಿಬ್ಬರು ಇನ್ನೂ ಸೇವೆಯಲ್ಲಿದ್ದಾರೆ. ರಹಿಮಾನ ಅವರನ್ನು ಅವರ ಸ್ನೇಹಿತರು, ಗ್ರಾಮಸ್ಥರು ಅದ್ದೂರಿ ಮೆರವಣಿಗೆ ಮಾಡಿ ಸ್ವಾಗತಿಸಿದ್ದು ಬಹಳ ಖುಷಿ ತಂದಿದೆ. ಅವರ ಪ್ರೀತಿ ಬೆಲೆಕಟ್ಟಲಾಗದ್ದು ಎಂದು ಮಾಜಿ ಸೈನಿಕ ರಹಿಮಾನ ಅವರ ತಂದೆ ಮೌಲಾಸಾಬ ಅವರು ಭಾವುಕರಾಗಿ ಅಭಿಪ್ರಾಯ ಹಂಚಿಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮುದ್ರದ ಮೀನು ಹಳ್ಳದಲ್ಲಿ ಬೇಟೆ ಕೇಣಿಯಲ್ಲಿ ಕೊಕ್ಕರಾ ಮೀನುಗಳ ಸುಗ್ಗಿ
ಯಲ್ಲಾಪುರದ 5 ಆಯುಷ್ಮಾನ್ ಆರೋಗ್ಯ ಕೇಂದ್ರ ಮುಚ್ಚಲು ಆದೇಶ