ರಾಮನಗರ: ಗ್ರಾಮ ಪಂಚಾಯಿತಿ ದೇವಾಲಯವಿದ್ದಂತೆ. ಜನರ ಕಷ್ಟ ಸುಖ ಅಹವಾಲು ಕೇಳುವ ಸ್ಥಳವಾಗಿದೆ. ಭೂಮಿ ಪೂಜೆಯಾದ ಕೆಲವೇ ತಿಂಗಳಲ್ಲಿ ನವೀನ ರೀತಿಯಲ್ಲಿ ಗ್ರಾಪಂ ಕಚೇರಿ ಕಟ್ಟಡ ನಿರ್ಮಾಣದಲ್ಲಿ ಎಲ್ಲರ ಶ್ರಮವಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.
ಗ್ರಾಪಂ ಅಧ್ಯಕ್ಷೆ ಸುನೀತಾನಾಗರಾಜ್ ಸಿಂಗ್ ಮಾತನಾಡಿ, ಗ್ರಾಪಂ ಕಟ್ಟಡ ವಿಭೂತಿಕೆರೆಯಲ್ಲಿ ಅವಶ್ಯಕತೆ ಇತ್ತು. ಇದನ್ನು ಮನಗಂಡು ಆಡಳಿತ ಮಂಡಳಿ ಎಲ್ಲಾ ಸದಸ್ಯರು ಮತ್ತು ಗ್ರಾಮಸ್ಥರ ಸಹಕಾರ, ಸರ್ಕಾರ ಮತ್ತು ಶಾಸಕರ ಅನುದಾನದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗಿದೆ. ಸಹಕರಿಸಿದ ಗ್ರಾಪಂ, ತಾಪಂ, ಜಿಪಂ ಅಧಿಕಾರಿ ವರ್ಗಕ್ಕೆ ಗ್ರಾಪಂ ವ್ಯಾಪ್ತಿಯ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಚನ್ನಪಟ್ಟಣ ಬೇವೂರು ಮಠದ ಶ್ರೀ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಗ್ರಾಮಗಳ ಅಭಿವೃದ್ಧಿಗೆ ಗ್ರಾಪಂಗಳು ಅವಶ್ಯಕ. ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯ. ವಿಭೂತಿಕೆರೆ ಗ್ರಾಪಂ ಅಭಿವೃದ್ಧಿಯಲ್ಲಿ ತನ್ನದೇ ಆದ ಛಾಪ ಮೂಡಿಸಿದೆ. ಶೀಘ್ರವಾಗಿ ಕೆಲಸ ಕಾರ್ಯಗಳಿಂದ ಗ್ರಾಮಸ್ಥರ ಮನಗೆದ್ದಿದೆ. ಇನ್ನು ಹೆಚ್ಚಿನ ಅಭಿವೃದ್ಧಿ ಕೆಲಸ ಕಾರ್ಯಕ್ಕೆ ನೂತನ ಕಟ್ಟಡ ಉಪಯೋಗವಾಗಲಿದೆ ಎಂದರು.ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಕೆ.ರಾಜು, ತಾಲೂಕು ಅಧ್ಯಕ್ಷ ವಿ.ಎಚ್.ರಾಜು, ಪ್ರಾಧಿಕಾರ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ಪಿಡಿಒ ಬಿ.ಕೆ.ಗೋಮತಿ, ಉಪಾಧ್ಯಕ್ಷೆ ಮಂಗಳಗೌರಮ್ಮ ಗಿರಿಯಪ್ಪ, ಸದಸ್ಯರಾದ ಮಹದೇಶಸ್ವಾಮಿ, ಪುಟ್ಟಸ್ವಾಮಯ್ಯ, ಮಲ್ಲೇಶ್, ರಂಗಸ್ವಾಮಿ, ಮಹದೇವಮ್ಮ, ಲೀಲಾವತಿ ಶಿವರಾಜು, ಜ್ಯೋತಿ ಬಾಲಕೃಷ್ಣ, ವೆಂಕಟಪ್ಪ, ಸುನೀತಾ, ಕೆ.ಪಿ. ವಿಶಾಲ, ಶೋಭಾ, ಲಕ್ಷ್ಮಮ್ಮ, ಶ್ರೀನಿವಾಸ್, ತಾಪಂ ಮಾಜಿ ಅಧ್ಯಕ್ಷ ಭದ್ರಯ್ಯ, ಎಸ್‌ಡಿಎ ಸುಜಾತ, ತಾಪಂ ಸಹಾಯಕ ನಿರ್ದೇಶಕ ರೂಪೇಶ್ ಕುಮಾರ್, ಜಿಪಂ ಇಂಜಿನಿಯರ್ ಸತ್ಯಪ್ರಕಾಶ್, ಕಾರ್ತಿಕ್ ಇತರರು ಹಾಜರಿದ್ದರು.
6ಕೆಆರ್ ಎಂಎನ್ 4.ಜೆಪಿಜಿರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ವಿಭೂತಿಕೆರೆ ಗ್ರಾಪಂ ನೂತನ ಕಟ್ಟಡವನ್ನು ಶಾಸಕ ಇಕ್ಬಾಲ್ ಹುಸೇನ್ ಉದ್ಘಾಟಿಸಿದರು.