ವಿನಯ್‌ ಜೈಲು ಸೇರಿದ ಬೆನ್ನಲ್ಲೇಪುತ್ರಿಯ ಭಾವನಾತ್ಮಕ ಪೋಸ್ಟ್‌

KannadaprabhaNewsNetwork |  
Published : Apr 20, 2026, 02:00 AM IST
19ಡಿಡಬ್ಲೂಡಿ4ತಂದೆ, ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಪರವಾಗಿ ಪೋಸ್ಟ ಮಾಡಿರುವ ವೈಶಾಲಿ ಕುಲಕರ್ | Kannada Prabha

ಸಾರಾಂಶ

ಯೋಗೇಶಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿ ಜೈಲು ಪಾಲಾಗಿರುವ ಶಾಸಕ ವಿನಯ ಕುಲಕರ್ಣಿ ಅವರ ಪುತ್ರಿ ಸಾಮಾಜಿಕ ಜಾಲತಾಣ, ಫೇಸ್‌ಬುಕ್‌ನಲ್ಲಿ ಭಾವನಾತ್ಮಕ ಪೋಸ್ಟ್‌ ಹಾಕಿದ್ದಾರೆ.

ಕನ್ನಡಪ್ರಭ ವಾರ್ತೆ ಧಾರವಾಡ

ಯೋಗೇಶಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿ ಜೈಲು ಪಾಲಾಗಿರುವ ಶಾಸಕ ವಿನಯ ಕುಲಕರ್ಣಿ ಅವರ ಪುತ್ರಿ ಸಾಮಾಜಿಕ ಜಾಲತಾಣ, ಫೇಸ್‌ಬುಕ್‌ನಲ್ಲಿ ಭಾವನಾತ್ಮಕ ಪೋಸ್ಟ್‌ ಹಾಕಿದ್ದಾರೆ.

ವನ್ಯಜೀವಿ ಮಂಡಳಿ ಸದಸ್ಯರೂ ಆಗಿರುವ ವೈಶಾಲಿ ಕುಲಕರ್ಣಿ ಅವರು ವಿನಯ ಕುಲಕರ್ಣಿ ಅವರ ಪ್ರೀತಿಯ ಪುತ್ರಿ. ಹೀಗಾಗಿ ತಾವು ಹಾಗೂ ತಮ್ಮ ಕುಟುಂಬದ ಭಾವಚಿತ್ರಗಳ ಸಮೇತ ವೈಶಾಲಿ ಅವರು ಭಾವನಾತ್ಮಕ ಪೋಸ್ಟ್‌ ಹಾಕಿದ್ದು, ವೈರಲ್‌ ಆಗಿದೆ. ಅವರ ಪೋಸ್ಟ್‌ಗೆ ವಿನಯ ಅವರ ಅಭಿಮಾನಿಗಳು ಬೆಂಬಲ ಸಹ ವ್ಯಕ್ತಪಡಿಸಿದ್ದಾರೆ.

ಉತ್ತರ ಕರ್ನಾಟಕದಾದ್ಯಂತ, ವಿದ್ಯಾರ್ಥಿ ನಾಯಕರಿಂದ ರಾಜ್ಯ ನಾಯಕರಾಗುವವರೆಗೆ ತಂದೆ ವಿನಯ ಕುಲಕರ್ಣಿ ಅವರ ಪಯಣವನ್ನು ಜನರು ಕಂಡಿದ್ದಾರೆ. ಜನರಿಗಾಗಿ ಬದುಕಿದ ನಾಯಕನಾಗಿ, ಅವರು ತಮ್ಮ ಜೀವನವನ್ನೇ ಸಾರ್ವಜನಿಕ ಸೇವೆಗೆ ಅರ್ಪಿಸಿದ್ದಾರೆ. ಅನೇಕ ಕುಟುಂಬಗಳಿಗೆ ಅವರು ಕೇವಲ ನಾಯಕನಲ್ಲ-ತಮ್ಮವರಲ್ಲೊಬ್ಬರು. ನಾವು ಅವರನ್ನು ಯಾವಾಗಲೂ ಅವರ ಕೆಲಸಗಳಿಂದಲೇ ಗುರುತಿಸಿದ್ದೇವೆ. ಮತ್ತು ಅದೇ ನಮ್ಮ ಹೆಮ್ಮೆ. ಅವರು ನಮ್ಮ ಹೀರೋ, ನಮ್ಮ ಮಾರ್ಗದರ್ಶಕ ಮತ್ತು ನಮ್ಮ ಅತಿ ದೊಡ್ಡ ಹೆಮ್ಮೆ ಎಂದು ಬರೆದುಕೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳಾ ಮೀಸಲಾತಿಗೆ ಕಾಂಗ್ರೆಸ್‌ ವಿರೋಧ: ಜೆಡಿಎಸ್‌ ಪ್ರತಿಭಟನೆ
ವಿಶ್ವಕರ್ಮ ಸಮಾಜ ಸಂಘಟಿತರಾಗಲಿ: ಕೆ.ಪಿ. ನಂಜುಂಡಿ