ಡೆತ್‌ನೋಟಲ್ಲಿ ಇಬ್ಬರು ಕೈ ಶಾಸಕರ ಹೆಸರು ಬರೆದಿಟ್ಟು ಬಿಜೆಪಿಗ ಆತ್ಮಹತ್ಯೆ

KannadaprabhaNewsNetwork |  
Published : Apr 05, 2025, 12:49 AM IST
Vinay somayya | Kannada Prabha

ಸಾರಾಂಶ

ತನ್ನ ಮೇಲೆ ರಾಜಕೀಯ ಪ್ರೇರಿತ ಎಫ್‌ಐಆರ್‌ ದಾಖಲಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಕೊಡಗು ಮೂಲದ ಬಿಜೆಪಿ ಕಾರ್ಯಕರ್ತನೊಬ್ಬ ತಾನು ಕೆಲಸ ಮಾಡುತ್ತಿದ್ದ ಕಚೇರಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಮುಂಜಾನೆ ಹೆಣ್ಣೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

- ಪೊನ್ನಣ್ಣ, ಮಂಥರ್‌ಗೌಡ ಹೆಸರು ಬರೆದು ಕೊಡಗು ವ್ಯಕ್ತಿ ಬೆಂಗಳೂರಲ್ಲಿ ನೇಣಿಗೆ

- ಕಾಂಗ್ರೆಸ್‌ ಮೇಲೆ ಮುಗಿಬಿದ್ದ ಬಿಜೆಪಿ । ಶಾಸಕರ ವಿರುದ್ಧ ಕೇಸ್‌ ದಾಖಲಿಗೆ ಪಟ್ಟು

---

ಯಾರು ಈ ವಿನಯ್‌?

- ಬಿಜೆಪಿ ಕಾರ್ಯಕರ್ತ. ಬೆಂಗಳೂರಿನಲ್ಲಿ ಉದ್ಯೋಗಿ. ಪತ್ನಿ, ಮಗುವಿನ ಜತೆ ನೆಲೆಸಿದ್ದರು

- ಕೊಡಗು ಜಿಲ್ಲೆಯಲ್ಲಿನ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು

- ವಿನಯ್ ಅಡ್ಮಿನ್‌ ಆಗಿದ್ದ ವಾಟ್ಸಾಪ್‌ ಗ್ರೂಪ್‌ನಲ್ಲಿ ಶಾಸಕ ಪೊನ್ನಣ್ಣ ಬಗ್ಗೆ ಗೇಲಿ ಮಾಡಲಾಗಿತ್ತು

- ಈ ಬಗ್ಗೆ ಕಾಂಗ್ರೆಸ್ ಮುಖಂಡ ತೆನ್ನೇರಾ ಮಹೀನಾ ದೂರು ನೀಡಿದ್ದರು. ಕೇಸ್‌ ದಾಖಲಾಗಿತ್ತು

- ಬಂಧನಕ್ಕಾಗಿ ಪೊಲೀಸರು ಯತ್ನಿಸಿದ್ದರು. ನಿರೀಕ್ಷಣಾ ಜಾಮೀನು ಪಡೆದಿದ್ದ ವಿನಯ್‌ ಸೋಮಯ್ಯ

--ಸಾವಿಗೆ ಶರಣು ಏಕೆ?- ತಮ್ಮ ವಿರುದ್ಧದ ಪ್ರಕರಣಕ್ಕೆ ವಿನಯ್‌ ಸೋಮಯ್ಯ ಜಾಮೀನು, ತಡೆಯಾಜ್ಞೆ ಪಡೆದಿದ್ದರು

- ಆದರೂ ಪೊಲೀಸರು ವಿನಯ್‌ ಅವರ ಸ್ನೇಹಿತರು, ಸಂಬಂಧಿಕರ ಮನೆಗೆ ಹೋಗುತ್ತಿದ್ದರು

- ವಿನಯ್‌ ಬಗ್ಗೆ ವಿಚಾರಿಸುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲೂ ಅವಹೇಳನ ಆಗುತ್ತಿತ್ತು

- ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಡೆತ್‌ನೋಟಲ್ಲಿ ಉಲ್ಲೇಖ

--ಸಾವಿನಲ್ಲೂ ಬಿಜೆಪಿ

ನಾಯಕರ ರಾಜಕೀಯ

ಆತ್ಮಹತ್ಯೆಗೆ ಯಾರೂ ಶರಣಾಗಬಾರದು. ವಿನಯ್‌ ಜತೆ ನನಗೆ ಸಂಪರ್ಕ ಇರಲಿಲ್ಲ. ಅವರ ಜತೆ ನಾನು ಮಾತಾಡಿಲ್ಲ. ದೂರು ನೀಡುವಂತೆಯೂ ಹೇಳಿಲ್ಲ. ಪೊಲೀಸರ ಮೇಲೆ ಒತ್ತಡವನ್ನೂ ಹೇರಿಲ್ಲ. ವಿನಯ್‌ ವಾಟ್ಸಾಪ್‌ ಮೆಸೇಜ್‌ ಕಳಿಸಿದ್ದಾರೆ. ಅದು ಹೇಗೆ ಡೆತ್‌ನೋಟ್‌ ಆದೀತು? ಬಿಜೆಪಿಗರು ಸಾವಿನ ಮೇಲೆ ರಾಜಕೀಯ ಮಾಡುತ್ತಿದ್ದಾರೆ.

- ಎ.ಎಸ್‌.ಪೊನ್ನಣ್ಣ ಶಾಸಕ

--------------------

ಡೆತ್‌ನೋಟ್‌ನಲ್ಲಿ ನನ್ನ

ಹೆಸರು ಆಶ್ಚರ್ಯ ತಂದಿದೆ

ವಿನಯ್ ಡೆತ್ ನೋಟ್‌ನಲ್ಲಿ ನನ್ನ ಹೆಸರು ಬಂದಿರುವುದು ಆಶ್ಚರ್ಯ ಉಂಟು ಮಾಡಿದೆ. ಅವರ ಜತೆ ಆಸ್ಪತ್ರೆ ವಿಚಾರವಾಗಿ ನ.24ರಂದು ಮಾತನಾಡಿದ್ದೆ. ಅದು ಬಿಟ್ಟರೆ ನನಗೂ ಅವರಿಗೂ ಬೇರೆ ಮಾತುಕತೆ ನಡೆದಿಲ್ಲ. ಸಾವು ನನಗೂ ನೋವು ತಂದಿದೆ. ಪ್ರಕರಣದ ಸತ್ಯಾಸತ್ಯತೆ ಹೊರ ಬರಲಿ ಎಂದು ಕೋರುತ್ತೇನೆ.

ಡಾ. ಮಂಥರ್ ಗೌಡ, ಶಾಸಕ

---ಕನ್ನಡಪ್ರಭ ವಾರ್ತೆ ಬೆಂಗಳೂರು

ತನ್ನ ಮೇಲೆ ರಾಜಕೀಯ ಪ್ರೇರಿತ ಎಫ್‌ಐಆರ್‌ ದಾಖಲಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಕೊಡಗು ಮೂಲದ ಬಿಜೆಪಿ ಕಾರ್ಯಕರ್ತನೊಬ್ಬ ತಾನು ಕೆಲಸ ಮಾಡುತ್ತಿದ್ದ ಕಚೇರಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಮುಂಜಾನೆ ಹೆಣ್ಣೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಡಿಕೇರಿ ಮೂಲದ ವಿನಯ್‌ ಸೋಮಯ್ಯ(40) ಆತ್ಮಹತ್ಯೆಗೆ ಶರಣಾದ ಬಿಜೆಪಿ ಕಾರ್ಯಕರ್ತ. ಆತ್ಮಹತ್ಯೆಗೆ ವಿರಾಜಪೇಟೆ ಶಾಸಕ ಎ.ಎಸ್‌.ಪೊನ್ನಣ್ಣ, ಮಡಿಕೇರಿ ಶಾಸಕ ಮಂಥರ್‌ ಗೌಡ ಹಾಗೂ ಸ್ಥಳೀಯ ಕಾಂಗ್ರೆಸ್‌ ಮುಖಂಡ ತೆನ್ನೀರಾ ಮಹೀನಾ ಅವರ ಕಿರುಕುಳವೇ ಕಾರಣ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಈ ಪ್ರಕರಣ ರಾಜಕೀಯ ತಿರುವು ಪಡೆದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ರಾಜ್ಯ ಬಿಜೆಪಿ ನಾಯಕರು ಮೃತ ಬಿಜೆಪಿ ಕಾರ್ಯಕರ್ತನ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದ್ದಾರೆ. ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿರುವ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಕೆಲಸ ಮಾಡುವ ಕಂಪನಿಯಲ್ಲೇ ಆತ್ಮಹತ್ಯೆ:

ಮೃತ ವಿನಯ್‌ ಸೋಮಯ್ಯ ಪತ್ನಿ ಮತ್ತು ಮಗುವಿನ ಜತೆಗೆ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ನೆಲೆಸಿದ್ದರು. ನಾಗವಾರದ ಎಚ್‌ಬಿಆರ್‌ ಲೇಔಟ್‌ನ ಖಾಸಗಿ ಕಂಪನಿಯಲ್ಲಿ ಆಪರೇಷನ್‌ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ಮುಂಜಾನೆ ಸುಮಾರು 4.30ಕ್ಕೆ ವಿನಯ್‌ ತಾನು ಕೆಲಸ ಮಾಡುವ ಕಂಪನಿಯ ಗೋದಾಮಿನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಸುದೀರ್ಘ ಡೆತ್‌ನೋಟ್‌ವೊಂದನ್ನು ವಾಟ್ಸಾಪ್‌ ಗ್ರೂಪ್‌ಗೆ ಹಾಕಿದ್ದಾರೆ. ಬೆಳಗ್ಗೆ ಕಂಪನಿ ಕಚೇರಿಗೆ ನೌಕರರು ಬಂದಾಗ ಆತ್ಮಹತ್ಯೆ ಘಟನೆ ಬೆಳಕಿಗೆ ಬಂದಿದೆ. ಬಳಿಕ ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಹೆಣ್ಣೂರು ಪೊಲೀಸರು ಪರಿಶೀಲನೆ ನಡೆಸಿ, ವಿನಯ್‌ ಮೃತದೇಹವನ್ನು ನೇಣು ಕುಣಿಕೆಯಿಂದ ಕೆಳಗಿಳಿಸಿ ಅಂಬೇಡ್ಕರ್‌ ಆಸ್ಪತ್ರೆಗೆ ಸಾಗಿಸಿದರು.

ಕೈ ಮುಖಂಡನ ವಿರುದ್ಧ ಎಫ್‌ಐಆರ್‌ ದಾಖಲು:

ವಿನಯ್‌ ಸೋಮಯ್ಯ ಆತ್ಮಹತ್ಯೆಗೆ ಮಡಿಕೇರಿ ಕಾಂಗ್ರೆಸ್ ಮುಖಂಡ ತೆನ್ನೇರಾ ಮಹೀನಾ, ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಮಡಿಕೇರಿ ಶಾಸಕ ಮಂಥರ್ ಗೌಡ ಮತ್ತು ಇತರರ ಕಿರುಕುಳವೇ ಕಾರಣ ಎಂದು ಆರೋಪಿಸಿ ಮೃತನ ಸಹೋದರ ಕೆ.ಎಸ್‌.ಜೀವನ್‌ ಹೆಣ್ಣೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಪೊಲೀಸರು ಕಾಂಗ್ರೆಸ್‌ ಮುಖಂಡ ತೆನ್ನೇರಾ ಮಹೀನಾ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಶಾಸಕರನ್ನು ಅಪಹಾಸ್ಯ ಮಾಡಿದ್ದಕ್ಕೆ ಕೇಸ್‌:

ಮೃತ ವಿನಯ್‌ ಸೋಮಯ್ಯ ಬಿಜೆಪಿ ಕಾರ್ಯಕರ್ತನಾಗಿದ್ದು, ಕೊಡಗಿನಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಕೊಡಿಗಿನ ಸಮಸ್ಯೆಗಳ ಬಗ್ಗೆ ಚರ್ಚಿಸಲು ತೆರೆಯಲಾಗಿದ್ದ ವಾಟ್ಸಾಪ್‌ ಗ್ರೂಪ್‌ವೊಂದರ ಆಡ್ಮಿನ್‌ ಆಗಿದ್ದರು. ಈ ಗ್ರೂಪ್‌ಗೆ ಕಳೆದ ಫೆಬ್ರವರಿಯಲ್ಲಿ ವಿರಾಜಪೇಟೆ ಶಾಸಕ ಎ.ಎಸ್‌.ಪೊನ್ನಣ್ಣ ಅವರನ್ನು ಅಪಹಾಸ್ಯ ಮಾಡುವಂಥ ಪೋಸ್ಟ್‌ವೊಂದನ್ನು ಗ್ರೂಪ್‌ನ ಸದಸ್ಯರು ಹಂಚಿಕೊಂಡಿದ್ದರು. ಈ ಸಂಬಂಧ ಮಡಿಕೇರಿ ಕಾಂಗ್ರೆಸ್ ಮುಖಂಡ ತೆನ್ನೇರಾ ಮಹೀನಾ ಅವರು ಗ್ರೂಪ್‌ ಅಡ್ಮಿನ್‌ ವಿನಯ್ ಸೋಮಯ್ಯ ಸೇರಿ ಮೂವರ ವಿರುದ್ಧ ಮಡಿಕೇರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್‌ ದಾಖಲಿಸಿ, ಬಂಧನಕ್ಕಾಗಿ ಆರೋಪಿಗಳ ಸ್ನೇಹಿತರು, ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದ್ದರು.

ಜಾಲತಾಣದಲ್ಲಿ ಅವಹೇಳನ:

ಈ ನಡುವೆ, ವಿನಯ್ ಸೋಮಯ್ಯ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದರು. ಪ್ರಕರಣಕ್ಕೆ ಹೈಕೋರ್ಟ್‌ ತಡೆಯಾಜ್ಞೆಯನ್ನೂ ನೀಡಿತ್ತು. ಆದರೂ ಪೊಲೀಸರು ವಿನಯ್‌ ಸೋಮಯ್ಯ ಅವರ ಸ್ನೇಹಿತರು ಹಾಗೂ ಸಂಬಂಧಿಕರ ಮನೆಗೆ ಹೋಗುವುದು, ವಿನಯ್‌ ಬಗ್ಗೆ ವಿಚಾರಿಸುವ ಕೆಲಸ ಮಾಡುತ್ತಿದ್ದರು. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವಿನಯ್‌ ಸೋಮಯ್ಯ ಸೇರಿ ಮೂವರ ವಿರುದ್ಧ ಕಿಡಿಗೇಡಿಗಳು ಎಂದು ಅಪಪ್ರಚಾರ ಮಾಡುತ್ತಿದ್ದರು. ಅವಹೇವಹೇಳನಕಾರಿ ಪೋಸ್ಟ್‌ ಹಾಕುತ್ತಿದ್ದರು. ಇದರಿಂದ ವಿನಯ್‌ ಸಾಕಷ್ಟು ಮನನೊಂದಿದ್ದರು ಎನ್ನಲಾಗಿದೆ. ಹೀಗಾಗಿ ವಿನಯ್‌ ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ಪತ್ರೆ ಬಳಿ ಹೈಡ್ರಾಮಾ

ವಿನಯ್‌ ಸೋಮಯ್ಯ ಆತ್ಮಹತ್ಯೆ ಪ್ರಕರಣ ಸಂಬಂಧ ಹೆಣ್ಣೂರು ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಇಬ್ಬರು ಶಾಸಕರ ಹೆಸರು ಕೈ ಬಿಟ್ಟು ಕೇವಲ ತೆನ್ನೇರಾ ಮಹೀನಾ ಹೆಸರು ಮಾತ್ರ ಉಲ್ಲೇಖಿಸಿದ್ದಕ್ಕೆ ಮೃತನ ಕುಟುಂಬದ ಸದಸ್ಯರು ಹಾಗೂ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಎಫ್‌ಐಆರ್‌ನಲ್ಲಿ ಇಬ್ಬರು ಶಾಸಕರು ಹೆಸರು ಉಲ್ಲೇಖಿಸದ ಹೊರತು ಮೃತದೇಹ ಸ್ವೀಕರಿಸುವುದಿಲ್ಲ ಎಂದು ಅಂಬೇಡ್ಕರ್‌ ಆಸ್ಪತ್ರೆ ಬಳಿ ಪಟ್ಟು ಹಿಡಿದರು. ಹೀಗಾಗಿ ಆಸ್ಪತ್ರೆ ಬಳಿ ಕೆಲ ಕಾಲ ಹೈಡ್ರಾಮಾ ನಡೆಯಿತು. ಬಳಿಕ ಪೂರ್ವ ವಿಭಾಗದ ಡಿಸಿಪಿ ದೇವರಾಜ್‌ ಅವರು ಸ್ಥಳಕ್ಕೆ ದೌಡಾಯಿಸಿ, ಮೃತನ ಸೋದರ ಜೀವನ್‌ರಿಂದ ಮತ್ತೊಂದು ದೂರು ಸ್ವೀಕರಿಸಿದರು. ನ್ಯಾಯಾಲಯಕ್ಕೆ ಎಫ್‌ಐಆರ್‌ ಸಲ್ಲಿಸುವ ಮುನ್ನ ದೂರಿನಲ್ಲಿ ಉಲ್ಲೇಖಿತ ಕೆಲವರ ಹೆಸರನ್ನು ಸೇರಿಸುವ ಭರವಸೆ ನೀಡಿದರು. ಬಳಿಕ ಮೃತನ ಕುಟುಂಬಸ್ಥರು ಮೃತದೇಹವನ್ನು ಸ್ವೀಕರಿಸಿ ಕೊಡಗಿನತ್ತ ಪ್ರಯಾಣ ಬೆಳೆಸಿದರು.

ಬಿಜೆಪಿ ನಾಯಕರ ದೌಡು

ಬಿಜೆಪಿ ಕಾರ್ಯಕರ್ತ ವಿನಯ್‌ ಸೋಮಯ್ಯ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಸೇರಿ ಕೆಲ ಬಿಜೆಪಿ ಮುಖಂಡರು ಅಂಬೇಡ್ಕರ್‌ ಆಸ್ಪತ್ರೆಗೆ ದೌಡಾಯಿಸಿದರು. ಬಳಿಕ ಪೊಲೀಸರು ಹಾಗೂ ಮೃತನ ಕುಟುಂಬದವರಿಂದ ಘಟನೆ ಬಗ್ಗೆ ಮಾಹಿತಿ ಪಡೆದರು. ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸುವವರೆಗೂ ಜತೆಯಲ್ಲೇ ಇದ್ದರು.

ಡೆತ್‌ನೋಟ್‌ನಲ್ಲಿ ಇಬ್ಬರು ಶಾಸಕರುಮೃತ ವಿನಯ್‌ ಸೋಮಯ್ಯ ಬಿಜೆಪಿ ಕಾರ್ಯಕರ್ತನಾಗಿದ್ದು, ಕೊಡಗಿನಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಕೊಡಗಿನ ಸಮಸ್ಯೆಗಳ ಬಗ್ಗೆ ಚರ್ಚಿಸಲು ತೆರೆಯಲಾಗಿದ್ದ ವಾಟ್ಸಾಪ್‌ ಗ್ರೂಪ್‌ವೊಂದರ ಆಡ್ಮಿನ್‌ ಆಗಿದ್ದರು. ಈ ಗ್ರೂಪ್‌ಗೆ ಕಳೆದ ಫೆಬ್ರವರಿಯಲ್ಲಿ ವಿರಾಜಪೇಟೆ ಶಾಸಕ ಎ.ಎಸ್‌.ಪೊನ್ನಣ್ಣ ಅವರನ್ನು ಅಪಹಾಸ್ಯ ಮಾಡುವಂಥ ಪೋಸ್ಟ್‌ವೊಂದನ್ನು ಗ್ರೂಪ್‌ನ ಸದಸ್ಯರು ಹಂಚಿಕೊಂಡಿದ್ದರು. ಈ ಸಂಬಂಧ ಮಡಿಕೇರಿ ಕಾಂಗ್ರೆಸ್ ಮುಖಂಡ ತೆನ್ನೇರಾ ಮಹೀನಾ ಅವರು ಗ್ರೂಪ್‌ ಅಡ್ಮಿನ್‌ ವಿನಯ್ ಸೋಮಯ್ಯ ಸೇರಿ ಮೂವರ ವಿರುದ್ಧ ಮಡಿಕೇರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್‌ ದಾಖಲಿಸಿ, ಬಂಧನಕ್ಕಾಗಿ ಆರೋಪಿಗಳ ಸ್ನೇಹಿತರು, ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದ್ದರು. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವಿನಯ್‌ ಸೋಮಯ್ಯ ಸೇರಿ ಮೂವರ ವಿರುದ್ಧ ಕಿಡಿಗೇಡಿಗಳು ಎಂದು ಅಪಪ್ರಚಾರ ಮಾಡುತ್ತಿದ್ದರು ಎನ್ನಲಾಗಿದೆ.ಜಾಲತಾಣದಲ್ಲಿ ಅವಹೇಳನ

ವಿನಯ್ ಸೋಮಯ್ಯ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದರು. ಪ್ರಕರಣಕ್ಕೆ ಹೈಕೋರ್ಟ್‌ ತಡೆಯಾಜ್ಞೆಯನ್ನೂ ನೀಡಿತ್ತು. ಆದರೂ ಪೊಲೀಸರು ವಿನಯ್‌ ಸೋಮಯ್ಯ ಅವರ ಸ್ನೇಹಿತರು ಹಾಗೂ ಸಂಬಂಧಿಕರ ಮನೆಗೆ ಹೋಗುವುದು, ವಿನಯ್‌ ಬಗ್ಗೆ ವಿಚಾರಿಸುವ ಕೆಲಸ ಮಾಡುತ್ತಿದ್ದರು. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವಿನಯ್‌ ಸೋಮಯ್ಯ ಸೇರಿ ಮೂವರ ವಿರುದ್ಧ ಕಿಡಿಗೇಡಿಗಳು ಎಂದು ಅಪಪ್ರಚಾರ ಮಾಡುತ್ತಿದ್ದರು. ಅವಹೇವಹೇಳನಕಾರಿ ಪೋಸ್ಟ್‌ ಹಾಕುತ್ತಿದ್ದರು. ಇದರಿಂದ ವಿನಯ್‌ ಸಾಕಷ್ಟು ಮನನೊಂದಿದ್ದರು ಎನ್ನಲಾಗಿದೆ. ಹೀಗಾಗಿ ವಿನಯ್‌ ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

--

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ