ಜಗಳೂರಲ್ಲಿ ಪಕ್ಷೇತರ ವಿನಯಕುಮಾರ್‌ ಭರ್ಜರಿ ರೋಡ್ ಶೋ

KannadaprabhaNewsNetwork |  
Published : Apr 26, 2024, 12:46 AM IST
24ಕೆಡಿವಿಜಿ15, 16, 17-ಜಗಳೂರಿನಲ್ಲಿ ಬುಧವಾರ ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಪ್ರಚಾರ ಕೈಗೊಂಡರು. | Kannada Prabha

ಸಾರಾಂಶ

ದಾವಣಗೆರೆ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ್ ಪರ ಅಭಿಮಾನಿಗಳು, ಹಿತೈಷಿಗಳು ಜಗಳೂರಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಾಥಾಕ್ಕೆ ಭಾರಿ ಬೆಂಬಲ ವ್ಯಕ್ತವಾಯಿತು.

- ಈಶ್ವರ ದೇಗುಲದಲ್ಲಿ ಪೂಜೆ, ಜಾಥಾ । ಸಭೆಯಲ್ಲಿ ಕಂಬಳಿ ಹೊದಿಸಿ ಸನ್ಮಾನ

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ್ ಪರ ಅಭಿಮಾನಿಗಳು, ಹಿತೈಷಿಗಳು ಜಗಳೂರಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಾಥಾಕ್ಕೆ ಭಾರಿ ಬೆಂಬಲ ವ್ಯಕ್ತವಾಯಿತು.

ಜಗಳೂರಿನ ಶ್ರೀ ಈಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ, ಮಧ್ಯಾಹ್ನ ಜಾಥಾ ಆರಂಭಗೊಂಡಿತು. ಸರ್ಕಾರಿ ಆಸ್ಪತ್ರೆ, ಮಲೇನಹಳ್ಳಿ ವೃತ್ತದ ಮೂಲಕ ಡಾ.ಅಂಬೇಡ್ಕರ್ ವೃತ್ತ ತಲುಪಿದಾಗ ವಿನಯಕುಮಾರ ಅವರು ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ತರಳಬಾಳು ಕಲ್ಯಾಣ ಮಂಟಪದ ಬಳಿ ಜಾಥಾ ಕೊನೆಗೊಂಡಿತು. ಎಲ್ಲ ವರ್ಗ, ಜಾತಿ, ಧರ್ಮಗಳ ಜನರು ಪಾಲ್ಗೊಂಡರು. ಅನಂತರ ತರಳಬಾಳು ಕಲ್ಯಾಣ ಮಂಟಪದಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಮತ್ತು ಅಭಿಮಾನಿಗಳ ಸಭೆ ನಡೆಯಿತು.

ಅಭ್ಯರ್ಥಿ ಜಿ.ಬಿ.ವಿನಯಕುಮಾರ ಮಾತನಾಡಿ, ಅಂಬೇಡ್ಕರ್ ಆಶಯ ಈಡೇರದೇ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ಅಂಬೇಡ್ಕರ್ ಕನಸು ನನಸು ಮಾಡಲು ಪ್ರಯತ್ನಿಸುವೆ. ನನ್ನಂತಹವರನ್ನು ರಾಜಕೀಯವಾಗಿ ಬೆಳೆಯಲು ರಾಜ ಪ್ರಭುತ್ವದ ವ್ಯವಸ್ಥೆ ಕಟ್ಟಿ ಹಾಕುತ್ತಿದೆ. ಪಕ್ಷೇತರ ಅಭ್ಯರ್ಥಿಯಾದ ತಮ್ಮ ಗ್ಯಾಸ್ ಸಿಲಿಂಡರ್ ಗುರುತಿಗೆ ಮತ ಚಲಾಯಿಸಲು ಮನವಿ ಮಾಡಿದರು.

ಜಗಳೂರಿನಲ್ಲಿ ಚನ್ನಯ್ಯ ಒಡೆಯರ್, ಇಮಾಂ ಸಾಬ್ ಸಾಕಷ್ಟು ಕೊಡುಗೆ ನೀಡಿದ್ದರೂ ಇಂತಹ ಮಹನೀಯರ ಹೆಸರಿನ ಒಂದು ವೃತ್ತ ಕೂಡ ಇಲ್ಲ. ವಾಲ್ಮೀಕಿ ನಾಯಕ ಸಮಾಜದ ವೃತ್ತವೂ ಇಲ್ಲ. ಅಹಿಂದ ಜನ ಪ್ರತಿನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರಜ್ಞಾವಂತ ಯುವಕರು ಕನಸು ಕಾಣುತ್ತಿದ್ದರೆ, ವ್ಯವಸ್ಥೆಯು ನೀವು ಕನಸು ಕಾಣುವುದೇ ತಪ್ಪು ಎಂಬುದಾಗಿ ಪ್ರತಿಬಿಂಬಿಸುತ್ತದೆ. ಎಂಪಿ ಟಿಕೆಟ್ ತಂದಿರುವುದು ಸೇವೆಗಲ್ಲ, ತಮ್ಮ ಅಧಿಕಾರ ಉಳಿಸಿಕೊಳ್ಳುವುದಕ್ಕಷ್ಟೇ ಎಂದು ಟೀಕಿಸಿದರು.

ಯಾದವ ಸಮಾಜದ ಮುಖಂಡ ಕೃಷ್ಣಪ್ಪ ಮಾತನಾಡಿ, ಸಿಲಿಂಡರ್ ಸ್ಫೋಟವಾದರೆ ಜನ ಚೆಲ್ಲಾಪಲ್ಲಿಯಾಗುತ್ತಾರೆ.‌‌ ವಿನಯ್ ಕುಮಾರ್ ಸಿಲಿಂಡರ್ ಸ್ಫೋಟವಾದರೆ ಬಿಜೆಪಿ, ಕಾಂಗ್ರೆಸ್ ಧೂಳೀಪಟವಾಗಲಿದೆ. ವಿನಯಕುಮಾರ್‌ರನ್ನು ಸಂಸತ್ ಭವನಕ್ಕೆ ಕಳುಹಿಸುವವರೆಗೂ ಹೋರಾಟ ಮಾಡಬೇಕು ಎಂದರು.

ವಿವಿಧ ಸಮಾಜದ ಮುಖಂಡರು ಮಾತನಾಡಿದರು. ವಿನಯಕುಮಾರರನ್ನು ಹೊತ್ತು ಯುವಕರು ಕುಣಿದಾಡಿದರು. ಕಂಬಳಿ ಹೊದಿಸಿ ಸನ್ಮಾನಿಸಿದರು. ವಿವಿಧ ಸಮಾಜದ ಪ್ರಸನ್ನಕುಮಾರ್, ನಜೀರ್ ಅಹ್ಮದ್, ಪ್ರಕಾಶ್, ಜಯಣ್ಣ, ಕುಮಾರ್, ಮಾಲಿಂಗಪ್ಪ, ಹೇಮರೆಡ್ಡಿ, ತಿಪ್ಪೇಸ್ವಾಮಿ, ಭೂಪತಿ, ಶ್ರೀನಿವಾಸ್, ನೀಲಪ್ಪ, ರಂಗನಾಥ್, ಮಹಾಂತೇಶ್, ಹನುಮಂತಪ್ಪ, ಬಸವಂತಪ್ಪ ಸೇರಿದಂತೆ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು‌. ರವಿ ಯು.ಸಿ. ಸ್ವಾಗತಿಸಿದರು.

- - -

-24ಕೆಡಿವಿಜಿ15, 16, 17:

ಜಗಳೂರಿನಲ್ಲಿ ಬುಧವಾರ ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಪ್ರಚಾರ ಕೈಗೊಂಡರು.

PREV

Recommended Stories

ದಸರಾಕ್ಕೆ ದೀಪ್ತಾ ಭಾಸ್ತಿಗೆ ಆಹ್ವಾನವಿಲ್ಲಕೆ? : ಬಿವೈವಿ
ಕನಕಪುರದಲ್ಲಿ ವೈದ್ಯ ಕಾಲೇಜಿಗೆ ಭೂಮಿ ಖರೀದಿಗೆ ಹಣ ಮಂಜೂರು