ಸರ್ಕಾರದ ನಿರ್ದೇಶನ ಉಲ್ಲಂಘನೆ - ಪ್ರಕ್ರಿಯೆ ಸ್ಥಗಿತಕ್ಕೆ ಆಗ್ರಹ

KannadaprabhaNewsNetwork |  
Published : Feb 09, 2026, 02:45 AM IST
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ನಿಯೋಗವೂ ಶನಿವಾರ ತಾಲೂಕು ತಹಶೀಲ್ದಾರ  ಪ್ರವೀಣ ಕರಾಂಡೆ ಅವರಿಗೆ ಅವರ ಕಛೇರಿಯಲ್ಲಿ  ಮನವಿ ನೀಡಿದರು. | Kannada Prabha

ಸಾರಾಂಶ

ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ರಾಜ್ಯ ಮಟ್ಟದ ಉಸ್ತುವಾರಿ ಸಮಿತಿಯ ನಡವಳಿಕೆಗೆ ವ್ಯತಿರಿಕ್ತವಾಗಿ ಜಂಟಿ ಮಹಜರ್ ಜರುಗುತ್ತಿರುವುದಕ್ಕೆ ಅರಣ್ಯ ಭೂಮಿ ಹೋರಾಟಗಾರರ ವೇದಿಕೆಯು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕಾನೂನು ಮತ್ತು ನಿಯಮಕ್ಕೆ ವ್ಯತಿರಿಕ್ತವಾಗಿ ಜಂಟಿ ಮಹಜರ್ ಪ್ರಕ್ರಿಯೆ ಜರುಗುತ್ತಿರುವುದನ್ನು ಸ್ಥಗಿತಗೊಳಿಸಲು ಜಿಲ್ಲಾಧಿಕಾರಿಗೆ ಆಗ್ರಹಿಸಲಾಗಿದೆ.

ಕನ್ನಡಪ್ರಭ ವಾರ್ತೆ ಹೊನ್ನಾವರ

ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ರಾಜ್ಯ ಮಟ್ಟದ ಉಸ್ತುವಾರಿ ಸಮಿತಿಯ ನಡವಳಿಕೆಗೆ ವ್ಯತಿರಿಕ್ತವಾಗಿ ಜಂಟಿ ಮಹಜರ್ ಜರುಗುತ್ತಿರುವುದಕ್ಕೆ ಅರಣ್ಯ ಭೂಮಿ ಹೋರಾಟಗಾರರ ವೇದಿಕೆಯು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕಾನೂನು ಮತ್ತು ನಿಯಮಕ್ಕೆ ವ್ಯತಿರಿಕ್ತವಾಗಿ ಜಂಟಿ ಮಹಜರ್ ಪ್ರಕ್ರಿಯೆ ಜರುಗುತ್ತಿರುವುದನ್ನು ಸ್ಥಗಿತಗೊಳಿಸಲು ಜಿಲ್ಲಾಧಿಕಾರಿಗೆ ಆಗ್ರಹಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.

ತಾಲೂಕು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯಿಂದ ಶನಿವಾರ ತಹಶೀಲ್ದಾರಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದರು.

ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಅರಣ್ಯ ಹಕ್ಕು ಕಾಯಿದೆಯ ಉಸ್ತುವಾರಿ ಸಮಿತಿಯು ಜ.೬ ರಂದು ಜರುಗಿದ ಸಭೆಯಲ್ಲಿ ನಡವಳಿಕೆಯನ್ನು ದಾಖಲಿಸಿ - ಅರ್ಜಿಗಳು ದಾಖಲಾತಿ ಅಲಭ್ಯತೆ ಕಾರಣಕ್ಕೆ ತಿರಸ್ಕರಿಸಿದಲ್ಲಿ ಅರಣ್ಯ ಕಂದಾಯ, ಗ್ರಾಮೀಣಾಭೀವೃದ್ದಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡರನ್ನು ಒಳಗೊಂಡ ತಂಡದಿಂದ ಮುಂದಿನ ೪೫ ದಿನಗಳೊಳಗಾಗಿ ಮಹಜರ್ ಮಾಡಿ, ವರದಿಯನ್ನು ದಾಖಲೆಯಾಗಿ ಪರಿಗಣಿಸಲು ಸೂಚನೆ ನೀಡಿದ್ದು ಇರುತ್ತದೆ ಎಂದು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.

ಪ್ರಮುಖರಾದ ಮಹೇಶ್ ನಾಯ್ಕ ಕಾನಕ್ಕಿ, ಸುರೇಶ್ ಮೇಸ್ತ, ರಾಮ ಮರಾಠಿ ಯಲಕೊಟಗಿ, ವಿನೋದ ನಾಯ್ಕ ಯಲಕೊಟಗಿ, ಮಾರುತಿ ನಾಯ್ಕ ಹೀರೇಬೈಲ್, ಸುರೇಶ ತುಂಬೊಳ್ಳಿ, ರತ್ನಾಕರ್ ನಾಯ್ಕ ಹಿರೇಬೈಲ್, ಅನಿತಾ ಲೋಪೀಸ್ ಮುಗ್ವಾ, ಅಥೋನ್ ಫರ್ನಾಂಡಿಸ್, ಮಾದೇವ ಮರಾಠಿ ಸಾಲ್ಕೋಡ, ಗಜಾನನ ನಾಯ್ಕ ಸಾಲ್ಕೋಡ , ಚಂದ್ರಹಾಸ ನಾಯ್ಕ ಬೈಲೂರು, ಬೆಬಿ ಖೈರೂನ್ ಉಪ್ಪೋಣಿ, ಜನಾರ್ದನ್ ನಾಯ್ಕ, ಗಣೇಶ ಚಂದಾವರ, ಸುರೇಶ ನಾಯ್ಕ ಗೆರಸೊಪ್ಪ, ಸುರೇಶ ಮೇಸ್ತ, ನಾಗೇಂದ್ರ ನಾಯ್ಕ ಚಿತ್ತಾರ, ವಿಠ್ಠಲ ಅಡಿಕಲ್, ಸಂಕೇತ ಯಲಕೊಟಗಿ, ಹೇಮಲತಾ ಸಾಲ್ಕೋಡ, ಕಾರ್ತಿಕ ಯಲಕೊಟಗಿ ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿವೇಗ ಎಂದರೆ ನಿರ್ಲಕ್ಷ್ಯದ ಚಾಲನೆ ಅಲ್ಲ: ಹೈಕೋರ್ಟ್‌
‘ಜಾಹೀರಾತಲ್ಲಿ ಗಾಂಧೀಜಿ ಬಳಕೆ ಗಾಂಧೀಜಿಯರ ಮೌಲ್ಯಗಳ ಹತ್ಯೆ’