ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಇಲ್ಲಿನ ಸಂತ ಅನ್ನಮ್ಮ ಪದವಿ ಕಾಲೇಜು ದೈಹಿಕ ಶಿಕ್ಷಣ ವಿಭಾಗ ಮತ್ತು ಐ.ಕ್ಯೂ.ಎ.ಸಿ ಹಾಗೂ ಬಿ.ಬಿ.ಎ ವಿಭಾಗ ಅಶ್ರಯದಲ್ಲಿ ಕಾಲೇಜು ಮೈದಾನದಲ್ಲಿ ರಾಷ್ಟ್ರಮಟ್ಟದ ಅಂತರ್ ಕಾಲೇಜು ಪುರುಷರ ೫+೨ ಕಾಲ್ಚೆಂಡು ಪಂದ್ಯಾಟ ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜು ಶಿಕ್ಷಣ ವಿದ್ಯಾರ್ಥಿಯನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ಸೃಷ್ಟಿಸಿ ಸಮಾಜಕ್ಕೆ ನೀಡುತ್ತದೆ. ತಾವು ಧರಿಸುವ ಬಟ್ಟೆ, ಧರಿಸುವ ಸಂಸ್ಥೆಯ ಲಾಂಛನ, ನಡೆ ನುಡಿ ಗುಣ, ಹಾವಭಾವದಿಂದ ವಿಧ್ಯಾರ್ಥಿಯ ಗುಣಮಟ್ಟ ನಿರ್ಧರಿಸುತ್ತದೆ. ದೈಹಿಕವಾಗಿ ಆರೋಗ್ಯದಿಂದಿರಲು ಕ್ರೀಡೆ ಸಹಕಾರಿಯಾಗಿದೆ. ದುರಭ್ಯಾಸಗಳಿಂದ ಹೊರಬರುವಲ್ಲಿ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನುಡಿದರು.ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾ ತೃಪ್ತಿ ಬೋಪಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಎರಡು ದಿನಗಳ ಕಾಲ ಪಂದ್ಯಾಟಗಳು ನಡೆಯಲಿವೆ. ಪಂದ್ಯಾಟದಲ್ಲಿ ಕೊಡಗು ಜಿಲ್ಲೆ ಸೇರಿದಂತೆ ರಾಜ್ಯ ಮತ್ತು ಅಂತರ್ ರಾಜ್ಯಗಳ ಸುಮಾರು ೨೮ ತಂಡಗಳು ಭಾಗವಹಿಸಿಲಿವೆ. ದಾನಿಗಳು, ಆಯೋಜಕರ ಸಹಕಾರಕ್ಕೆ ಸಂಸ್ಥೆ ಆಭಾರಿಯಾಗಿದೆ ಎಂದರು.
ಪ್ರಥಮ ಪಂದ್ಯಾಟವು ಸಂತ ಅನ್ನಮ್ಮ ಪದವಿ ಕಾಲೇಜು ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿರಾಜಪೇಟೆ ತಂಡಗಳ ಮಧ್ಯೆ ನಡೆದು 1-1 ಗೋಲುಗಳಿಂದ ಸಮ ಸಾಧಿಸಿದ ಹಿನ್ನಲೆಯಲ್ಲಿ ಪೆನಾಲ್ಟಿ ಶೂಟೌಟ್‌ಗೆ ಮನವಿ ಮಾಡಿತು. ಪೆನಾಲ್ಟಿ ಶೂಟೌಟ್‌ನಲ್ಲಿ ಸಂತ ಅನ್ನಮ್ಮ ಕಾಲೇಜು ತಂಡ ೨-೦ ಗೋಲುಗಳಿಂದ ಜಯ ಗಳಿಸಿತು. ಶೇಷಪ್ಪ ಅಮ್ಮತ್ತಿ, ನಿಧೀಶ್ ಮತ್ತು ಶ್ರೀನಿವಾಸ್ ಒಂಟಿ ಅಂಗಡಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಸಂತ ಅನಮ್ಮ ಪದವಿ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು, ವಿವಿಧ ಕಾಲೇಜುಗಳಿಂದ ಆಗಮಿಸಿದ ವಿದ್ಯಾರ್ಥಿಗಳು, ದೈಹಿಕ ಶಿಕ್ಷಕರು ಸಮಾರಂಭದಲ್ಲಿ ಹಾಜರಿದ್ದರು.