7ರಂದು ವಿರಾಟ ಹಿಂದೂ ಸಂಗಮ ಕಾರ್ಯಕ್ರಮ

KannadaprabhaNewsNetwork |  
Published : Feb 05, 2026, 03:00 AM IST
ಹಿಂದೂ ಸಂಗಮ ಆಯೋಜನಾ ಸಮಿತಿ ಸುದ್ದಿಗೋಷ್ಠಿ | Kannada Prabha

ಸಾರಾಂಶ

ಮಡಿಕೇರಿ : ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಮಡಿಕೇರಿ ನಗರದಲ್ಲಿ ಫೆ.7ರಂದು ವಿರಾಟ ಹಿಂದೂ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಕಾರೇರ ಕವನ್ ತಿಳಿಸಿದರು.

ಮಡಿಕೇರಿ : ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಮಡಿಕೇರಿ ನಗರದಲ್ಲಿ ಫೆ.7ರಂದು ವಿರಾಟ ಹಿಂದೂ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಕಾರೇರ ಕವನ್ ತಿಳಿಸಿದರು.ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚ ಪರಿವರ್ತನೆಯ ಧ್ಯೇಯೋದ್ದೇಶದೊಂದಿಗೆ ಎಲ್ಲೆಡೆ ವಿರಾಟ ಹಿಂದೂ ಸಂಗಮ ಕಾರ್ಯಕ್ರಮ ನಡೆಯುತ್ತಿದೆ. ಮಡಿಕೇರಿ ನಗರ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ನಗರದ ನಾಲ್ಕು ದಿಕ್ಕುಗಳಲ್ಲಿ ಏಕ ಕಾಲದಲ್ಲಿ ಸಭೆ ನಡೆಸಿ ಮೆರವಣಿಗೆ ಮೂಲಕ ತೆರಳಿ ಗಾಂಧಿ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.

ಪ್ರತಿಯೊಬ್ಬ ಹಿಂದೂ ಸಂಘಟಿತರಾದಾಗ ಮಾತ್ರ ಧರ್ಮ ಬಲಿಷ್ಠವಾಗುತ್ತದೆ ಮತ್ತು ಮಾತೃಭೂಮಿ ರಕ್ಷಣೆಯಾಗುತ್ತದೆ. ಈ ಹಿನ್ನೆಲೆ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳುವಂತಾಗಲು ನಗರದ ವಿವಿಧ ವಾರ್ಡ್‌ಗಳನ್ನೊಳಗೊಂಡು ನಾಲ್ಕು ವಿಭಾಗಗಳನ್ನಾಗಿ ಮಾಡಿ ಅದಕ್ಕೆ ವಸತಿ ಎಂದು ಹೆಸರಿಸಲಾಗಿದೆ. ಅಭಿಮನ್ಯು, ಛತ್ರಪತಿ, ಅಶ್ವಿನಿ ಹಾಗೂ ಸಮರ್ಥ ಎಂದು ನಾಮಕರಣ ಮಾಡಲಾಗಿದೆ ಎಂದು ವಿವರಿಸಿದರು.ಸಮಿತಿ ಜಿಲ್ಲಾ ಸಂಯೋಜಕರಾದ ದಿನೇಶ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ 10ಕ್ಕೂ ಅಧಿಕ ಕಡೆಗಳಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈಗಾಗಲೇ ಜಿಲ್ಲೆಯ ವಿವಿಧೆಡೆ ಪಂಚಾಯಿತಿ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಫೆ.20ರವರೆಗೆ ಈ ಜಾಗೃತಿ ಕಾರ್ಯಕ್ರಮ ಮುಂದೂವರೆಯಲಿದೆ ಎಂದ ಅವರು, ಹಿಂದೂ ಕಾರ್ಯಕರ್ತರು ಮನೆಮನೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಫೆ.7ರಂದು 5 ಗಂಟೆಗೆ ನಗರದ ಗಾಂಧಿಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸುಮಾರು 5, 000 ಅಧಿಕ ಹಿಂದೂ ಸಮಾಜಬಾಂಧವರು ಪಾಲ್ಗೊಳ್ಳಲಿದ್ದಾರೆ ಎಂದರು.ನಾಲ್ಕು ಕಡೆಗಳಲ್ಲಿ ಸಭೆ ನಡೆದ ಬಳಿಕ ನಾಲ್ಕು ಕಡೆಗಳಿಂದ ಏಕಕಾಲದಲ್ಲಿ ಮೆರವಣಿಗೆ ಹೊರಡಲಿದೆ. ಮಧ್ಯಾಹ್ನ 2ಗಂಟೆಗೆ ಹೊರಡುವ ಮೆರವಣಿಗೆಯು ಸಂಜೆ 4ಗಂಟೆಗೆ ಚೌಕಿ ಹಾಗೂ ಹಳೆ ಖಾಸಗಿ ಬಸ್ ನಿಲ್ದಾಣಕ್ಕೆ ಆಗಮಿಸಿ ಅಲ್ಲಿ ಸಮಾಗಮಗೊಳ್ಳಲಿದೆ. ನಾಲ್ಕು ಕಡೆಗಳಿಂದ ಆಗಮಿಸುವ ಮೆರವಣಿಗೆ ಚೌಕಿ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ಸಮಾಗಮಗೊಂಡು ಮುಖ್ಯ ಬೀದಿಯಲ್ಲಿ ಬೃಹತ್ ಶೋಭಾಯಾತ್ರೆ ನಡೆಯಲಿದೆ. ಸಂಜೆ 5 ಗಂಟೆಗೆ ಗಾಂಧಿ ಮೈದಾನದಲ್ಲಿ ಸಮಾವೇಶಗೊಳ್ಳಲಿದೆ. ನಂತರ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.ಕಾರ್ಯಕ್ರಮ ಸಂಯೋಜಕ ಕೆ.ಎಸ್.ರಮೇಶ್ ಮಾತನಾಡಿ, ಚತ್ರಪತಿ ವಸತಿಯಿಂದ ಸುಮಾರು 600- 800 ಜನ ಶೋಭಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಗೌಡ ಸಮಾಜದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಗಣ್ಯರು ಬೌಧಿಕ್ ನೀಡಲಿದ್ದಾರೆ. ಚಂಡೇ ವಾದ್ಯ, 15, 000 ಮೀಟರ್ ಕೇಸರಿ ಬಾವುಟ, ಭಜನೆ ಕುಣಿತ, ರಾಮ, ಹನುಮಂತನ ಸ್ತಬ್ಧಚಿತ್ರಗಳು ಗಮನ ಸೆಳೆಯಲಿದೆ ಎಂದರು.ಕಾರ್ಯಕ್ರಮ ಸಂಯೋಜಕ ಜಗದೀಶ್ ಮಾತನಾಡಿ, ನಗರದ ಕಾನ್ವೆಂಟ್ ಆಟದ ಮೈದಾನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಚಂಡೆ ವಾದ್ಯ, ಕಲ್ಲಡ್ಕದಿಂದ ಬೊಂಬೆಗಳು, ಸ್ತಬ್ಧಚಿತ್ರಗಳು ಇರಲಿದೆ ಎಂದು ತಿಳಿಸಿದರು.ಕಾರ್ಯಕ್ರಮ ಸಂಯೋಜಕ ಸಂತೋಷ್ ಮಾತನಾಡಿ, ಮಹದೇವಪೇಟೆ, ಗಣಪತಿ ಬೀದಿ, ದಾಸವಾಳ, ಹಿಲ್ ರಸ್ತೆ, ಮುತ್ತಪ್ಪ ದೇವಾಲಯ, ಭಗವತಿನಗರ, ತ್ಯಾಗರಾಜ ಕಾಲೋನಿ, ಉಕ್ಕಡವನ್ನೊಳಗೊಂಡ ಸಮರ್ಥ ವಸತಿಯ ಸಭೆ ಮುತ್ತಪ್ಪ ದೇವಾಲಯ ಆವರಣದಲ್ಲಿ ನಡೆಯಲಿದೆ. ಭಜನೆ ಕುಣಿತ, ಚಂಡೆವಾದ್ಯ ಗಮನ ಸೆಳೆಯಲಿದೆ ಎಂದು ತಿಳಿಸಿದರು.ಕಾರ್ಯಕ್ರಮ ಸಂಯೋಜಕ ಚೇತನ್ ಮಾತನಾಡಿ, ಸುದರ್ಶನ ಬಡಾವಣೆ, ಅಶೋಕಪುರ, ಮಂಗಳಾದೇವಿ ನಗರ, ಶಾಂತಿನಿಕೇತನವನ್ನೊಳಗೊಂಡ ಅಶ್ವಿನಿ ವಸತಿಯ ಸಭೆ ರೋಟರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಕೆಮಿಕಲ್‌ ಫ್ಯಾಕ್ಟರಿಗಳ ಮೇಲೀಗ ಪೊಲೀಸರಿಂದ ಅಲರ್ಟ್‌
2000 ಬೋಧಕ ಹುದ್ದೆ ಭರ್ತಿಗೆ ಅಸ್ತು : ನೇರ ನೇಮಮಾತಿ ಮೂಲಕ ಭರ್ತಿ