ಕನ್ನಡಪ್ರಭವಾರ್ತೆ ಪಾವಗಡ
ಬಳಿಕ ಮಾತನಾಡಿ ವೀರ್ಲಗೊಂದಿ ಗ್ರಾಮದಲ್ಲಿ ಬಹುತೇಕ ಮಂದಿ ರೈತಾಪಿಯ ಕೃಷಿ ಕಾರ್ಯ ಚಟವಟಿಕೆಯಲ್ಲಿ ತೊಡಗಿ ಜೀವನ ರೂಪಿಸಿಕೊಂಡಿದ್ದು ಸಂತಸ ತಂದಿದೆ.ಇದರ ಜತೆ ಕುರಿಮೇಕೆ ಸಾಕಾಣಿಕೆ,ಹೈನುಗಾರಿಕೆ ಹಾಗೂ ಇತರೆ ಉಪಕಸುಬುಗಳ ಮೂಲಕ ಸ್ವಾಭಿಮಾನದ ಬದುಕುಕಟ್ಟಿಕೊಂಡಿದ್ದು ಮಾದರಿಯಾಗಿದೆ. ಗ್ರಾಮದ ಪ್ರಗತಿಗೆ ವಿಶೇಷ ಒತ್ತು ನೀಡುವ ಮೂಲಕ ಇಲ್ಲಿನ ರೈತರು ಹಾಗೂ ಬಡವ ವರ್ಗದವರ ಸೇವೆಗೆ ಸದಾ ಬದ್ದರಾಗಿರುವುದಾಗಿ ಹೇಳಿದರು.
ಜಿಲ್ಲಾ ಹಾಲು ಉತ್ಪಾಕದ ಸಂಘಗಳ ಒಕ್ಕೂಟದ ನಿರ್ದೇಶಕ ಬೆಳ್ಳಿಬಟ್ಟಲು ಚಂದ್ರಶೇಖರ್ ರೆಡ್ಡಿ,ಸ್ಥಳೀಯ ಮುಖಂಡರಾದ ನಾಗರಾಜು,ಎಪಿಎಂಸಿ ಮಾಜಿ ಅಧ್ಯಕ್ಷ ಶಿವಮೂರ್ತಿ,ಯುವ ಕಾಂಗ್ರೆಸ್ ಅಧ್ಯಕ್ಷರಾದ ಸುಜಿತ್ ಕುಮಾರ್,ಗ್ರಾಪಂ ಮಾಜಿ ಅಧ್ಯಕ್ಷ ನರಸಿಂಹಯ್ಯ,ಚಿತ್ತಗಾನಹಳ್ಳಿಯ ಚಂದ್ರು,ಕನ್ನಮೇಡಿ ಸುರೇಶ್,ಕಡಮಲಕುಂಟೆ ನಾಗಭೂಷಣ್ ,ಶಿವಣ್ಣ ಹಾಗೂ ಇತರೆ ಅನೇಕ ಮಂದಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.