‍ವಿಷ್ಣು ಸಮಾಧಿ ನೆಲಸಮ ಖಂಡಿಸಿ ವಿಷ್ಣು ಸೇನಾ ಸಮಿತಿ ಪ್ರತಿಭಟನೆ

KannadaprabhaNewsNetwork |  
Published : Aug 12, 2025, 12:30 AM IST
11ಎಚ್‌ಯುಬಿ30ಡಾ. ವಿಷ್ಣುವರ್ಧನ್ ಅವರ ಸಮಾಧಿಯನ್ನು ನೆಲಸಮ ಮಾಡಿರುವುದನ್ನು ಖಂಡಿಸಿ ಡಾ ವಿಷ್ಣು ಸೇನಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ಸರ್ಕಾರದವರು ಡಾ. ವಿಷ್ಣುವರ್ಧನ್ ಅವರನ್ನು ಶತ್ರು ರಾಷ್ಟ್ರದವರ ಹಾಗೆ ನೋಡುತ್ತಿದ್ದಾರೆ. ಸಮಾಧಿ ನೆಲಸಮ ಮಾಡಿದ ದ್ರೋಹಿಯನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯ.

ಹುಬ್ಬಳ್ಳಿ: ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿರುವ ಡಾ. ವಿಷ್ಣುವರ್ಧನ್ ಅವರ ಸಮಾಧಿಯನ್ನು ನೆಲಸಮ ಮಾಡಿರುವುದನ್ನು ಖಂಡಿಸಿ ಡಾ ವಿಷ್ಣು ಸೇನಾ ಸಮಿತಿ ಧಾರವಾಡ ಜಿಲ್ಲಾ ಘಟಕ ಹುಬ್ಬಳ್ಳಿ ವತಿಯಿಂದ ನಗರದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಾತನಾಡಿ, ಕರ್ನಾಟಕ ಸಾಂಸ್ಕೃತಿಗೆ ರಾಯಭಾರಿಗೆ ಈ ರಾಜ್ಯ ಸರ್ಕಾರ ಬಹುದೊಡ್ಡ ಅವಮಾನ ಮಾಡಿದೆ ಎಂದು ಕಿಡಿಕಾರಿದರು.

ಸಮಿತಿಯ ಜಿಲ್ಲಾಧ್ಯಕ್ಷ ಮೃತ್ಯುಂಜಯ ಹಿರೇಮಠ ಮಾತನಾಡಿ, ಸರ್ಕಾರದವರು ಡಾ. ವಿಷ್ಣುವರ್ಧನ್ ಅವರನ್ನು ಶತ್ರು ರಾಷ್ಟ್ರದವರ ಹಾಗೆ ನೋಡುತ್ತಿದ್ದಾರೆ. ಸಮಾಧಿ ನೆಲಸಮ ಮಾಡಿದ ದ್ರೋಹಿಯನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ನಂತರ ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ, ಕರ್ನಾಟಕ ರಕ್ಷಣಾ ವೇದಿಕೆಯ ಹನುಮಂತಪ್ಪ ಮೇಟಿ, ಜೈ ಭೀಮ್ ಸಂಘಟನೆಯ ಅಧ್ಯಕ್ಷ ಹರೀಶ್ ಗುಂಟ್ರಾಳ. ಶ್ರಮಜೀವಿ ಆಟೋ ಚಾಲಕರು ಸಂಘದ ಅಧ್ಯಕ್ಷ ಚಿದಾನಂದ ಸವದತ್ತಿ, ಜೆಂಟ್ಸ್ ಗ್ರೂಫ್‌ನ ದಿವಾನಸಾಬ್ ನದಾಫ್, ಸಂಗೊಳ್ಳಿ ರಾಯಣ್ಣನ ಬಳಗದ ಸುರೇಶ್ ಗೋಕಾಕ, ಕರವೇ ಅಧ್ಯಕ್ಷ ಪ್ರವೀಣ್ ಗಾಯಕವಾಡ, ವಿಜಯ ಸೇನೆ ಸಂಚಾಲಕ ಸುರೇಶ್ ಹಳ್ಳಿಕೇರಿ, ಚಂದ್ರಶೇಖರ ಗೋಕಾಕ್, ನೂರ್ ಅಹಮದ್, ಬಸವರಾಜ್ ಖಾನಾಪುರ್, ಮೌಲಾಸಾಬ, ಸಂಜಯ ದಮ್ಮಕನಾಳ, ಮಂಜುನಾಥ ಸಿಂಗ ಭವಾನಿ, ಪ್ರಮೋದ್ ನಾಝರೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!