ಯಲ್ಲಾಪುರ: ಕ್ಷೇತ್ರ ಶಿಕ್ಷಾಣಾಧಿಕಾರಿ ಕಾರ್ಯಾಲಯ ಮತ್ತು ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಸಹೋಯೋಗದಲ್ಲಿ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿಶ್ವದರ್ಶನ ಕನ್ನಡಮಾಧ್ಯಮ ಪ್ರೌಢಶಾಲೆಯು ವಿದ್ಯಾರ್ಥಿಗಳ ಉತ್ತಮ ಸಾಧನೆಯ ಮೂಲಕ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದಿದೆ.ಶುಕ್ರವಾರ, ಶನಿವಾರ ನಡೆದ ಕ್ರೀಡಾಕೂಟದಲ್ಲಿ ಜಾವೆಲಿನ್ ಎಸೆತದಲ್ಲಿ ಪುನೀತ್ ಮರಾಠಿ, ಯೋಗದಲ್ಲಿ ಮುಕ್ತಾ ಭಟ್ಟ, ರಿದಮಿಕ್ ಯೋಗದಲ್ಲಿ ಸಂಪದಾ ಭಟ್ಟ ಮತ್ತು ಶ್ಲೋಕಾ ನಾಯ್ಕ, ಬಾಲಕರ ಯೋಗ ರಿದಮಿಕ್ ಸಿಂಗಲ್ಸ್ನಲ್ಲಿ ಅಜಯ್ ಹೊರಣಿ, ಬಾಲಕಿಯರ ಯೋಗ ರಿದಮಿಕ್ ಸಿಂಗಲ್ಸ್‌ನಲ್ಲಿ ಮೇಘಾ ಮರಾಠಿ, ೨೦೦ ಮೀ ಓಟದಲ್ಲಿ ಭುವನ ಪಟಗಾರ, ಉದ್ದ ಜಿಗಿತ, ೪೦೦ ಮೀ. ಓಟ ಮತ್ತು ೪೦೦ ಮೀ. ಹರ್ಡಲ್ಸ್‌ಗಳಲ್ಲಿ ಗಣೇಶ್ ಭಟ್ಟ, ತ್ರಿವಿಧ ಜಿಗಿತದಲ್ಲಿ ತೇಜಸ್ ಹರಿಕಂತ್ರ, ಎತ್ತರ ಜಿಗಿತ ಮತ್ತು ಪೋಲ್ ವಾಲ್ಟ್‌ಗಳಲ್ಲಿ ಶ್ರೀನಿವಾಸ್ ಸೋಮಾಪುರಕರ, ೧೧೦ ಮೀ. ಹರ್ಡಲ್ಸ್ ಮತ್ತು ಚಕ್ರ ಎಸೆತಗಳಲ್ಲಿ ಸಂಕೇತ್ ನಾಯ್ಕ್, ಬಾಲಕರ ರಿಲೇ ಮತ್ತು ವಾಲಿಬಾಲ್ ತಂಡಗಳು ಮತ್ತು ಚೆಸ್‌ನಲ್ಲಿ ಮಹೇಶ್ ಶಿಂಧೆ ಮತ್ತು ಚೈತ್ರಾ ದೀಕ್ಷಿತ್ ಪ್ರಥಮ ಸ್ಥಾನ ಮತ್ತು ೩೦೦೦ ಮೀ. ಓಟದಲ್ಲಿ ಆಶಾ ಲಮ್ಮಣಿ, ಹ್ಯಾಮಾರ್ ಎಸೆತದಲ್ಲಿ ನಿಧಾ ಖಾನ್, ಪೋಲ್ ವಾಲ್ಟ್ ಮತ್ತು ೧೫೦೦ ಮೀ ಓಟದಲ್ಲಿ, ಆದಿತ್ಯ ಮರಾಠಿ, ೨೦೦ಮೀ. ಓಟದಲ್ಲಿ ಭೂಮಿಕಾ ಗೌಡ, ನಡಿಗೆಯಲ್ಲಿ ವಿಕ್ರಂ ಜೋರೆ, ಎತ್ತರ ಜಿಗಿತದಲ್ಲಿ ಸಂಕೇತ್ ಪೇಡನೇಕರ್, ೧೧೦ಮೀ. ಹರ್ಡಲ್ಸ್‌ನಲ್ಲಿ ಇಂಚರ ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕರ ಖೋಖೋ, ಬಾಲಕರ ಮತ್ತು ಬಾಲಕಿಯರ ಥ್ರೋಬಾಲ್ ತಂಡಗಳು, ಬಾಲಕರ ೪೦೦ಮೀ ರಿಲೇ ದ್ವಿತೀಯ ಮತ್ತು ಹ್ಯಾಮರ್ ಥ್ರೋ ಮುಕ್ತಾ ಭಟ್ಟ, ೧೫೦೦ ಮೀ ಓಟದಲ್ಲಿ ಹೇಮಂತ್ ವಾಲ್ಮೀಕಿ, ಲಾಂಗ್ ಜಂಪ್‌ನಲ್ಲಿ ಸಂಕೇತ ನಾಯ್ಕ, ೪೦೦ ಮೀ ಓಟದಲ್ಲಿ ವಿನಯ ನೀರಲಗಿ, ೪೦೦ ಮೀ. ಓಟದಲ್ಲಿ ನಾಗಶ್ರೀ ಪಡ್ತಿ, ಹರ್ಡಲ್ಸ್‌ನಲ್ಲಿ ಶ್ರೀನಿವಾಸ್ ಸೋಮಾಪುರಕರ, ಎತ್ತರ ಜಿಗಿತದಲ್ಲಿ ಪ್ರೀತಿ ಆಚಾರಿ ತೃತೀಯ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.ಗಣೇಶ ಭಟ್ಟ ಬಾಲಕರ ವಿಭಾಗದಲ್ಲಿ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾರೆ.