ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಬಸವ ಜಯಂತಿಯಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದ ಮಾತನಾಡಿ, ಪ್ರತಿಯೊಬ್ಬರನ್ನು ಸಮಾನಾಗಿ ಕಾಣಬೇಕೆಂದು ಮೇಲುಕೀಳಿನ ವಿರುದ್ಧ ಹೋರಾಟ ಮಾಡಿದ ಬಸವಣ್ಣನವರ ತತ್ವ, ಅದರ್ಶಗಳನ್ನು ಪಾಲಿಸಬೇಕೆಂದು ಸಲಹೆ ನೀಡಿದರು.
12ನೇ ಶತನಮಾನದಲ್ಲಿ ಅನುಭವ ಮಂಟಪ ನಿರ್ಮಿಸಿ ಸಮಾನತೆ ಬಗ್ಗೆ ವಿಶ್ವಕ್ಕೆ ಮಾದರಿಯಾದರು. ಕಾಯಕವೇ ಕೈಲಾಸ ಎನ್ನುತ್ತಾ ಮಾಡುವ ಕೆಲಸದಲ್ಲಿಯೇ ದೇವರು ಕಾಣಬಹುದು ಎನ್ನುವುದನ್ನು ತಿಳಿಸಿಕೊಟ್ಟರು.ಬಸವ ಜಯಂತಿ ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತವಲ್ಲ. ಬದಲಾಗಿ ಎಲ್ಲ ಸಮುದಾಯಗಳ ಒಳಿತಿಗಾಗಿ ಹೋರಾಟ ನಡೆಸಿದ ಮಹಾನ್ ಚೇತನ. ಹೀಗಾಗಿ ಎಲ್ಲ ಸಮುದಾಯದವರು ಜಯಂತಿ ಆಚರಿಸಬೇಕು ಎಂದರು.
ಕಿಕ್ಕೇರಿ:ವಿಶ್ವಗುರು ಬಸವೇಶ್ವರ ತತ್ವವನ್ನು ಕಾಯಕವಾಗಿ ಸ್ವೀಕರಿಸಿದರೆ ಸಮಸಮಾಜದ ನಿರ್ಮಾಣಕ್ಕೆ ಸಾಧ್ಯವಾಗಲಿದೆ ಎಂದು ಪಿಡಿಒ ಬಿ.ಎಸ್.ವಿಜಯ್ ತಿಳಿಸಿದರು.
ಐಕನಹಳ್ಳಿ ಗ್ರಾಪಂನಲ್ಲಿ ನಡೆದ ಬಸವೇಶ್ವರ ಜಯಂತಿಯಲ್ಲಿ ಮಾತನಾಡಿ, ಮೇಲು ಕೀಳು ಅಸಮಾನತೆ ತೊಡೆದು ವಚನ ಸಾಹಿತ್ಯದ ಮೂಲಕ ಕ್ರಾಂತಿ ಸಾರಿದವರು ಬಸವಣ್ಣ. ಅಂತರ್ ಜಾತಿ ವಿವಾಹಕ್ಕೆ ಪ್ರೋತ್ಸಾಹ, ಸರಳ ವಿವಾಹಕ್ಕೆ ಒತ್ತು ನೀಡಿದ ಮನುಕುಲದ ಆಧ್ಯಾತ್ಮಿಕ ಶರಣಗುರು ಇವರಾಗಿದ್ದಾರೆ ಎಂದರು.ಬಸವಣ್ಣ ವಚನ ಚಳವಳಿ ಮೂಲಕ ಕ್ರಾಂತಿ ಮಾಡಿದರು. ಜಾತಿ, ಕುಲ, ಮತ ಬಿಟ್ಟು ಮಾನವ ಧರ್ಮ, ಮಾನವ ಪ್ರೀತಿ ಬಲು ದೊಡ್ಡದು ಎಂದು ಸಾರಿ ಕಲ್ಯಾಣ ಸಾಮ್ರಾಜ್ಯದ ತತ್ವ ಸಾರಿದ ಮಹಾನ್ ನಾಯಕ ಎಂದರು.ಇದೇ ವೇಳೆ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಿಸಲಾಯಿತು. ಗ್ರಾಪಂ ಕಾರ್ಯದರ್ಶಿ ಪ್ರಭುನಂದ, ಸಿಬ್ಬಂದಿ ಮಂಜೇಗೌಡ, ಶಿವು, ಹರೀಶ್, ಉಮೇಶ್ ಉಪಸ್ಥಿತರಿದ್ದರು.