ಸೃಜನಶೀಲತೆ, ಕೌಶಲದ ಪ್ರತೀಕ ವಿಶ್ವಕರ್ಮರು

KannadaprabhaNewsNetwork |  
Published : Sep 19, 2026, 01:30 AM IST
18 ಬೀರೂರು1ಬೀರೂರಿನ ಪುರಸಭೆ ಕಚೇರಿಯಲ್ಲಿ ಶುಕ್ರವಾರ ವಿಶ್ವಕರ್ಮ ಜಯಂತಿ ನಡೆಯಿತು. ವಿಶ್ವಕರ್ಮ ಸಮಾಜದ ಅಧ್ಯಕ್ಷ ವಿಶ್ವೇಶ್ವರಾಚಾರ್ ,ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್, ಆರೋಗ್ಯ ನಿರೀಕ್ಷಕ ವೈ.ಎಂ.ಲಕ್ಷö್ಮಣ್, ಮುಬಾರಕ್ ಬಿ.ಟಿ.ಚಂದ್ರಶೇಖರ್ ಸೇರಿದಂತೆ ಮತ್ತಿತರಿದ್ದರು. | Kannada Prabha

ಸಾರಾಂಶ

ಬೀರೂರುವಿಶ್ವಕರ್ಮರು ಸೃಜನಶೀಲತೆ, ಕೌಶಲ, ಪರಿಶ್ರಮ ಹಾಗೂ ನಿರ್ಮಾಣ ಕಲೆ ಪ್ರತೀಕವಾಗಿದ್ದಾರೆ. ವಿಶ್ವಕರ್ಮ ಜಯಂತಿ ಕಾಯಕ, ಕೌಶಲ ಹಾಗೂ ಸೃಜನಶೀಲತೆ ಗೌರವಿಸುವ ಮಹತ್ವದ ದಿನ. ಯುವಜನತೆ ವಿಶ್ವಕರ್ಮರ ಕಾಯಕ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಪುರಸಭೆ ಆಶ್ರಯ ಸಮಿತಿ ಸದಸ್ಯ ಎನ್. ಮುಬಾರಕ್ ಹೇಳಿದರು.

ಎನ್.ಮುಬಾರಕ್‌ ಅಭಿಮತ। ಪುರಸಭೆ ಕಚೇರಿಯಲ್ಲಿ ನಡೆದ ವಿಶ್ವಕರ್ಮ ಜಯಂತಿ

ಕನ್ನಡಪ್ರಭ ವಾರ್ತೆ, ಬೀರೂರು

ವಿಶ್ವಕರ್ಮರು ಸೃಜನಶೀಲತೆ, ಕೌಶಲ, ಪರಿಶ್ರಮ ಹಾಗೂ ನಿರ್ಮಾಣ ಕಲೆ ಪ್ರತೀಕವಾಗಿದ್ದಾರೆ. ವಿಶ್ವಕರ್ಮ ಜಯಂತಿ ಕಾಯಕ, ಕೌಶಲ ಹಾಗೂ ಸೃಜನಶೀಲತೆ ಗೌರವಿಸುವ ಮಹತ್ವದ ದಿನ. ಯುವಜನತೆ ವಿಶ್ವಕರ್ಮರ ಕಾಯಕ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಪುರಸಭೆ ಆಶ್ರಯ ಸಮಿತಿ ಸದಸ್ಯ ಎನ್. ಮುಬಾರಕ್ ಹೇಳಿದರು.

ಪುರಸಭೆ ಕಚೇರಿಯಲ್ಲಿ ಶುಕ್ರವಾರ ಪುರಸಭೆ ಮತ್ತು ವಿಶ್ವಕರ್ಮ ಸಮುದಾಯದಿಂದ ನಡೆದ ವಿಶ್ವಕರ್ಮ ಜಯಂತಿಯಲ್ಲಿ ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ವಿಶ್ವಕರ್ಮರು ಕಲೆ, ಶಿಲ್ಪ ಹಾಗೂ ನಿರ್ಮಾಣ ಕೌಶಲಕ್ಕೆ ಹಾಕಿಕೊಟ್ಟ ಅಡಿಪಾಯ ಇಂದಿಗೂ ಪ್ರಸ್ತುತ.. ಅವರ ಕಾಯಕ ತತ್ವ, ಪರಿಶ್ರಮ, ಸೃಜನಶೀಲತೆ ಹಾಗೂ ವೃತ್ತಿಪರ ನೈಪುಣ್ಯ ಮೈಗೂಡಿಸಿಕೊಂಡು ಜೀವನದಲ್ಲಿ ಅಭ್ಯುದಯ ಸಾಧಿಸಬೇಕು. ಕೌಶಲಕ್ಕೆ ಗೌರವ ನೀಡುವ ಮೂಲಕ ಯುವಜನತೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದರು.

ವಿಶ್ವಕರ್ಮ ಜಯಂತಿ ಆಚರಣೆ ಆ ಸಮುದಾಯಕ್ಕೆ ಮಾತ್ರ ಸೀಮಿತವಲ್ಲ. ಸಮಾಜದ ಎಲ್ಲರೂ ಭಾಗವಹಿಸಿ ಆಚರಣೆ ಮಾಡಿದಾಗ ಎಲ್ಲಾ ಸಮುದಾಯಗಳ ಬಾಂಧವ್ಯ ಗಟ್ಟಿಯಾಗುತ್ತದೆ ಎಂದು ಹೇಳಿದರು.

ಸಮಾಜದ ಅಧ್ಯಕ್ಷ ವಿಶ್ವೇಶ್ವರಾಚಾರ್ ಮಾತನಾಡಿ ವಿಶ್ವಕರ್ಮ ದೇವಶಿಲ್ಪಿ ಎಂದು ಕೆಲವು ವಿದ್ವಾಂಸರು ಹೇಳಿದರೆ ಜಗತ್ತಿನ ಸರ್ವಸೃಷ್ಠಿಗೂ ವಿಶ್ವಕರ್ಮ ಕರ್ತೃ ಎಂದು ಅನೇಕ ವಿದ್ವಾಂಸರು ಧೃಡಪಡಿಸಿದ್ದಾರೆ. ಪುರಾಣದಲ್ಲಿ ಪುಷ್ಪ ಕವಿಮಾನ, ದ್ವಾರಕೆ ನಿರ್ಮಾಣದಿಂದ ಹಿಡಿದು ವಿಶ್ವಕರ್ಮರು ಅನೇಕ ನಿರ್ಮಾಣಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಸಮಾಜದ ಮೂಲ ಕಸುಬುಗಳನ್ನು ಉಳಿಸಿಕೊಂಡು ಹೋಗುವ ಕೆಲಸ ಇಂದು ಆಗಬೇಕಿದೆ. ಹಿಂದಿನ ಕಾಲದ ವಸ್ತುಗಳ ಕಲಾತ್ಮಕತೆ ಉಳಿಸಿಕೊಂಡು ಹೋಗುವ ಜತೆಗೆ, ತಂತ್ರಜ್ಞಾನ ಬಳಕೆಯ ಸಂದರ್ಭದಲ್ಲೂ ಹಿಂದಿನ ವಿಶಿಷ್ಠತೆ ಗಳನ್ನು ಉಳಿಸಬೇಕು ಎಂದು ಹೇಳಿದರು.

ಸಮಾಜದ ಭಾರ್ಗವ್ ಮಾತನಾಡಿ ವಿಶ್ವಕರ್ಮರ ಜತೆಯಲ್ಲಿ ಬದುಕದ ಮನುಷ್ಯ ಜಗತ್ತಿನಲ್ಲಿ ಇಲ್ಲ. ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ ವಿಶ್ವಕರ್ಮರನ್ನು ನೆನಪಿಸುವ ಕಾರ್ಯ ಜಯಂತಿ ಮೂಲಕ ನಡೆಯುತ್ತಿರುವುದು ಉತ್ತಮ ಬೆಳವಣಿಗೆ. ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಸೇವೆ ಸಲ್ಲಿಸಿದ ಹಿರಿಯರನ್ನು ಗೌರವಿಸುವ ಮೂಲಕ ಆಚರಣೆ ನಡೆಸಿದರೆ ಜಯಂತಿ ಅರ್ಥಪೂರ್ಣ ಎಂದರು.

ಪುರಸಭೆ ಆಶ್ರಯ ಕಮಿಟಿ ಸದಸ್ಯ ಬಿ.ಟಿ.ಚಂದ್ರಶೇಖರ್, ಮುಖ್ಯಾಧಿಕಾರಿ ಮಂಜುನಾಥ್, ಆರೋಗ್ಯ ನಿರೀಕ್ಷಕ ವೈ.ಎಂ.ಲಕ್ಷ್ಮಣ್, ವಿಶ್ವಕರ್ಮ ಮಹಿಳಾ ಸಮಾಜದ ಅಧ್ಯಕ್ಷೆ ಲತಾವಿಶೇಷ್, ಸೋಮಶೇಖರಾಚಾರ್, ಏಕುಮಾರ್, ಎಂ.ಪಿ. ನಾಗರಾಜ್, ಜಯಕುಮಾರ್, ಸೇರಿದಂತೆ ಪುರಸಭಾ ಸಿಬ್ಬಂದಿ ಇದ್ದರು.

18 ಬೀರೂರು1

ಬೀರೂರಿನ ಪುರಸಭೆಯಲ್ಲಿ ನಡೆದ ವಿಶ್ವಕರ್ಮ ಜಯಂತಿಯಲ್ಲಿ ಸಮಾಜದ ಅಧ್ಯಕ್ಷ ವಿಶ್ವೇಶ್ವರಾಚಾರ್ , ಪುರಸಭೆ ಮುಖ್ಯಾಧಿ ಕಾರಿ ಮಂಜುನಾಥ್, ಆರೋಗ್ಯ ನಿರೀಕ್ಷಕ ವೈ.ಎಂ.ಲಕ್ಷ್ಮಣ್, ಮುಬಾರಕ್ ಬಿ.ಟಿ.ಚಂದ್ರಶೇಖರ್ ಮತ್ತಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುನಿದ ವರುಣ: ಸಂಕಷ್ಟಕ್ಕೆ ಸಿಲುಕಿದ ಅನ್ನದಾತರು
ಕ್ರಷರ್‌ ಮಾಲೀಕರ ಪ್ರತಿಭಟನಗೆ ರೈತಸಂಘ ವಿರೋಧ