ಶಿಲ್ಪಕಲೆ ಕ್ಷೇತ್ರಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ: ಮಂಜುನಾಥ ಅಬ್ಬಿಗೇರಿ

KannadaprabhaNewsNetwork |  
Published : Oct 03, 2025, 01:07 AM IST
ಕಾರ್ಯಕ್ರಮವನ್ನು ಮಂಜುನಾಥ ಅಬ್ಬಿಗೇರಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಬೆಟಗೇರಿಯ ಹೊಸಪೇಟೆ ಚೌಕ್ ಓಣಿಯಲ್ಲಿರುವ ಕಾಳಿಕಾದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ ಅಂಗವಾಗಿ ಜಾಗೃತಿ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.

ಗದಗ: ಭಗವಾನ್ ವಿಶ್ವಕರ್ಮ ದೇವಲೋಕದ ಶಿಲ್ಪಿಯಾಗಿದ್ದು, ಅವನ ವಂಶಜರಾದ ವಿಶ್ವಕರ್ಮರು ಕರ್ಮ ಅಂದರೆ ಕಾಯಕ ಜೀವಿಗಳಾಗಿದ್ದಾರೆ. ದೇವರು, ಮಠ, ಮಂದಿರ, ಶಿಲ್ಪಕಲಾಕೃತಿಗಳ ನಿರ್ಮಾಣ ಈ ಸಮುದಾಯದ ದೊಡ್ಡ ಕೊಡುಗೆಯಾಗಿದೆ ಎಂದು ಮಂಜುನಾಥ ಅಬ್ಬಿಗೇರಿ ತಿಳಿಸಿದರು.

ಬೆಟಗೇರಿಯ ಹೊಸಪೇಟೆ ಚೌಕ್ ಓಣಿಯಲ್ಲಿರುವ ಕಾಳಿಕಾದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಿರಿಯ ಸಾಹಿತಿ ಡಿ.ವಿ. ಬಡಿಗೇರ, ವರವಿ ಕ್ಷೇತ್ರದ ಮೌನೇಶ್ವರ ದೇವಸ್ಥಾನ ಹಾಗೂ ಮಠದ ವಿಕಾಸ ಟ್ರಸ್ಟ್ ಕಮಿಟಿ ಅಧ್ಯಕ್ಷ ಮೋಹನ ನರಗುಂದ, ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಗೋಪಾಲ ಕಡ್ಲಿಕೊಪ್ಪ ಮುಂತಾದವರು ಮಾತನಾಡಿದರು. ಬೆಟಗೇರಿ ಕಾಳಿಕಾದೇವಿ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಶ್ರೀಧರ ಕೊಣ್ಣೂರ ಅಧ್ಯಕ್ಷತೆ ವಹಿಸಿದ್ದರು.ನಗರಸಭೆ ಸದಸ್ಯ ಮಾಧುಸಾ ಟಿ. ಮೇರವಾಡೆ, ಪ್ರವಚನಕಾರ ರಾಮಕೃಷ್ಣ ಕಲ್ಯಾಣಿ ಅಜ್ಜನವರು, ಟ್ರಸ್ಟ್ ಕಮಿಟಿ ಮಾಜಿ ಅಧ್ಯಕ್ಷ ಬಾಲರಾಜ ಕೊಣ್ಣೂರ, ಟ್ರಸ್ಟ್ ಕಮಿಟಿ ಮಾಜಿ ನಿರ್ದೇಶಕ ವೀರೇಶ ಅಕ್ಕಸಾಲಿ, ಕಾಳಿಕಾದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಅನಂತಾಚಾರ್ಯ ಅರ್ಕಸಾಲಿ ಉಪಸ್ಥಿತರಿದ್ದರು.

ಈ ವೇಳೆ ಹಿರಿಯ ಪತ್ರಕರ್ತ ಹಾಗೂ ಹವ್ಯಾಸಿ ರಂಗಕರ್ಮಿ ಮೌನೇಶ ಬಡಿಗೇರ(ನರೇಗಲ್ಲ), ಶೋಭಾ ನರಗುಂದ, ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಸತೀಶ ಹೊರಪೇಟೆ ಅವರನ್ನು ಸನ್ಮಾನಿಸಲಾಯಿತು. ವಿಶ್ವಕರ್ಮ ಗಾಯತ್ರಿ ಮಹಿಳಾ ಮಂಡಳ ವತಿಯಿಂದ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನರೆವೇರಿತು. ಸುತಾರ ಸಾಂಸ್ಕೃತಿಕ ಕಲಾ ಸಂಘದ ತಂಡದವರು ಸಂಗೀತ ಸೇವೆ ನೀಡಿದರು.ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕರಾದ ವಿಶ್ವನಾಥ ಯ. ಕಮ್ಮಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಎಲ್. ಅಕ್ಕಸಾಲಿ ನಿರೂಪಿಸಿದರು. ಅಶೋಕ ಸುತಾರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ಕುರಿತು ಇಂದು ರಾಜ್ಯ ವಿಶೇಷ ಸಂಪುಟ ಸಭೆ
ಫೆ.13ಕ್ಕೆ ಕಾಂಗ್ರೆಸ್‌ ಸರ್ಕಾರಕ್ಕೆ 1000 ದಿನ