ಕುಷ್ಟಗಿ ಪಟ್ಟಣದ ಕಾಳಿಕಾದೇವಿ ದೇವಸ್ಥಾನದಲ್ಲಿ ತಾಲೂಕು ಆಡಳಿತ ಹಾಗೂ ವಿಶ್ವಕರ್ಮ ಸಮಾಜದ ವತಿಯಿಂದ ತಾಲೂಕು ಮಟ್ಟದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ನಡೆಯಿತು.
ಕುಷ್ಟಗಿ: ವಿಶ್ವಕರ್ಮ ಸಮಾಜದವರು ಹುಟ್ಟುತ್ತಲೇ ಎಂಜಿನಿಯರ್‌ಗಳು ಎಂದು ವಿಶ್ವಕರ್ಮ ಅಭಿವೃದ್ಧಿ ನಿಗಮದ ನಿರ್ದೇಶಕ ದೇವಪ್ಪ ಬಡಿಗೇರ ಹೇಳಿದರು.ಪಟ್ಟಣದ ಕಾಳಿಕಾದೇವಿ ದೇವಸ್ಥಾನದಲ್ಲಿ ತಾಲೂಕು ಆಡಳಿತ ಹಾಗೂ ವಿಶ್ವಕರ್ಮ ಸಮಾಜದ ವತಿಯಿಂದ ನಡೆದ ತಾಲೂಕು ಮಟ್ಟದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಹಿಂದಿನ ಕಾಲದಲ್ಲಿ ವಿಶ್ವಕರ್ಮ ಸಮಾಜದವರು ಮನೆ ನಿರ್ಮಾಣ, ದೇವಸ್ಥಾನದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದವರು ಎಂದು ಹೇಳಿದರು.ದೇಶದ ಬೆನ್ನೆಲುಬು ರೈತನಾದರೆ, ರೈತನ ಬೆನ್ನೆಲುಬು ವಿಶ್ವಕರ್ಮರು. ರೈತನಿಗೆ ಬಿತ್ತನೆ ಮಾಡಬೇಕಾದ ಬಿತ್ತನೆ ಸಾಮಗ್ರಿಗಳನ್ನು ತಯಾರಿಸಿ ಕೊಡುವವರು ವಿಶ್ವಕರ್ಮದವರು ಎಂದು ಹೇಳಿದರು.
ಮಾಜಿ ಶಾಸಕ ಕೆ. ಶರಣಪ್ಪ ಮಾತನಾಡಿ, ವಿಶ್ವಕರ್ಮ ಸಮಾಜದವರು ದೇವಿ ಉಪಾಸಕರು. ಈ ಸಮಾಜದಲ್ಲಿ ಸಂಘಟನೆ ಕೊರತೆಯಿದ್ದು ಎಲ್ಲರೂ ಒಗ್ಗಟ್ಟಾಗುವ ಮೂಲಕ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರೊಂದಿಗೆ ವಿದ್ಯಾವಂತರನ್ನಾಗಿ ಮಾಡಿ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿ ಹೊಂದಬೇಕು ಎಂದರು.ಸಾಹಿತಿ ಮೌನೇಶ ನವಲಳ್ಳಿ ಉಪನ್ಯಾಸ ನೀಡಿ, ಸಮಾಜದಲ್ಲಿ ಸಂಘಟನೆ ಕೊರತೆಯಿದ್ದರೂ ನಾವು ಸಾತ್ವಿಕ ಬದುಕು ನಡೆಸುತ್ತಿದ್ದೇವೆ. ನಮ್ಮ ಸಮಾಜದಲ್ಲಿ ಆರ್ಥಿಕವಾಗಿ ಸ್ಥಿತಿವಂತವರಿದ್ದವರು ಬಡವರಿಗೆ ಸಹಾಯ ಮಾಡಬೇಕು, ಮಕ್ಕಳನ್ನು ಓದಿಸಲು ಮುಂದೆ ಬರಬೇಕು. ಸಮಾಜದಲ್ಲಿ ಸೌಹಾರ್ದಯುತವಾಗಿ ಜೀವನ ನಡೆಸಬೇಕು ಎಂದರು.ಗ್ರೇಡ್ 2 ತಹಸೀಲ್ದಾರ್ ರಜನಿಕಾಂತ ಕೆಂಗಾರಿ, ದಿವಾಕರ ಸ್ವಾಮೀಜಿ, ಬ್ರಹ್ಮೇಂದ್ರ ಸ್ವಾಮೀಜಿ, ಎಸ್.ಕೆ. ಬಡಿಗೇರ, ಶಿವಕುಮಾರ ಬಡಿಗೇರ, ದೇವೇಂದ್ರಪ್ಪ ಬಡಿಗೇರ, ಈಶಪ್ಪ ಬಡಿಗೇರ, ನರಸಿಂಹ ಆಚಾರ ಲೇಬಗಿರಿಮಠ, ತಾಲೂಕು ಅಧ್ಯಕ್ಷ ಶರಣಪ್ಪ ಬಡಿಗೇರ, ಮಹದೇವಪ್ಪ ಕಮ್ಮಾರ, ಚಿದಾನಂದಪ್ಪ ಬಡಿಗೇರ, ಸವಿತಾ ಬಡಿಗೇರ, ಗಾಯತ್ರಿ ಬಡಿಗೇರ, ಸಿದ್ದಪ್ಪ ಬಡಿಗೇರ, ಮಾನಪ್ಪ ಕಮ್ಮಾರ, ಅನಿಲಕುಮಾರ ಕಮ್ಮಾರ ಮೊದಲಾವದರು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.