ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಮಂಗಳವಾರ ನಡೆದ ಶ್ರೀ ಭಗವಾನ್ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಎಂಜಿನಿಯರ್‌ಗಳ ರೀತಿಯಲ್ಲಿ ವಿಶ್ವಕರ್ಮರು ಮರ, ಚಿನ್ನ ಕೆತ್ತನೆ, ಕಬ್ಬಿಣ ಕೆಲಸ ಹೀಗೆ ಹಲವು ರೀತಿಯ ವೃತ್ತಿ ಕೌಶಲ್ಯದಲ್ಲಿ ತೊಡಗಿಸಿಕೊಂಡು ಕಾಯಕವೇ ಕೈಲಾಸ ಎಂಬಂತೆ ವೃತ್ತಿಯನ್ನೇ ಕುಲಕಸುಬನ್ನಾಗಿ ಮಾಡಿಕೊಂಡು ಮುನ್ನಡೆಯುತ್ತಾರೆ ಎಂದು ಸೋಮಣ್ಣ ನುಡಿದರು.ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಯಾವುದೇ ಗೃಹ ನಿರ್ಮಾಣ ಸೇರಿದಂತೆ ಹಲವು ಕಟ್ಟಡ ಕೆಲಸಗಳು, ಮರಗೆಲಸ, ಉಳುಮೆ ಮಾಡುವ ಕೆಲಸದ ಉಪಕರಣಗಳನ್ನು ವಿಶ್ವಕರ್ಮರು ತಯಾರು ಮಾಡುತ್ತಾರೆ. ಆ ನಿಟ್ಟಿನಲ್ಲಿ ದೇಶಕ್ಕೆ ವಿಶ್ವಕರ್ಮ ಸಮಾಜದವರ ಕೊಡುಗೆ ಅಪಾರ ಎಂದರು.
ವಿಶ್ವಕರ್ಮ ಸಮಾಜದ ಅಭಿವೃದ್ಧಿಗೆ ನಿವೇಶನ ಒದಗಿಸಿದಲ್ಲಿ ಭವನ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು. ಆ ನಿಟ್ಟಿನಲ್ಲಿ ಈಗಾಗಲೇ ಗುರುತಿಸಲಾಗಿರುವ ಜಾಗವನ್ನು ವಿಶ್ವಕರ್ಮ ಸಮಾಜಕ್ಕೆ ಒದಗಿಸುವಂತಾಗಬೇಕು ಎಂದು ದೇವದಾಸ್ ಮನವಿ ಮಾಡಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಸಿ.ರಂಗಧಾಮಪ್ಪ ಮಾತನಾಡಿ, ಎಲ್ಲಿ ಕ್ರಿಯಾ ಚೈತನ್ಯ ಇರುತ್ತದೆ. ಅಲ್ಲಿ ಕೆಲಸ ಕಾಣಬಹುದು. ಆ ನಿಟ್ಟಿನಲ್ಲಿ ಕಬ್ಬಿಣ, ಮರ, ಚಿನ್ನ, ಹೀಗೆ ಪಂಚ ರೀತಿಯ ಕಾರ್ಯ ಕೈಗೊಂಡು ಕಾಯಕ ವೃತ್ತಿಯಲ್ಲಿ ದೇವರನ್ನು ಕಾಣುತ್ತಾರೆ ಎಂದರು.
ವಿಶ್ವಕರ್ಮ ಸಮಾಜ ಸೇವಾ ಸಂಘದ ತಾಲೂಕು ಘಟಕದ ಅಧ್ಯಕ್ಷ ಜಿ.ಜಗದೀಶ್ ಆಚಾರ್ಯ, ಪ್ರಮುಖರಾದ ಪ್ರಕಾಶ್ ಆಚಾರ್ಯ, ಅಶೋಕ್ ಆಚಾರ್, ನಾಗರಾಜ ಆಚಾರ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ವಿಶಾಲ್ ಕುಮಾರ್ ಮತ್ತಿತರರು ಇದ್ದರು.