ವಿಶ್ವಕರ್ಮ ಸಮುದಾಯ ವಾಸ್ತುಶಿಲ್ಪಿ, ಕರಕುಶಲತೆ, ಯಂತ್ರಶಾಸ್ತ್ರ ಮತ್ತು ತಾಂತ್ರಿಕ ಕೌಶಲ್ಯಗಳ ಪರಿಣಿತರಾಗಿದ್ದು ಸಮಾಜ ಮತ್ತು ಸಂಸ್ಕೃತಿಗೆ ತನ್ನದೇ ಆದ ಸುಂದರ ಕೊಡುಗೆಗಳನ್ನು ನೀಡಿದ್ದು, ಪುರಾಣಗಳ ಪ್ರಕಾರ ವಿಶ್ವಕರ್ಮರು ವಿಶ್ವದ ಮೊದಲ ವಾಸ್ತುಶಿಲ್ಪಿ ಮತ್ತು ಎಂಜಿನಿಯರ್ ಎಂದು ಗ್ರೇಡ್೨ ತಹಶೀಲ್ದಾರ್ ರಾಮಪ್ರಸಾದ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಕೊರಟಗೆರೆ
ವಿಶ್ವಕರ್ಮ ಸಮುದಾಯ ವಾಸ್ತುಶಿಲ್ಪಿ, ಕರಕುಶಲತೆ, ಯಂತ್ರಶಾಸ್ತ್ರ ಮತ್ತು ತಾಂತ್ರಿಕ ಕೌಶಲ್ಯಗಳ ಪರಿಣಿತರಾಗಿದ್ದು ಸಮಾಜ ಮತ್ತು ಸಂಸ್ಕೃತಿಗೆ ತನ್ನದೇ ಆದ ಸುಂದರ ಕೊಡುಗೆಗಳನ್ನು ನೀಡಿದ್ದು, ಪುರಾಣಗಳ ಪ್ರಕಾರ ವಿಶ್ವಕರ್ಮರು ವಿಶ್ವದ ಮೊದಲ ವಾಸ್ತುಶಿಲ್ಪಿ ಮತ್ತು ಎಂಜಿನಿಯರ್ ಎಂದು ಗ್ರೇಡ್೨ ತಹಶೀಲ್ದಾರ್ ರಾಮಪ್ರಸಾದ್ ತಿಳಿಸಿದರು.ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ತಾಲೂಕು ವಿಶ್ವಕರ್ಮ ಸಮಾಜ ಸಂಯುಕ್ತ ಆಶ್ರಯದೊಂದಿಗೆ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಮಾಜದ ಕಲ್ಯಾಣಕ್ಕೆ ತಮ್ಮ ಸೇವೆ ಪಣವಾಗಿಟ್ಟಿದ್ದರು, ವೇದ ಪುರಾಣಗಳಲ್ಲಿ ವಿಶ್ವಕರ್ಮರನ್ನು ದೇವರುಗಳ ದೇವರು, ಬ್ರಹ್ಮಾಂಡದ ಸೃಷ್ಠಿಕರ್ತ ಹಾಗೂ ಕಲೆ, ವಾಸ್ತುಶಿಲ್ಪದ ಪಿತಾಮಹಾ ಎಂದು ಬಣ್ಣಿಸಲಾಗಿದ್ದು, ಈ ಸಮುದಾಯ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು. ಸಾಹಿತಿ ಹಾಗೂ ನಿವೃತ್ತ ಉಪನ್ಯಾಸಕ ಮ.ಲ.ನಾ.ಮೂರ್ತಿ ಮಾತನಾಡಿ ವಿಶ್ವಕರ್ಮ ಸಮುದಾಯ ಕಬ್ಬಿಣ, ಕಟ್ಟಿಗೆ, ಕಂಚು, ತಾಮ್ರ, ಬೆಳ್ಳಿ, ಬಂಗಾರ ಮತ್ತು ಶಿಲ್ಪಗಳನ್ನು ಆಧರಿಸಿ ನೈಪುಣ್ಯಗಾರಿಕೆಯಿಂದ ಆಭರಣಗಳನ್ನು, ಆಯುಧಗಳು ಸೇರಿದಂತೆ ನಿತ್ಯ ಜೀವನಕ್ಕೆ ಬೇಕಾಗುವ ವಸ್ತುಗಳನ್ನು ತಯಾರಿಸುತ್ತಾರೆ. ರೈತರಿಗೆ ಕೃಷಿಕ ಪೂರಕವಾದ ಸಾಮಗ್ರಿಗಳನ್ನು ಒದಗಿಸುತ್ತಾ ರೈತರ ಬೆನ್ನೆಲು ಆಗಿ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ವಿಶ್ವಕರ್ಮ ಸಮುದಾಯದ ಸಂಘಟನೆಯ ಕೊರತೆಯಿಂದ ಶೈಕ್ಷಣಿಕವಾಗಿ ಹಿಂದುಳಿದಿದ್ದು ಸಂಘಟನೆ ಮಾಡುವ ಮೂಲಕ ಸಮಾಜದ ಯುವಕರಿಗೆ ಶೈಕ್ಷಣಿಕ ಅಭಿವೃದ್ದಿಗೆ ಉನ್ನತ ವಿದ್ಯೆಕೊಡಿಸಲು ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸುವ ಮೂಲಕ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು. ಮಾರಮ್ಮ ದೇವಿ ಆರ್ಚಕ ಶ್ರೀಧರಾಚಾರ್ ಮಾತನಾಡಿ, ಸಮಾಜಕ್ಕೆ ತನ್ನದೇ ಆದ ಕೊಡಿಗೆ ನೀಡಿದ ವಿಶ್ವಕರ್ಮ ಸಮುದಾಯ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಅಸ್ತಿತ್ವವೇ ಇಲ್ಲದಂತಾಗಿದ್ದು ವಿಶ್ವಕರ್ಮ ಸಮುದಾಯದ ಹುಟ್ಟು ಹಾಗೂ ಬೆಳವಣಿಗೆಯ ಬಗ್ಗೆ ವಿವರಿಸಿ ಮುಂದಿನ ದಿನಗಳಲ್ಲಿ ಸಮುದಾಯದ ಅಭಿವೃದ್ಧಿಗೆ ಸಂಘಟಿತರಾಬೇಕು. ಸರ್ಕಾರ ನೀಡುವ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ದೊರೆಯುವಂತೆ ನೋಡಿಕೊಳ್ಳಬೇಕು ಎಂದರು. ಕಾರ್ಯಕ್ರಮದ ನಂತರ ಪಟ್ಟಣದ ಕಾಳಿಕಾಂಬಾ ದೇವಾಲಯದಲ್ಲಿ ವಿಶ್ವಕರ್ಮ ಸಮುದಾಯದಿಂದ ವಿಶೇಷ ಪೂಜೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ತಾ.ಪಂ ಇಲಾಖೆಯ ಮಧುಸೂದನ್, ತಾಲೂಕು ವ್ಯದ್ಯಾಥಿಕಾರಿ ಡಾ.ವಿಜಯ್‌ಕುಮಾರ್, ಕಂದಾಯ ಇಲಾಖೆಯ ಮಂಜುನಾಥ್, ನಕುಲ್, ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ರವೀಂದ್ರನಾಥ್, ಉಪಾಧ್ಯಕ್ಷ ಆರ್.ಸಿ.ಪ್ರಕಾಶ್‌ಕುಮಾರ್, ತುಂಬಾಡಿ ಕೃಷ್ಣಾಚಾರ್, ನೀಲಕಂಠಚಾರ್, ನಾಗರಾಜು, ಪತ್ರಕರ್ತ ಕೆ.ಎನ್.ಸತೀಶ್. ಅರ್ಚಕ ದೀಪಕ್, ಶಶಿಧರ್, ಚಂದ್ರಕುಮಾರ್, ಗೋವಿಂದಚಾರ್, ನರಸಿಂಹಮೂರ್ತಿ, ಚಂದ್ರಶೇಕರಚಾರ್, ಮಂಜುನಾಥ್, ನಾಗೇಂದ್ರ, ಭುಚನಾಚಾರ್, ವೀರಭದ್ರಚಾರ್, ಯಶವಂತಚಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.