ದೊಡ್ಡಬಳ್ಳಾಪುರ: ದೇಶದ ಸಾಂಸ್ಕೃತಿಕ ಅನನ್ಯತೆಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರ. ಅವರು ಅಭಿಜಾತ ಶಿಲ್ಪ, ಲೋಹ, ಕುಸುರಿ ಸೇರಿದಂತೆ ವಿಶಿಷ್ಟ ಕಲೆಗಳ ಮೂಲಕ ಇತಿಹಾಸವನ್ನು ಅಮರಗೊಳಿಸಿದ್ದಾರೆ ಎಂದು ಶಾಸಕ ಧೀರಜ್ ಮುನಿರಾಜ್ ಹೇಳಿದರು
ದೊಡ್ಡಬಳ್ಳಾಪುರ: ದೇಶದ ಸಾಂಸ್ಕೃತಿಕ ಅನನ್ಯತೆಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರ. ಅವರು ಅಭಿಜಾತ ಶಿಲ್ಪ, ಲೋಹ, ಕುಸುರಿ ಸೇರಿದಂತೆ ವಿಶಿಷ್ಟ ಕಲೆಗಳ ಮೂಲಕ ಇತಿಹಾಸವನ್ನು ಅಮರಗೊಳಿಸಿದ್ದಾರೆ ಎಂದು ಶಾಸಕ ಧೀರಜ್ ಮುನಿರಾಜ್ ಹೇಳಿದರು.
ತಾಲೂಕು ವಿಶ್ವಕರ್ಮ ಸಮಾಜದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಮುದಾಯದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಲ್ಪಕಲೆ, ಲೋಹದ ಕಲೆ ಮೊದಲಾಗಿ ಪಂಚ ಕಸುಬುಗಳ ವಿಶಿಷ್ಟಕಲೆಗಳ ಮೂಲಕ ದೇಶದ ಶ್ರೀಮಂತ ಪರಂಪರೆಗೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ. ವಿಶ್ವಕರ್ಮರು ಶೈಕ್ಷಣಿಕವಾಗಿ ಸಹ ಮುನ್ನಡೆಯಬೇಕಿದ್ದು, ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಉತ್ತೇಜಿಸುವ ಕಾರ್ಯ ಶ್ಲಾಘನೀಯ ಎಂದರು.
ಕಲೆಗೆ ಮೆರುಗು ನೀಡುತ್ತಿರುವ ವಿಶ್ವಕರ್ಮರು ಶ್ರಮಜೀವಿಗಳೂ ಆಗಿದ್ದಾರೆ. ಜಗತ್ತಿನ ಎಲ್ಲಾ ವಸ್ತುಗಳಿಗೂ ಸೃಷ್ಟಿಎನ್ನುವುದು ಇರಬೇಕು. ಅಂತೆಯೇ ಬ್ರಹ್ಮಾಂಡದ ಸೃಷ್ಟಿಕರ್ತ ವಿಶ್ವಕರ್ಮರಾಗಿದ್ದು, ಅವರ ಕಾಯಕ ನಿಷ್ಠೆ ನಮಗೆಲ್ಲಾ ಮಾದರಿಯಾಗಬೇಕಿದೆ. ಯಾವುದೇ ಸಮುದಾಯ ಮುನ್ನಡೆಯಬೇಕಾದರೆ ಶೈಕ್ಷಣಿಕ ಪ್ರಗತಿ ಅಗತ್ಯ. ವಿಶ್ವಕರ್ಮ ಸಮುದಾಯ ಶಿಕ್ಷಣಕ್ಕೆ ಒತ್ತು ನೀಡಿ, ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಬೇಕಿದೆ ಎಂದರು.
ನಿವೃತ್ತ ಎನ್‌ಸಿಸಿ ಅಧಿಕಾರಿ ಮೇಜರ್ ಎಸ್.ಮಹಾಬಲೇಶ್ವರ್ ಮಾತನಾಡಿ, ಇಂದು ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು, ಮೊಬೈಲ್‌ನಿಂದ ಅಡ್ಡದಾರಿ ಹಿಡಿಯುವವರೇ ಹೆಚ್ಚಾಗಿದ್ದಾರೆ. ವಿದ್ಯಾರ್ಥಿ ದಿಸೆಯಲ್ಲಿ ಎನ್ಸಿಸಿ ಮೊದಲಾದ ಸೇವಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು. ಆ ಮೂಲಕ ಬದುಕಲ್ಲಿ ಶಿಸ್ತು ಕಲಿಯಬೇಕು. ಮಹಿಳೆಯರು ಸಹ ಇಂದು ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಪೋಸಕರ ನಡೆಯನ್ನು ಮಕ್ಕಳು ಅನುಸರಿಸುವದರಿಂದ ಪೋಷಕರು ಮಕ್ಕಳಿಗೆ ಮಾದರಿಯಾಗಿರಬೇಕಿದೆ ಎಂದರು.
ಸಮಾಜದ ರಾಜ್ಯ ಕಾರ್ಯದರ್ಶಿ ಚಂದ್ರಶೇಖರ್ ಮಾತನಾಡಿ, ವಿಶ್ವಕರ್ಮ ಸಮುದಾಯ ಎಲ್ಲಾ ರಂಗಳಲ್ಲಿ ಮುನ್ನಡೆಯಬೇಕಾದರೆ, ಸರ್ಕಾರ ಹಾಗೂ ಸಮುದಾಯ ನೀಡುವ ಸೌಲಭ್ಯಗಳನ್ನು ಬಳಸಿಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ವಿಶ್ವಕರ್ಮ ಸಮಾಜದ ರಾಜ್ಯ ಅಧ್ಯಕ್ಷ ಎಂ.ಪಿ.ಈಶ್ವರಾಚಾರ್, ರಾಜ್ಯ ಉಪಾಧ್ಯಕ್ಷ ರವಿಶಂಕರ್.ಡಿ.ಎಲ್, ರಾಜ್ಯ ಖಜಾಂಚಿ ಲಕ್ಷ್ಮಣ್, ಕಾರ್ಯದರ್ಶಿ ಕೆ.ಚಂದ್ರಶೇಖರ್, ಜಿಲ್ಲಾ ಉಪಾಧ್ಯಕ್ಷರಾದ ಬ್ರಹ್ಮಚಾರ್, ಜಗನ್ನಾಥ್, ಜಗದೀಶಾಚಾರ್, ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ನವೀನ್ ಚಂದ್ರ, ಖಜಾಂಚಿ ವೇಣುಗೋಪಾಲಾಚಾರ್, ಉಪಾಧ್ಯಕ್ಷ ಸೋಮಶೇಖರಾಚಾರ್, ರಾಘವೇಂದ್ರಚಾರ್, ಪುಟ್ಟಶಾಮಾಚಾರ್, ಕೋಮಲೇಶ್ವರ್, ಮುನಿಕೃಷ್ಣಚಾರ್ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಛಾಯಾ ಗಿರೀಶ್, ಸವಿತಾ ರಮೇಶಚಾರ್, ಲತಾ ಮೋಹನ್, ಸರಸ್ವತಿ, ಜ್ಯೋತಿ, ವಿಜಯ, ಉಷಾ, ಮೋಹನಚಾರ್, ಶಂಕರಾಚಾರ್, ಯಶೋದ್ ಕುಮಾರ್, ಮಂಜುನಾಥ್, ನವೀನ್, ಭೋಜಾಚಾರ್, ನಾರಾಯಣಚಾರ್ ಮತ್ತಿತರರು ಭಾಗವಹಿಸಿದ್ದರು.
24ಕೆಡಿಬಿಪಿ2-
ದೊಡ್ಡಬಳ್ಳಾಪುರ ತಾಲೂಕು ವಿಶ್ವಕರ್ಮ ಸಮಾಜದಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.