ಭದ್ರಾವತಿಯ ವಿಶ್ವೇಶ್ವರ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ಶೀಘ್ರ ಪ್ರಾರಂಭ: ಸಚಿವ ಎಚ್.ಡಿ. ಕುಮಾರಸ್ವಾಮಿ

KannadaprabhaNewsNetwork |  
Published : Jan 11, 2025, 12:48 AM ISTUpdated : Jan 11, 2025, 12:32 PM IST
10ಕೆಎಂಎನ್ ಡಿ22,23 | Kannada Prabha

ಸಾರಾಂಶ

ಭದ್ರಾವತಿಯ ವಿಶ್ವೇಶ್ವರ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ಪ್ರಾರಂಭ ಮಾಡುತ್ತೇವೆ. ಈ ಬಗ್ಗೆ ಪ್ರಧಾನಿ ನರೇಂದ್ರಮೋದಿ ಅವರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

  ಮದ್ದೂರು : ಭದ್ರಾವತಿಯ ವಿಶ್ವೇಶ್ವರ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ಪ್ರಾರಂಭ ಮಾಡುತ್ತೇವೆ. ಈ ಬಗ್ಗೆ ಪ್ರಧಾನಿ ನರೇಂದ್ರಮೋದಿ ಅವರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ತಾಲೂಕಿನ ಚಾಕನಕೆರೆ ಗ್ರಾಮದ ಕೆರೆಗೆ ಬಾಗೀನ ಅರ್ಪಿಸಿದ ಬಳಿಕ ಮಾತನಾಡಿದ ಅವರು, ಭದ್ರಾವತಿಯಲ್ಲಿ ಕಬ್ಬಿಣ ಕಾರ್ಖಾನೆ ಮುಚ್ಚಲಾಗಿದೆ. ಅದರ ಪ್ರಾರಂಭಕ್ಕೆ 15 ಸಾವಿರ ಕೋಟಿ ರು. ಹಣ ಬೇಕಿದೆ. ಈ ಕಾರ್ಖಾನೆ ಪ್ರಾರಂಭಿಸಿ ಜನರ ಬದುಕಿಗೆ ನೆಲೆ ಕೊಡುತ್ತೇವೆ ಎಂದು ಭರವಸೆ ನೀಡಿದರು.

ಹಲವು ಸಮಸ್ಯೆ ಇದ್ದರೂ ಭದ್ರಾವತಿಯ ಕಾರ್ಖಾನೆ ಉಳಿಸಲು ಕೈ ಹಾಕಿದ್ದೇನೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಮನವೊಲಿಸಿ ಕಾರ್ಖಾನೆ ಪ್ರಾರಂಭಕ್ಕೆ ಮುಂದಾಗಿದ್ದೇನೆ ಎಂದರು.

ರಾಜ್ಯ ಸರ್ಕಾರದ ಸಚಿವರ ಡಿನ್ನರ್ ಕೂಟ ವಿಚಾರವಾಗಿ ಪ್ರತಿಕ್ರಿಯಿಸಿ, ಗೃಹ ಸಚಿವ ಪರಮೇಶ್ವರ್ ಮನೆಯಲ್ಲಿ ಡಿನ್ನರ್ ಕೂಟ ಮಾಡುತ್ತಾರೆ. ಕ್ಯಾಬಿನೆಟ್ ಹಾಲ್ ಇರುವುದಾದರೂ ಏಕೆ, ಅಲ್ಲಿ ಚರ್ಚೆ ಮಾಡಿ, ಅದು ಬಿಟ್ಟು ಡಿನ್ನರ್ ಹೆಸರಿನಲ್ಲಿ ಚರ್ಚೆ ಮಾಡುವುದಾದರೂ ಏನಿದೆ ಎಂದು ಜರಿದರು.

ಸರ್ಕಾರದ ಪಾಪದ ಕೊಡ ತುಂಬಿದೆ. ಅಧಿಕಾರಿಗಳ ವರ್ಗಾವಣೆಯಲ್ಲಿ ಭ್ರಷ್ಟಾಚಾರ, ಜೆಡಿಎಸ್ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕಿಸುವುದು, ಪಕ್ಷಕ್ಕೆ ಬಂದರೆ ಕೇಸ್ ವಾಪಸ್ಸು ತೆಗೆಯುವಂತಹ ಕ್ರಮ ಅನುಸರಿಸುತ್ತಿದ್ದಾರೆ. ಇದು ಬಹಳ ನಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ಸಿನವರು ಐದು ಗ್ಯಾರಂಟಿಗಳನ್ನು ಕೊಟ್ಟಿದ್ದಾರೆ ಕೊಡಲಿ. 2 ಸಾವಿರ ಕೊಡುವುದು ದೊಡ್ಡ ವಿಷಯವಲ್ಲ. ಬಸ್ ದರ ಶೇ.15ರಷ್ಟು ಹೆಚ್ಚಳ ಮಾಡಿದ್ದಾರೆ. ಹೆಣ್ಣು ಮಕ್ಕಳಿಗೆ ಉಚಿತ ಕೊಟ್ಟು ಬಸ್ ದರ ಏರಿಕೆ ಮಾಡಿದ್ದಾರೆ. ಸರ್ಕಾರ ಬಂದ ಮೇಲೆ ತೆರಿಗೆ ಹಾಕುತ್ತಿದ್ದಾರೆ. ಅಂತಹ ತೆರಿಗೆಯನ್ನು ನಾನು ಹಾಕಿದ್ದಿದ್ದರೆ ರೈತರಿಗೆ 5 ಸಾವಿರ ಕೊಡುತ್ತಿದ್ದೆ. ಸಿಎಂ ಆಗಿದ್ದಾಗ 25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದೆ ಎಂದು ಹೇಳಿದರು.

ಸರ್ಕಾರಗಳು ಆರೋಗ್ಯ ಕ್ಷೇತ್ರದ ಬಗ್ಗೆ ಗಮನ ಕೊಟ್ಟಿಲ್ಲ. ಭತ್ತ ಖರೀದಿ ಕೇಂದ್ರ ತೆರೆದಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಹಲವು ಕಾರ್ಯಕ್ರಮಗಳನ್ನು ಕೊಟ್ಟಿದ್ದೆ. ಲಾಟರಿ ನಿಷೇಧ, ಸಾರಾಯಿ ನಿಷೇಧ ಮಾಡಿದ್ದೆ ಎಂದು ತಮ್ಮ ಯೋಜನೆಗಳ ಬಗ್ಗೆ ವಿವರಿಸಿದರು.

ಈ ಪುಣ್ಯಾತ್ಮರ ಆಡಳಿತದಲ್ಲಿ ರಾಜ್ಯ ಇಂದು ಏನಾಗಿದೆ? ಗುತ್ತಿಗೆದಾರರು ಆತ್ಮಹತ್ಯೆ ನಡೆಯುತ್ತಿವೆ. ಬಾಣಂತಿಯರ ಸಾವು, ಸರ್ಕಾರಕ್ಕೆ ಸ್ವಲ್ಪನಾದರೂ ಕನಿಕರ ಇದೆಯಾ? ಮೆಡಿಸಿನ್ ಖರೀದಿಯಲ್ಲಿ ಶೇ.40ರಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದು ದೂರಿದರು.

ಹೆಣ್ಣು ಮಕ್ಕಳು ಸರ್ಕಾರಿ ಆಸ್ಪತ್ರೆಗೆ ಹೋಗಿ ಜೀವ ಕಳೆದುಕೊಂಡಿದ್ದಾರೆ. ತಾಯಿ, ಮಗು ಆರೋಗ್ಯಕ್ಕಾಗಿ ಯಾವ ಯೋಜನೆ ಮಾಡಿದ್ದಾರೆ. ಬಿಯರ್ ಬಾಟಲ್‌ಗೆ ದರ ಏರಿಕೆ ಮಾಡಿದ್ದಾರೆ. ಒಂದೂ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಇಂತಹ ಸರ್ಕಾರವನ್ನು ಎಷ್ಟು ಸಹಿಸಲು ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ