ವಿಶ್ವೇಶ್ವರಯ್ಯ, ಬಾಳೆಕುಂದ್ರಿಯವರ ಕೊಡುಗೆ ದೊಡ್ಡದು: ಮಾಗಳದ

KannadaprabhaNewsNetwork |  
Published : Nov 24, 2026, 01:15 AM IST
(23ಎನ್.ಆರ್.ಡಿ3 ಉಪನ್ಯಾಸ ಕಾರ್ಯಕ್ರಮದಲ್ಲಿ ಶಾಂತಲಿಂಗ ಶ್ರೀಗಳು ಆರ್ಶೀವಚನ ನೀಡಿದರು.)  | Kannada Prabha

ಸಾರಾಂಶ

ಆಧುನಿಕ ತಂತ್ರಜ್ಞಾನ ಮತ್ತು ಡಿಜಿಟಲ್ ಯುಗದಲ್ಲಿ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವಲ್ಲಿ ಮತ್ತಷ್ಟು ಸದೃಢವಾಗಿ ಕಟ್ಟುವಲ್ಲಿ ಅಭಿಯಂತರರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.

ಸ್ವಾಭಿಮಾನಿ ಕನ್ನಡಿಗರು ಉಪನ್ಯಾಸ ಸರಣಿ-2026 ಸಮಾರಂಭದಲ್ಲಿ ಪ್ರಾಧ್ಯಾಪಕ

ಕನ್ನಡಪ್ರಭ ವಾರ್ತೆ ನರಗುಂದ

ಆಧುನಿಕ ತಂತ್ರಜ್ಞಾನ ಮತ್ತು ಡಿಜಿಟಲ್ ಯುಗದಲ್ಲಿ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವಲ್ಲಿ ಮತ್ತಷ್ಟು ಸದೃಢವಾಗಿ ಕಟ್ಟುವಲ್ಲಿ ಅಭಿಯಂತರರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಆ ಹಿನ್ನೆಲೆ ಸರ್‌ ಎಂ. ವಿಶ್ವೇಶ್ವರಯ್ಯ ಹಾಗೂ ಎಸ್‌.ಜಿ. ಬಾಳೆಕುಂದ್ರಿಯವರು ಕರ್ನಾಟಕಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯವಾದುದು ಎಂದು ಗದಗ ತೋಂಟದಾರ್ಯ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಧ್ಯಾಪಕ ಡಾ. ವೀವಿರೇಶ ಮಾಗಳದ ಹೇಳಿದರು.

ಪಟ್ಟಣದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ದೊರೆಸ್ವಾಮಿ ವಿರಕ್ತಮಠದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸ್ವಾಭಿಮಾನಿ ಕನ್ನಡಿಗರು ಉಪನ್ಯಾಸ ಸರಣಿ-2026 ಸಮಾರಂಭದಲ್ಲಿ ಕನ್ನಡ ಕಟ್ಟುವಲ್ಲಿ ಅಭಿಯಂತರರ ಪಾತ್ರ ವಿಷಯದ ಕುರಿತು ಮಾತನಾಡಿ, ತಾಂತ್ರಿಕ ಶಿಕ್ಷಣ ಮತ್ತು ವೃತ್ತಿಪರ ಕ್ಷೇತ್ರಗಳಲ್ಲಿ ಕನ್ನಡದ ಬಳಕೆಯನ್ನು ಹೆಚ್ಚಿಸುವ ಅಗತ್ಯವಿದೆ. ಕೇವಲ ಸಾಹಿತಿಗಳು ಮಾತ್ರವಲ್ಲದೆ, ತಂತ್ರಜ್ಞರು ಮತ್ತು ಅಭಿಯಂತರರು ಕೂಡ ತಮ್ಮ ವೃತ್ತಿ ಕ್ಷೇತ್ರದಲ್ಲಿ ಕನ್ನಡವನ್ನು ಬಳಸುವ ಮೂಲಕ ಭಾಷೆಯ ಬೆಳವಣಿಗೆಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಸಾನಿಧ್ಯ ವಹಿಸಿದ್ದ ಶಾಂತಲಿಂಗ ಶ್ರೀಗಳು ಮಾತನಾಡಿ, ಘಟಪ್ರಭಾ, ಮಲಪ್ರಭಾ, ಕೃಷ್ಣಾ ಮತ್ತು ತುಂಗಭದ್ರಾ ಯೋಜನೆಗಳ ರೂಪುರೇಷೆ ಹಾಗೂ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿ, ಬರಪೀಡಿತ ಪ್ರದೇಶಗಳ ರೈತರ ಬದುಕಿಗೆ ಆಸರೆಯಾದ ಬಾಳೆಕುಂದ್ರಿಯವರು ಸಮಗ್ರ ಕರ್ನಾಟಕಕ್ಕೆ ಸಲ್ಲಿಸಿದ ಸೇವೆ ಅಮೋಘವಾದುದು ಎಂದು ಹೇಳಿದರು.

ಈ ಸಂದರ್ಭ ಉಪನ್ಯಾಸಕ ಗುರುರಾಜ, ವಿಶ್ರಾಂತ ಪ್ರಾಧ್ಯಾಪಕ ಪಿ.ಎಸ್‌. ಅಣ್ಣಿಗೇರಿ, ಸಾಹಿತ್ಯ ವೇದಿಕೆ ನಿರ್ದೇಶಕ ಯಲ್ಲಪ್ಪಗೌಡ ಪಾಟೀಲ, ಈರಣ್ಣ ಕುರಹಟ್ಟಿ, ಸೋಮು ಹೊಂಗಲ್ ಇದ್ದರು.

ಶಿಕ್ಷಕ ಮಹಾಂತೇಶ ಹಿರೇಮಠ ಸ್ವಾಗತಿಸಿ, ಸುನೀಲ ಕಳಸದ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾದಪ್ಪ ದರ್ಶನ ಪಡೆದ ಜಿ.ಟಿ.ದೇವೇಗೌಡ,
ಶರಣರ ಲೇವಡಿಗೈದವರಿಗೆ ಕಠಿಣ ಶಿಕ್ಷೆಯಾಗಲಿ: ಸಾಣೇಹಳ್ಳಿ ಶ್ರೀ