ಅನಿಶ್ಚಿತತೆಯಲ್ಲೂ ಉದ್ಯಮ ಮುನ್ನಡೆಸಲು ದೂರದೃಷ್ಟಿಯ ನಾಯಕತ್ವ ಅಗತ್ಯ: ಕಮಲ್ ಬಾಲಿ

KannadaprabhaNewsNetwork |  
Published : Nov 16, 2026, 02:00 AM IST
ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ವೋಲ್ವೋ ಗ್ರೂಪ್ ಇಂಡಿಯಾ ಎಂಡಿ ಕಮಲ್ ಬಾಲಿ ಅ‍ವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಜಾಗತಿಕ ಆರ್ಥಿಕ ಪರಿಸ್ಥಿತಿ, ತಂತ್ರಜ್ಞಾನದಲ್ಲಿನ ತ್ವರಿತ ಬದಲಾವಣೆ ಹಾಗೂ ಹೆಚ್ಚುತ್ತಿರುವ ಸ್ಪರ್ಧಾತ್ಮಕ ಸವಾಲುಗಳ ನಡುವೆ ಉದ್ಯಮಗಳು ಯಶಸ್ವಿಯಾಗಿ ಮುನ್ನಡೆಯಲು ದೂರದೃಷ್ಟಿಯ ನಾಯಕತ್ವ, ಸ್ಪಷ್ಟ ಗುರಿ ಮತ್ತು ಸಮಯೋಚಿತ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಅಗತ್ಯ.

ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವೋಲ್ವೋ ಗ್ರೂಪ್ ಇಂಡಿಯಾ ಎಂಡಿ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಜಾಗತಿಕ ಆರ್ಥಿಕ ಪರಿಸ್ಥಿತಿ, ತಂತ್ರಜ್ಞಾನದಲ್ಲಿನ ತ್ವರಿತ ಬದಲಾವಣೆ ಹಾಗೂ ಹೆಚ್ಚುತ್ತಿರುವ ಸ್ಪರ್ಧಾತ್ಮಕ ಸವಾಲುಗಳ ನಡುವೆ ಉದ್ಯಮಗಳು ಯಶಸ್ವಿಯಾಗಿ ಮುನ್ನಡೆಯಲು ದೂರದೃಷ್ಟಿಯ ನಾಯಕತ್ವ, ಸ್ಪಷ್ಟ ಗುರಿ ಮತ್ತು ಸಮಯೋಚಿತ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಅಗತ್ಯ ಎಂದು ವೋಲ್ವೋ ಗ್ರೂಪ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಕಮಲ್ ಬಾಲಿ ಹೇಳಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ವತಿಯಿಂದ ಉದ್ಯಮಿಗಳು ಹಾಗೂ ಕೈಗಾರಿಕೋದ್ಯಮಿಗಳಿಗಾಗಿ ಆಯೋಜಿಸಿದ್ದ "Leadership in Turbulent Times -Building Strong Businesses " ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಇಂದಿನ ಅನಿಶ್ಚಿತತೆಯ ಸಂದರ್ಭದಲ್ಲಿ ಉದ್ಯಮದ ಯಶಸ್ಸಿಗೆ ಆರ್ಥಿಕ ಸಂಪನ್ಮೂಲ ಹಾಗೂ ತಾಂತ್ರಿಕ ಸಾಮರ್ಥ್ಯವಷ್ಟೇ ಸಾಲದು. ಬದಲಾವಣೆಗಳಿಗೆ ಹೊಂದಿಕೊಳ್ಳುವ ಮನೋಭಾವ, ತಂಡದ ಒಗ್ಗಟ್ಟು ಮತ್ತು ಪರಿಣಾಮಕಾರಿ ನಾಯಕತ್ವವೂ ಮುಖ್ಯ. ಉದ್ಯಮಿಗಳು ಅಲ್ಪಾವಧಿಯ ಲಾಭಕ್ಕೆ ಸೀಮಿತವಾಗದೆ ದೀರ್ಘಕಾಲೀನ ಬೆಳವಣಿಗೆ ಹಾಗೂ ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದರು.

ಗ್ರಾಹಕರ ವಿಶ್ವಾಸ ಗಳಿಸುವುದು, ಗುಣಮಟ್ಟ ಕಾಪಾಡುವುದು, ನಾವೀನ್ಯತೆ ಅಳವಡಿಸಿಕೊಳ್ಳುವುದು ಮತ್ತು ಉತ್ಪಾದಕತೆ ಹೆಚ್ಚಿಸುವುದು ಬಲಿಷ್ಠ ಉದ್ಯಮ ನಿರ್ಮಾಣದ ಪ್ರಮುಖ ಅಂಶಗಳಾಗಿವೆ. ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆಯ ಬಳಕೆ, ಉದ್ಯೋಗಿಗಳ ಕೌಶಲ್ಯಾಭಿವೃದ್ಧಿ ಮತ್ತು ಉತ್ತಮ ಕಾರ್ಯಸಂಸ್ಕೃತಿ ಬೆಳೆಸುವುದರಿಂದ ಸಂಸ್ಥೆಗಳ ಸ್ಪರ್ಧಾತ್ಮಕ ಸಾಮರ್ಥ್ಯ ಹೆಚ್ಚಲಿದೆ. ಉದ್ಯಮದಲ್ಲಿ ಎದುರಾಗುವ ಸಂಕಷ್ಟಗಳನ್ನು ಸಮಸ್ಯೆಗಳೆಂದು ನೋಡದೆ, ಹೊಸ ಅವಕಾಶಗಳನ್ನಾಗಿ ಪರಿವರ್ತಿಸಿಕೊಳ್ಳುವ ಸಾಮರ್ಥ್ಯವನ್ನು ನಾಯಕರು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಸ್ಥೆಯ ಅಧ್ಯಕ್ಷ ಸಂದೀಪ ಬಿಡಸಾರಿಯಾ ಮಾತನಾಡಿ, ಬದಲಾಗುತ್ತಿರುವ ಆರ್ಥಿಕ ಮತ್ತು ವ್ಯಾವಹಾರಿಕ ಪರಿಸ್ಥಿತಿಯಲ್ಲಿ ಉದ್ಯಮಿಗಳು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪರಿಣಾಮಕಾರಿ ನಾಯಕತ್ವ, ಬಿಕ್ಕಟ್ಟಿನ ಸಮಯದಲ್ಲಿ ಸೂಕ್ತ ನಿರ್ಧಾರ ಹಾಗೂ ಸುಸ್ಥಿರ ಉದ್ಯಮ ನಿರ್ಮಾಣದ ಕುರಿತು ಉಪನ್ಯಾಸ ಕಾರ್ಯಕ್ರಮ ಮಹತ್ವದ ವೇದಿಕೆಯಾಗಿದೆ. ಉದ್ಯಮಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮ ಸಮಿತಿ ಅಧ್ಯಕ್ಷ ಗೌತಮ್ ಓಸ್ತವಾಲ ಕಾರ್ಯಕ್ರಮದ ಕುರಿತು ವಿವರಿಸಿದರು. ಸಿದ್ದಲಿಂಗೇಶ್ವರ ಕೊಟ್ಟೂರಶೆಟ್ಟರ ಪರಿಚಯಿಸಿದರು. ಸಂಸ್ಥೆಯ ಉಪಾಧ್ಯಕ್ಷ ಪ್ರವೀಣ ಅಗಡಿ, ಸಿದ್ದೇಶ್ವರ ಕಮ್ಮಾರ, ವೀರಣ್ಣ ಕಲ್ಲೂರ, ಗೌರವ ಕಾರ್ಯದರ್ಶಿ ಉದಯ ರೇವಣಕರ, ಜಂಟಿ ಗೌರವ ಕಾರ್ಯದರ್ಶಿ ಪ್ರಕಾಶ ಶೃಂಗೇರಿ, ವಿಕ್ರಮ ಸಿರೂರ, ಸುಹಾಸ ಜವಳಿ, ವಿಜಯಕುಮಾರ ಗುಡ್ಡದ, ಸಿ.ಜಿ. ಧಾರವಾಡಶೆಟ್ಟರ, ಸುಭಾಸ ಬಾಗಲಕೋಟಿ, ಸದಾನಂದ ಕಾಮತ, ವೀರಣ್ಣ ಸಜ್ಜನ, ವಿಶ್ವನಾಥ ಹಿರೇಗೌಡರ, ರವಿ ಬಳಿಗಾರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭೀಮಾ ತೀರದಲ್ಲಿ ಅನೈತಿಕ ರಾಜಕಾರಣ ಮಾಡಲು ಬಿಡಲ್ಲ
ಶಿಬಿರದಿಂದ ಸರ್ವತೋಮುಖ ಬೆಳವಣಿಗೆ ಸಾಧ್ಯ