ಮೂಲಭೂತ ಸೌಕರ್ಯ ಕೊರತೆಯ ಶಾಲೆಗಳಿಗೆ ಭೇಟಿ: ಕೆ.ವಿ.ಸಾಜು

KannadaprabhaNewsNetwork |  
Published : Aug 17, 2025, 01:46 AM IST
ನರಸಿಂಹರಾಜಪುರ ತಾಲೂಕಿನ ಶೆಟ್ಟಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಭೆಯಲ್ಲಿ ಕೆಡಿಪಿ ಸದಸ್ಯ ಕೆ.ವಿ.ಸಾಜು ಮಾತನಾಡಿದರು | Kannada Prabha

ಸಾರಾಂಶ

ನರಸಿಂಹರಾಜಪುರ, ಮೂಲಭೂತ ಸೌಕರ್ಯ ಇಲ್ಲದ ಶಾಲೆಗಳಿಗೆ ಭೇಟಿ ನೀಡಿ ಅನುದಾನ ನೀಡುವಂತೆ ಶಾಸಕರಿಗೆ ಮನವಿ ಸಲ್ಲಿಸಲಿದ್ದೇವೆ ಎಂದು ಕೆಡಿಪಿ ಸದಸ್ಯ ಕೆ.ವಿ.ಸಾಜು ತಿಳಿಸಿದರು.

- ಶೆಟ್ಟಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೆಪಿಡಿ ಸದಸ್ಯರು,ಜನಪ್ರತಿನಿಧಿಗಳ ಭೇಟಿ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಮೂಲಭೂತ ಸೌಕರ್ಯ ಇಲ್ಲದ ಶಾಲೆಗಳಿಗೆ ಭೇಟಿ ನೀಡಿ ಅನುದಾನ ನೀಡುವಂತೆ ಶಾಸಕರಿಗೆ ಮನವಿ ಸಲ್ಲಿಸಲಿದ್ದೇವೆ ಎಂದು ಕೆಡಿಪಿ ಸದಸ್ಯ ಕೆ.ವಿ.ಸಾಜು ತಿಳಿಸಿದರು.ಬುಧವಾರ ಶೆಟ್ಟಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೆಡಿಪಿ ಹಾಗೂ ಗ್ರಾಪಂ ಸದಸ್ಯರನ್ನೊಳ ಗೊಂಡ ತಂಡ ಭೇಟಿ ನೀಡಿ ಪರಿಶೀಲಿಸಿದ ನಂತರ ನಡೆದ ಸಭೆಯಲ್ಲಿ ಮಾತನಾಡಿ, ಶಾಸಕ ರಾಜೇಗೌಡರ ಸಲಹೆಯಂತೆ ತಾಲೂಕಿನ ಮೂಲಭೂತ ಸೌಕರ್ಯ ಕಡಿಮೆ ಇರುವ ಶಾಲೆಗಳಲ್ಲಿ ಪರಿಶೀಲನೆ ನಡೆಸಲಿದೆ.

ಮೊದಲಿಗೆ ಶೆಟ್ಟಿಕೊಪ್ಪ ಸರ್ಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಈ ಶಾಲೆಯಲ್ಲಿ ಕಿಟಕಿ, ಬಾಗಿಲು ದುರಸ್ಥಿ ಯಾಗಬೇಕಾಗಿದೆ. ನೆಲ ಕಿತ್ತುಹೋಗಿದೆ. ನೆಲಕ್ಕೆ ಹಾಗೂ ಶಾಲೆ ಮುಂಭಾಗಕ್ಕೆ ಟೈಲ್ಸ್ ಹಾಕಬೇಕಾಗಿದೆ. ಈ ಬಗ್ಗೆ ಶಾಸಕ ರೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗುವುದು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್ ಬೈಲು ನಟರಾಜ ಮಾತನಾಡಿ, ಶೀರ್ಘದಲ್ಲೇ ಶಾಸಕರನ್ನುಭೇಟಿ ಮಾಡಿ ಶೆಟ್ಟಿಕೊಪ್ಪ ಶಾಲೆಗೆ ಅಗತ್ಯ ಅನುದಾನ ಬಿಡುಗಡೆ ಮಾಡಿಸಲು ಒತ್ತಾಯಿಸುತ್ತೇವೆ ಎಂದರು.

ಕಡಹಿನಬೈಲು ಗ್ರಾಪಂ ಉಪಾಧ್ಯಕ್ಷ ಸುನೀಲ್ ಕುಮಾರ್ ಮಾತನಾಡಿ, ಶೆಟ್ಟಿಕೊಪ್ಪ ಶಾಲೆಗೆ ಇತಿಹಾಸವಿದೆ. ಈ ಶಾಲೆಯಲ್ಲಿ ಶಿಕ್ಷಣ ಪಡೆದವರು ಇಂದು ಉನ್ನತ ಹುದ್ದೆಯಲ್ಲಿದ್ದಾರೆ. ಈ ಹಿಂದೆ ವಿಪ ಸದಸ್ಯರಾಗಿದ್ದ ಎಂ.ಶ್ರೀನಿವಾಸ್ ಶಾಲೆ ರಂಗಮಂದಿರದ ಮುಂಭಾಗಕ್ಕೆ ಇಂಟರ್ ಲಾಕ್ ಹಾಕಿಸಿದ್ದರು. ತಾಪಂ ಅನುದಾನದಲ್ಲಿ ಅಂಗನವಾಡಿ ದುರಸ್ತಿ, ಮುಂಭಾಗ ದಲ್ಲಿ ಶೀಟ್ ಹಾಕಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಕೆಡಿಪಿ ಸದಸ್ಯ ಮಾಳೂರು ದಿಣ್ಣೆ ರಮೇಶ್, ಗ್ರಾಪಂ ಅಧ್ಯಕ್ಷೆ ಲಿಲ್ಲಿ ಮಾತುಕುಟ್ಟಿ, ಸದಸ್ಯರಾದ ಶೈಲಾ ಮಹೇಶ್, ವಾಣಿ ನರೇಂದ್ರ, ಗುಬ್ಬಿಗಾ ಗ್ರಾಪಂ ಮಾಜಿ ಸದಸ್ಯ ಬೆನ್ನಿ, ಕಡಹಿನಬೈಲು ಗ್ರಾಪಂ ಮಾಜಿ ಉಪಾಧ್ಯಕ್ಷ ಕೆ.ಎನ್.ನಾಗರಾಜ, ಎಸ್.ಡಿಎಂಸಿ ಅಧ್ಯಕ್ಷ ಜಗದೀಶ್, ಉಪಾಧ್ಯಕ್ಷೆ ರಂಜಿತ, ಸದಸ್ಯರಾದ ಸದ್ದಾಂ ಹುಸೇನ್, ಅಶ್ಪಕ್, ಮುಖ್ಯ ಶಿಕ್ಷಕಿ ಶುಭ, ಕರುಗುಂದ ನಂದೀಶ ಮತ್ತಿತರರು ಇದ್ದರು.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!