ಕನ್ನಡ ಸಾಹಿತ್ಯ, ಸಂಸ್ಕೃತಿಗೆ ವಿಶ್ವೇಶ್ವರಯ್ಯನವರ ಕೊಡುಗೆ ಅಪಾರ

KannadaprabhaNewsNetwork |  
Published : Sep 28, 2025, 02:00 AM IST
ಗದಗ ತೋಂಟದ ಸಿದ್ಧಲಿಂಗಶ್ರೀಗಳ ಕನ್ನಡ ಭವನ, ಕಸಾಪ ಕಾರ್ಯಾಲಯದ ಆವರಣದಲ್ಲಿ ಇತ್ತೀಚಿಗೆ ಸರ್. ಎಂ.ವಿಶ್ವೇಶ್ವರಯ್ಯನವರ ಜನ್ಮದಿನಾರಣೆ ಕಾರ್ಯಕ್ರಮ ನಡೆಯಿತು.  | Kannada Prabha

ಸಾರಾಂಶ

ವಿಶ್ವೇಶ್ವರಯ್ಯನವರು ಬಾಲ್ಯದಿಂದಲೂ ಪ್ರತಿಭಾವಂತರು ಬ್ರಿಟಿಷ್ ಸರ್ಕಾರದಲ್ಲಿ ತಮ್ಮ ಸೇವೆಯನ್ನು ಪ್ರಾರಂಭಿಸಿ ವಿಶ್ವದಲ್ಲಿಯೇ ಮೊಟ್ಟಮೊದಲನೇ ಪೇಟೆಂಟ್ ಪಡೆದ ಎಂಜಿನೀಯರರು ಆಗಿದ್ದರು. ಪುಣೆಯ ಖಡಕವಾಸ್ಲಾ ಆಣೆಕಟ್ಟು, ಲೆಗ್ರಾ ಆಣೆಕಟ್ಟು ಮತ್ತು ಕೆಆರ್‌ಎಸ್‌ಗಳಿಗೆ ತನ್ನಷ್ಟಕ್ಕೆ ತಾನೇ ತೆಗೆದುಕೊಳ್ಳುವ ಮತ್ತು ಮುಚ್ಚುವ ಗೇಟುಗಳನ್ನು ತಯಾರಿಸಿದರು.

ಗದಗ: ಸಾಮಾನ್ಯವಾಗಿ ಭಾರತರತ್ನ ಸರ್‌ ಎಂ. ವಿಶ್ವೇಶ್ವರಯ್ಯನವರನ್ನು ಒಬ್ಬ ಮೇಧಾವಿ ಅಭಿಯಂತರರು ಹಾಗೂ ಯೋಜಕರು ಎಂದು ಪರಿಗಣಿಸಲಾಗುತ್ತದೆ. ಆದರೆ, ಇದರೊಂದಿಗೆ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಅವರ ಕೊಡುಗೆ ಅಪಾರವಾಗಿದೆ ಎಂದು ನಿವೃತ್ತ ಅಧ್ಯಾಪಕ ರಾಮಚಂದ್ರ ಮೋನೆ ಹೇಳಿದರು.

ನಗರದ ತೋಂಟದ ಸಿದ್ಧಲಿಂಗ ಶ್ರೀಗಳ ಕನ್ನಡ ಭವನ, ಕಸಾಪ ಕಾರ್ಯಾಲಯದ ಆವರಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನಾರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ವಿಶ್ವೇಶ್ವರಯ್ಯನವರು ಬಾಲ್ಯದಿಂದಲೂ ಪ್ರತಿಭಾವಂತರು ಬ್ರಿಟಿಷ್ ಸರ್ಕಾರದಲ್ಲಿ ತಮ್ಮ ಸೇವೆಯನ್ನು ಪ್ರಾರಂಭಿಸಿ ವಿಶ್ವದಲ್ಲಿಯೇ ಮೊಟ್ಟಮೊದಲನೇ ಪೇಟೆಂಟ್ ಪಡೆದ ಎಂಜಿನೀಯರರು ಆಗಿದ್ದರು. ಪುಣೆಯ ಖಡಕವಾಸ್ಲಾ ಆಣೆಕಟ್ಟು, ಲೆಗ್ರಾ ಆಣೆಕಟ್ಟು ಮತ್ತು ಕೆಆರ್‌ಎಸ್‌ಗಳಿಗೆ ತನ್ನಷ್ಟಕ್ಕೆ ತಾನೇ ತೆಗೆದುಕೊಳ್ಳುವ ಮತ್ತು ಮುಚ್ಚುವ ಗೇಟುಗಳನ್ನು ತಯಾರಿಸಿದರು. ಮುಂದೆ ಮೈಸೂರಿನ ದಿವಾನರಾಗಿ ಮೈಸೂರಿನ ಅಭಿವೃದ್ಧಿಗೆ ಭದ್ರ ಬುನಾದಿಯನ್ನು ಹಾಕಿದರು. ಮೈಸೂರು ರಾಜ್ಯವನ್ನು ಮಾದರಿ ರಾಜ್ಯವನ್ನಾಗಿಸುವಲ್ಲಿ ನೀರಾವರಿ ಯೋಜನೆಗಳು, ನಾಲಾ ಹಾಗೂ ಒಳಚರಂಡಿ ವ್ಯವಸ್ಥೆಯ ಹರಿಕಾರರಾಗಿ ಸೇವೆ ಸಲ್ಲಿಸಿದರು.

1915ರಲ್ಲಿ ಆರ್ಥಿಕ ಸಂಪದಾಭಿವೃದ್ಧಿ ಯೋಜನೆಯಡಿ ಅಂದಿನ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ ಅವರೊಂದಿಗೆ ಸೇರಿ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸುವಲ್ಲಿ ಬಹುಮುಖ್ಯ ಪಾತ್ರವಹಿಸಿದರು. ಇಂದು ಕನ್ನಡ ಸಾಹಿತ್ಯ ಪರಿಷತ್ತು, ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಕನ್ನಡ ನಾಡು, ನುಡಿ, ಏಳ್ಗೆಗಾಗಿ ಶ್ರಮಿಸುತ್ತಿದೆ. ಇದಕ್ಕೆ ಚಾಲನೆಯನ್ನು ನೀಡಿದ ಮಹನೀಯರು ವಿಶ್ವೇಶ್ವರಯ್ಯನವರು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಸರ್ವರು ವಿಶ್ವೇಶ್ವರಯ್ಯನವರನ್ನು ಒಬ್ಬ ಮಹಾನ್ ಎಂಜನೀಯರ್‌ ಎಂದು ಸ್ಮರಿಸಿದರೆ ಸಾಹಿತ್ಯ ಪರಿಷತ್ತು ಅದರ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ವಿಶ್ವೇಶ್ವರಯ್ಯನವರನ್ನು ಸ್ಥಾಪಕರೆಂದು ಕೃತಜ್ಞತೆಯಿಂದ ಸ್ಮರಿಸಿಕೊಂಡು ಪ್ರತಿವರ್ಷ ಗೌರವಾರ್ಪಣೆ ಮಾಡಲಾಗುತ್ತದೆ ಎಂದರು.

ಈ ವೇಳೆ ರಾಮಚಂದ್ರ ಮೋನೆ ಹಾಗೂ ರಂಗಕರ್ಮಿ ನಿವೃತ್ತ ದೈಹಿಕ ಶಿಕ್ಷಣ ಉಪನ್ಯಾಸಕ ಶಶಿಕಾಂತ ಕೋರ್ಲಹಳ್ಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಿವೃತ್ತ ದೈಹಿಕ ಶಿಕ್ಷಣ ಉಪನ್ಯಾಸಕ ಪಿ.ಆರ್.ಇನಾಮದಾರ ಮಾತನಾಡಿದರು.

ಜಿ.ಎ. ಪಾಟೀಲ, ಕಳಸಾಪೂರ ಶೆಟ್ರು, ಕುಂದಗೋಳ, ಸಿ.ಎಂ. ಮಾರನಬಸರಿ, ಶೈಲಜಾ ಗಿಡ್ನಂದಿ, ರಾಹುಲ್ ಗಿಡ್ನಂದಿ, ಜಿ.ಬಿ. ಪಾಟೀಲ, ಉಮಾ ಪಾಟೀಲ, ಬಿ.ಬಿ. ಹೊಳೆಗುಂದಿ, ರಾಜಶೇಖರ ಕರಡಿ, ಪ್ರಸನ್ನಕುಮಾರ ಇನಾಮದಾರ, ಪ್ರಶಾಂತ ಪಾಟೀಲ, ರವೀಂದ್ರ ಜೋಶಿ, ರತ್ನಕ್ಕ ಪಾಟೀಲ, ಅಶೋಕ ಸತರೆಡ್ಡಿ, ಕೃಷ್ಣಾ ಜಿ. ನಾಡಗೇರ, ಸತೀಶ ಚನ್ನಪ್ಪಗೌಡರ, ರತ್ನಾ ಪುರಂತರ, ಚನ್ನವೀರಪ್ಪ ದುಂದೂರ, ಬಸವರಾಜ ತೋಟಗೇರ, ಅಮರೇಶ ರಾಂಪೂರ ಸೇರಿದಂತೆ ಕಸಾಪ ಸದಸ್ಯರು, ಸಾಹಿತಿಗಳು, ಕಲಾವಿದರು ಇದ್ದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಡಾ. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಕೋಶಾಧ್ಯಕ್ಷ ಡಿ.ಎಸ್. ಬಾಪುರೆ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ