ಕಸಾಪ ಸ್ಥಾಪನೆಗೆ ಸ್ಪೂರ್ತಿ ವಿಶ್ವೇಶ್ವರಯ್ಯ

KannadaprabhaNewsNetwork |  
Published : Sep 17, 2024, 12:55 AM IST
ಜಿಲ್ಲಾ ಕಸಾಪ ಸಭಾಂಗಣದಲ್ಲಿ ಜಿಲ್ಲಾ, ತಾಲೂಕ ಹಾಗು ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಸರ್  ಎಂ ವಿಶ್ವೇಶ್ವರಯ್ಯ ಜನ್ಮ ದಿನಾಚರಣೆ ಆಚರಿಸಲಾಯಿತು. | Kannada Prabha

ಸಾರಾಂಶ

ಕಸಾಪ ಸ್ಥಾಪನೆಗೆ ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯನವರ ಪಾತ್ರ ಮಹತ್ವದ್ದಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ಪರಿಷತ್ತನ್ನು ಹುಟ್ಟು ಹಾಕಲು ಸ್ಪೂರ್ತಿ ನೀಡಿದವರು ಎಂದು ಜಿಲ್ಲಾ ೧೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸವಾ೯ಧ್ಯಕ್ಷೆ ಡಾ.ಭುವನೇಶ್ವರಿ ಮೇಲಿನಮಠ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕಸಾಪ ಸ್ಥಾಪನೆಗೆ ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯನವರ ಪಾತ್ರ ಮಹತ್ವದ್ದಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ಪರಿಷತ್ತನ್ನು ಹುಟ್ಟು ಹಾಕಲು ಸ್ಪೂರ್ತಿ ನೀಡಿದವರು ಎಂದು ಜಿಲ್ಲಾ ೧೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸವಾ೯ಧ್ಯಕ್ಷೆ ಡಾ.ಭುವನೇಶ್ವರಿ ಮೇಲಿನಮಠ ಹೇಳಿದರು.

ನಗರದ ಜಿಲ್ಲಾ ಕಸಾಪ ಸಭಾಂಗಣದಲ್ಲಿ ಜಿಲ್ಲಾ, ತಾಲೂಕ ಹಾಗು ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ವಿಶ್ವೇಶ್ವರಯ್ಯನವರ ಜನ್ಮ ದಿನ ಆಚರಣೆ ಮಾಡಲಾಯಿತು. ತಿಕೋಟಾ ಕಸಾಪ ಗೌರವ ಕಾರ್ಯದರ್ಶಿ ಎಸ್.ಬಿ.ಬಿರಾದಾರ ಮಾತನಾಡಿ, ಸಾಹಿತ್ಯ, ವಾಣಿಜ್ಯ, ಆರ್ಥಿಕತೆ, ಕೃಷಿ, ಕೈಗಾರಿಕೆ, ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಸೇವೆ ಗೈದರು. ಭದ್ರಾವತಿ ಉಕ್ಕಿನ ಕಾರ್ಖಾನೆ, ರೇಷ್ಮೆ, ಸಾಬೂನು, ಗಂಧದ ಎಣ್ಣೆ ಹಾಗು ಸಾರ್ವಜನಿಕ ಗ್ರಂಥಾಲಯ. ಮೈಸೂರು ಮಹಾರಾಣಿ ಕಾಲೇಜು ಸ್ಥಾಪನೆ, ರೈಲುಮಾಗ೯ ನೀಡಿ ಶ್ರೇಷ್ಠರಾಗಿದ್ದಾರೆ ಎಂದರು.ಗುತ್ತಿಗೆದಾರ ಸಂಘದ ಅಧ್ಯಕ್ಷ ಅರುಣ ಮಠ ಮಾತನಾಡಿ, ಮಹಿಳೆಯರು ಸಂಕುಚಿತ ಮನೋಭಾವ ತೊರೆದು ಶಿಕ್ಷಣ ಹಾಗು ಉದ್ಯೋಗ ಪಡೆದು ಸ್ವಾವಲಂಬಿಗಳಾಗಿ ಬೆಳೆಯಬೇಕು. ಮೈಸೂರು ವಿಶ್ವವಿದ್ಯಾಲಯದ ಸ್ಥಾಪನೆ, ಹೆಬ್ಬಾಳದಲ್ಲಿ ಕೃಷಿ ಕಾಲೇಜು, ವಾಣಿಜ್ಯ ಮಂಡಳಿ ಉದಯ, ಶಿವನ ಸಮುದ್ರದಲ್ಲಿ ವಿದ್ಯುತ್‌ ಉತ್ಪಾದನೆ, ಬೆಂಗಳೂರಿನಲ್ಲಿ ಮುದ್ರಣಾಲಯ ಸ್ಥಾಪಿಸಿದ್ದಾಗಿ ತಿಳಿಸಿದರು.ಪ್ರಾಧ್ಯಾಪಕ ಡಾ.ವೀರೇಶ ಗೋನಾಳ ಮಾತನಾಡಿ, ಅಭಿಯಂತರ ದಿನಾಚರಣೆ ಕನ್ನಡ ಸಾಹಿತ್ಯ ಪರಿಷತ್ತು ಆಚರಿಸುತ್ತಿರುವದು ಅತ್ಯಂತ ಸಂತೋಷದ ವಿಚಾರ ಎಂದರು. ಶಾಹೀನ ಬೇಗಂ ಇಂಡಿಕರ, ಗೀತಾಂಜಲಿ ಪತ್ರಿಮಠ, ರಸೂಲಸಾಬ ಮುಲ್ಲಾ, ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ಪ್ರೀಯದರ್ಶಿನಿ ಹಿರೇಮಠ, ಹಾಸಿಂಪೀರ ವಾಲಿಕಾರ, ರಾಜೇಸಾಬ ಶಿವನಗುತ್ತಿ, ಆಶಾ ಬಿರಾದಾರ, ಎಂ.ಬಿ.ಮೋಪಗಾರ, ಸುನಂದಾ ಕೆ, ಎಸ್.ಎಂ.ಕಣಬೂರ, ಎನ್.ಆರ್.ಕುಲಕರ್ಣಿ, ಅಹಮ್ಮದ ವಾಲಿಕಾರ, ಕೆ.ಎಸ್.ಹಣಮಾಣಿ, ಡಿ.ಎಸ್.ಹಾವಗೊಂಡ, ಎ.ಡಿ.ಮುಲ್ಲಾ, ಪ್ರದೀಪ ಕುಲಕರ್ಣಿ, ಮಲ್ಲಿಕಾರ್ಜುನ ಕುಂಬಾರ, ಪ್ರಕಾಶ ಚಿಕ್ಕಲಕಿ, ಲತಾ ಗುಂಡಿ, ಗಂಗಮ್ಮ ರೆಡ್ಡಿ, ಶೋಭಾ ಬಡಿಗೇರ, ಶ್ರೀಕಾಂತ ನಾಡಗೌಡ, ಜಿ.ಎಸ್.ಬಳ್ಳೂರ, ಎಂ.ಎಸ್.ಬಗಲಿ, ವಜೀರ ಕೊಪ್ಪಳ, ಲಕ್ಷ್ಮೀ ಬಿರಾದಾರ, ಎಂ.ವಿ.ನಾಯಕೋಡಿ, ಕವಿತಾ ಕಲ್ಯಾಣಪ್ಪಗೋಳ, ರಿಹಾನ ಹಳ್ಳೂರ, ಗಂಗಮ್ಮ ರೆಡ್ಡಿ, ಜಿ.ಎಸ್.ಮೇಲಿನಮಠ ಮುಂತಾದವರು ಉಪಸ್ಥಿತರಿದ್ದರು. ಮುಂತಾದವರು ಉಪಸ್ಥಿತರಿದ್ದರು. ಮಾಳ್ವಿಕಾ ಜೋಶಿ ನಾಡಗೀತೆ ಹಾಡಿದರು. ಕಮಲಾ ಮುರಾಳ ಸ್ವಾಗತಿ ಗೌರವಿಸಿದರು. ರವಿ ಕಿತ್ತೂರ ಪ್ರಾರ್ಥಿಸಿದರು.ಪ್ರೊ ಸುಜಾತ ಹ್ಯಾಳದ ನಿರೂಪಿಸಿದರು. ವಿಜಯಲಕ್ಷ್ಮೀ ಹಳಕಟ್ಟಿ ವಂದಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ