ವಿವೇಕರು ಯುವಕರ ಸ್ಫೂರ್ತಿಯ ಚಿಲುಮೆ

KannadaprabhaNewsNetwork |  
Published : Jan 15, 2025, 12:47 AM IST
ಕಾರ್ಯಕ್ರಮದಲ್ಲಿ ಶ್ರೀಗಳನ್ನು ಸನ್ಮಾನಿಸಲಾಯಿತು.  | Kannada Prabha

ಸಾರಾಂಶ

ಸನಾತನ ಹಿಂದು ಧರ್ಮ, ಸಂಸ್ಕೃತಿಯ ಆಧ್ಯಾತ್ಮಿಕ ರಾಯಬಾರಿ, ಯುವಕರ ಧ್ವನಿ, ಯುವಕರ ಸ್ಫೂರ್ತಿಯ ಚಿಲುಮೆ ಸ್ವಾಮಿವಿವೇಕಾನಂದರು

ಗದಗ: ಸ್ವಾಮಿ ವಿವೇಕಾನಂದರು ಯುವಕರ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ ಎಂದು ಶಾರದಾ ಬಾಣದ ಹೇಳಿದರು.

ಅವರು ವಿವೇಕಾನಂದ ನಗರದಲ್ಲಿರುವ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿಯಿಂದ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 162ನೇ ಜನ್ಮದಿನೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಸನಾತನ ಹಿಂದು ಧರ್ಮ, ಸಂಸ್ಕೃತಿಯ ಆಧ್ಯಾತ್ಮಿಕ ರಾಯಬಾರಿ, ಯುವಕರ ಧ್ವನಿ, ಯುವಕರ ಸ್ಫೂರ್ತಿಯ ಚಿಲುಮೆ ಸ್ವಾಮಿವಿವೇಕಾನಂದರು,ವಿಶ್ವಕಂಡ ಮಹಾನ್ ವೀರ ಸನ್ಯಾಸಿ,ತತ್ವಜ್ಞಾನಿಯಾಗಿದ್ದಾರೆ, ವಿವೇಕಾನಂದರು ಯುವಕರಿಗೆ ದೇಹಬಲ, ಮನೋಬಲ ಮತ್ತು ಆತ್ಮಬಲ ಇವುಗಳಿಂದ ಯುವಜನತೆ ಸದೃಢ ಭಾರತದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.

ಸಾನ್ನಿಧ್ಯ ವಹಿಸಿದ್ದ ಮುಕ್ಕಣ್ಣೇಶ್ವರ ಮಠದ ಶಂಕರಾನಂದ ಶ್ರೀಗಳು ಆಶೀರ್ವಚನ ನೀಡಿ, ವಿವೇಕಾನಂದರ ತತ್ವಾದರ್ಶ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಚಿಕ್ಯಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದ ಭಾಷಣ ಕೋಟ್ಯಂತರ ಜನರಿಗೆ ಪ್ರೇರಣೆಯಾಗಿತ್ತು ಎಂದರು.

ಸಂಸ್ಥೆಯ ಅಧ್ಯಕ್ಷ ಎಂ.ಎನ್. ಕಾಮನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಗೌರವಾಧ್ಯಕ್ಷ ಜಿ.ಜಿ. ಕುಲಕರ್ಣಿ ಉಪಸ್ಥಿರಿದ್ದರು. ನಾಡಗೀತೆಯ ಮೂಲಕ ಪ್ರಾರಂಭವಾಗಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಹೂ ಅರ್ಪಿಸಿ ಪೂಜಿಸಲಾಯಿತು. ಕಸ್ತೂರಿಬಾಯಿ ಪತ್ತಾರ ಸ್ವಾಗತಗೀತೆ ಹಾಡಿದರು. ಎಂ.ಬಿ. ಚನ್ನಪ್ಪಗೌಡ್ರ ಸ್ವಾಗತಿಸಿದರು. ಪುಟ್ಟ ಮಕ್ಕಳು ಸ್ವಾಮಿವಿವೇಕಾನಂದರ ವೇಷಭೂಷಣದಲ್ಲಿ ಗಮನ ಸೆಳೆದರು. ಪ್ರಥಮ ಖಡಗದ, ಅದೀತಿ ಯಾಳಗಿ, ತೇಜಸ್ವಿನಿ ಅಡಗಾಲ, ಅಮೀರ್ ಚಕ್ಕಗಡಿ, ಶುಶಾಂತ ನೀಲುಗುಂದ, ಶ್ರೇಯಾ ಮುಳಗುಂದಮಠ, ಖುಷಿ ಮುಳಗುಂದಮಠ, ಪ್ರಜ್ಞಾ ಕಮತರ, ಪ್ರತೀಕ್ಷಾ ಗಾವರವಾಡ, ಅನನ್ಯ ನಾಗರಾಳ ಭಕ್ತಿಗೀತೆ ಹಾಡಿದರು.

ಗೋವರ್ಧನ ಬಡಿಗೇರ ವಿವೇಕಾನಂದರ ಕ್ರಾಂತಿಗೀತೆ ಹಾಡಿದರು. ಕಲ್ಪಿತ್ ಮಾಯಣ್ಣವರ ಏಕಪಾತ್ರ ಅಭಿನಯ ಮಾಡಿದರು.

ರಂಗಣ್ಣ ಒಡೆಯರ್, ಮಾಲತೇಶ ಲಕ್ಕುಂಡಿ, ಮಹಾದೇವಿ ಗೋಗೇರಿ, ರಾಧಿಕಾ ಬಂದಮ್ಮ, ಬಿ.ಎನ್. ಯರನಾಳ, ಎಸ್.ಎಸ್. ಪಾಟೀಲ, ಕೆ.ಬಿ. ಕೊಣ್ಣೂರ, ಪುಷ್ಪಾ ಬಂಡಾರಿ, ಜಿ.ಎ. ಪಾಟೀಲ, ಎಸ್.ಎಸ್.ಅಣ್ಣಿಗೇರಿ, ರಾಮಣ್ಣ ಕಾಶಪ್ಪನವರ, ನವೀನ ಮಾಯಣ್ಣವರ, ಸಿ.ಸಿ.ಮಾಳಶೆಟ್ಟಿ, ವ್ಹಿ.ಬಿ. ತಿರ್ಲಾಪೂರ, ಸುಮಂಗಲಾ ಪತ್ತಾರ, ಎಂ.ಬಿ. ಗೌಡರ, ದಾನಯ್ಯ ಗಣಾಚಾರಿ, ಎಸ್.ಎಸ್. ಮೂಲಿಮನಿ ಮುಂತಾದವರು ಪಾಲ್ಗೊಂಡಿದ್ದರು. ಎಂ.ಬಿ. ಚನ್ನಪ್ಪಗೌಡರ ವಂದಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ