ವಿವೇಕಾನಂದರ ಅಧ್ಯಯನ ಭಾರತದ ಅರಿವು ಮೂಡಿಸಲಿದೆ: ಮಹೇಶ್ ವಕ್ವಾಡಿ

KannadaprabhaNewsNetwork |  
Published : Jan 17, 2024, 01:45 AM IST
ತರೀಕೆರೆಯಲ್ಲಿ ಶ್ರೀ ಗುರೂಜಿ  ಸ್ವಾಮಿ ವಿವೇಕಾನಂದರ 162ನೇ ಜಯಂತ್ಯೋತ್ಸವ ಸಮಾರಂಭ | Kannada Prabha

ಸಾರಾಂಶ

ಸ್ವಾಮಿ ವಿವೇಕಾನಂದರನ್ನು ಅಧ್ಯಯನ ಮಾಡಿದರೆ ಭಾರತವನ್ನು ಅಧ್ಯಯನ ಮಾಡಿದಂತೆ ಎಂದು ಸಾಲಿಗ್ರಾಮ ಉಪನ್ಯಾಸಕ ಮಹೇಶ್ ವಕ್ವಾಡಿ ಎಚ್. ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ತರೀಕೆರೆ

ಸ್ವಾಮಿ ವಿವೇಕಾನಂದರನ್ನು ಅಧ್ಯಯನ ಮಾಡಿದರೆ ಭಾರತವನ್ನು ಅಧ್ಯಯನ ಮಾಡಿದಂತೆ ಎಂದು ಸಾಲಿಗ್ರಾಮ ಉಪನ್ಯಾಸಕ ಮಹೇಶ್ ವಕ್ವಾಡಿ ಎಚ್. ಹೇಳಿದ್ದಾರೆ.

ಡಿವೈನ್ ಪಾರ್ಕ್. ಡಿವೈನ್ ಸ್ಪಾರ್ಕ್, ವಿವೇಕ ಜಾಗೃತ ಬಳಗ ತರೀಕೆರೆಯಿಂದ ಪಟ್ಟಣದ ಶ್ರೀ ಕಾಳಿಕಾಂಬ ದೇವಸ್ಥಾನದ ಅವರಣದಲ್ಲಿ ಏರ್ಪಡಿಸಿದ್ದ ಶ್ರೀ ಸ್ವಾಮಿ ವಿವೇಕಾನಂದರ 162ನೇ ಜಯಂತ್ಯುತ್ಸವದಲ್ಲಿ ಮಾತನಾಡಿ, ಶ್ರೀ ವಿವೇಕಾ ನಂದರ ಹೆಸರೇ ರೋಮಾಂಚನ ಉಂಟುಮಾಡುತ್ತದೆ. ಅಂತಹವರನ್ನು ಕೊಟ್ಟಂತಹ ಪುಣ್ಯಭೂಮಿ ಭಾರತ, ಸರಳ ಆಧ್ಯಾತ್ಮಿಕ ಶಕ್ತಿ ತೋರಿಸಿಕೊಟ್ಟಿದ್ದು ಭಾರತ ಎಂದರು.

ಶ್ರೀ ವಿವೇಕಾನಂದರ ಜೀವನ ಸಂದೇಶ ಒಂದು ದೊಡ್ಡ ಮಾಹಾಕಾವ್ಯ. ವಿಶ್ವಮೂರ್ತಿ ವಿವೇಕಾನಂದರು ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರು, ಜೀವನದ ಕಷ್ಟಗಳಿಗೆ ಬೆನ್ನು ಹಾಕಬಾರದು. ಭಾರತ ಸಂಸ್ಕೃತಿ ಪವಿತ್ರವಾದುದು ಎಂದು ಹೇಳಿದರು.

ಶ್ರೀ ರಾಮ ರಕ್ಷಾ ಸ್ತೋತ್ರಕ್ಕೆ ಅದ್ಭುತ ಪರಿವರ್ತನಾ ಶಕ್ತಿ ಇದೆ, ಪ್ರೀತಿ ಎಂಬ ಶಬ್ದಕ್ಕೆ ದೊಡ್ಡ ಶಕ್ತಿ ಇದೆ ಎಂದರು.

ವಿವೇಕ ಜಾಗೃತ ಬಳಗದ ಅಧ್ಯಕ್ಷೆ ಅಶ್ವಿನಿ ಎಸ್. ಎನ್. ಮಾತನಾಡಿ ವಿವೇಕ ಜಾಗೃತಿ ಬಳಗದಿಂದ ಪಟ್ಟಣದಲ್ಲಿ ಸ್ವಚ್ಛತಾ ಕಾರ್ಯ, ರಕ್ತದಾನ ಶಿಬಿರ, ಸತ್ಸಂಗ ಕಾರ್ಯಕ್ರಮಗಳು, ಪ್ರತಿ ಮನೆಗೆ ಸದ್ವಿಚಾರ ಪ್ರಸಾರ, ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಇತ್ಯಾದಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸಲಾಗುತ್ತಿದೆ. ಮುಖ್ಯ ಗುರಿಯಾದ ವ್ಯಕ್ತಿತ್ವ ನಿರ್ಮಾಣ, ವ್ಯಕ್ತಿತ್ವ ವಿಕಸನ ಆ ಮೂಲಕ ರಾಷ್ಟ್ರೋದ್ದಾರದ ಪರಮ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಪುರಸಭಾ ಹಿರಿಯ ಸದಸ್ಯ ಟಿ.ಜಿ.ಅಶೋಕ್ ಕುಮಾರ್, ವಿವೇಕ ಜಾಗೃತ ಬಳಗದ ಸಿ.ಎಂ.ಸುಮ, ಸುನೀತ ಟಿ.ಎಂ. ಉಮಾದೇವಿ ಸಿ.ಎಸ್.,ಮದುಸೂದನ, ಎಸ್,.ಎಂ.ರವಿಕುಮಾರ್, ಮಂಜುನಾಥ ಸಿ.ಎಸ್. ಜೀವಿತಾ ಕೃಷ್ಣಮೂರ್ತಿ ಕವಿತಾ, ಸವಿತಾ ದೋರನಾಳು ಮತ್ತಿತರರು ಭಾಗವಹಿಸಿದ್ದರು.16ಕೆಟಿಆರ್.ಕೆ.6ಃ

ತರೀಕೆರೆಯಲ್ಲಿ ನಡೆದ ಸ್ವಾಮಿ ವಿವೇಕಾನಂದರ 162ನೇ ಜಯಂತ್ಯುತ್ಸವದಲ್ಲಿ ಸಾಲಿಗ್ರಾಮ ಉಪನ್ಯಾಸಕ ಮಹೇಶ್ ವಕ್ವಾಡಿ ಎಚ್ ಮಾತನಾಡಿದರು. ವಿವೇಕ ಜಾಗೃತ ಬಳಗದ ಅಧ್ಯಕ್ಷೆ ಅಶ್ವಿನಿ.ಎಸ್. ಎನ್. ಪುರಸಭಾ ಹಿರಿಯ ಸದಸ್ಯ ಟಿ.ಜಿ.ಅಶೋಕ್ ಕುಮಾರ್ ಇದ್ದರು..

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ