ಗುಳೆ ಗ್ರಾಮದಲ್ಲಿ ಗಮನ ಸೆಳೆದ ವಾಲಿಬಾಲ್ ಪಂದ್ಯಾವಳಿ

KannadaprabhaNewsNetwork |  
Published : Nov 10, 2026, 01:00 AM IST
ಯಲಬುರ್ಗಾ ತಾಲೂಕಿನ ಗುಳೆ ಗ್ರಾಮದಲ್ಲಿ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾವಳಿಗೆ ಕುಷ್ಟಗಿಯ ಮದ್ದಾನೇಶ್ವರ ಹಿರೇಮಠದ ಶ್ರೀ ಕರಿಬಸವ ಶಿವಾಚಾರ್ಯ ಮಹಾಸ್ವಾಮೀಜಿ ಚಾಲನೆ ನೀಡಿದರು. | Kannada Prabha

ಸಾರಾಂಶ

ಯಲಬುರ್ಗಾ ತಾಲೂಕಿನ ಗುಳೆ ಗ್ರಾಮದಲ್ಲಿ ದೀಪಾವಳಿ ಹಬ್ಬ ಹಾಗೂ ಗ್ರಾಮದ ಆರಾಧ್ಯದೈವ ಗಾದಿಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು.

ಯಲಬುರ್ಗಾ: ತಾಲೂಕಿನ ಗುಳೆ ಗ್ರಾಮದಲ್ಲಿ ದೀಪಾವಳಿ ಹಬ್ಬ ಹಾಗೂ ಗ್ರಾಮದ ಆರಾಧ್ಯದೈವ ಗಾದಿಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು.

ಕುಷ್ಟಗಿಯ ಮದ್ದಾನೇಶ್ವರ ಹಿರೇಮಠದ ಶ್ರೀ ಕರಿಬಸವ ಶಿವಾಚಾರ್ಯ ಮಹಾಸ್ವಾಮೀಜಿಗಳು ಪಂದ್ಯಾವಳಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಶ್ರೀಗಳು, ಕ್ರೀಡೆಗಳು ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಯುವಕರು ಕ್ರೀಡಾ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ದೈಹಿಕ ಸಾಮರ್ಥ್ಯ, ಶಿಸ್ತು, ಸಮಯಪ್ರಜ್ಞೆ ಹಾಗೂ ಪರಸ್ಪರ ಸಹಕಾರದ ಮನೋಭಾವ ಬೆಳೆಸಿಕೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕ್ರೀಡಾಕೂಟಗಳನ್ನು ಆಯೋಜಿಸುವುದರಿಂದ ಯುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ದೊರೆಯುವ ಜತೆಗೆ ಗ್ರಾಮದಲ್ಲಿ ಸೌಹಾರ್ದತೆ ಮತ್ತು ಒಗ್ಗಟ್ಟು ವೃದ್ಧಿಯಾಗುತ್ತದೆ ಎಂದು ತಿಳಿಸಿದರು.

ಪಂದ್ಯಾವಳಿಯಲ್ಲಿ ಬಜರಂಗಿ ತಂಡ, ಭಗತ್ ಸಿಂಗ್ ತಂಡ, ಛತ್ರಪತಿ ಶಿವಾಜಿ ತಂಡ ಹಾಗೂ ಇಮ್ಮಡಿ ಪುಲಕೇಶಿ ತಂಡ ಸೇರಿದಂತೆ ಒಟ್ಟು ನಾಲ್ಕು ತಂಡಗಳು ಭಾಗವಹಿಸಿ, ಕ್ರೀಡಾಸ್ಫೂರ್ತಿಯಿಂದ ಸೆಣಸಾಡಿದವು. ತಂಡಗಳ ಆಟಗಾರರು ಉತ್ತಮ ಪ್ರದರ್ಶನ ನೀಡುವ ಮೂಲಕ ಕ್ರೀಡಾಭಿಮಾನಿಗಳ ಗಮನ ಸೆಳೆದರು.

ದೀಪಾವಳಿ ಹಬ್ಬದ ಸಂಭ್ರಮದೊಂದಿಗೆ ಗಾದಿಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಈ ಕ್ರೀಡಾಕೂಟ ಗ್ರಾಮದಲ್ಲಿ ಹಬ್ಬದ ವಾತಾವರಣಕ್ಕೆ ಮತ್ತಷ್ಟು ಮೆರುಗು ನೀಡಿತು. ಪಂದ್ಯಾವಳಿಯ ಎಲ್ಲ ಪಂದ್ಯಗಳು ಅಚ್ಚುಕಟ್ಟಾಗಿ ಹಾಗೂ ವ್ಯವಸ್ಥಿತವಾಗಿ ನಡೆದವು. ಗ್ರಾಮಸ್ಥರು, ಯುವಕರು ಹಾಗೂ ಕ್ರೀಡಾಭಿಮಾನಿಗಳು ಪಂದ್ಯಾವಳಿಗೆ ಉತ್ತಮ ಪ್ರೋತ್ಸಾಹ ನೀಡಿದರು.

ಧಾರ್ಮಿಕ ಆಚರಣೆಗಳ ಜತೆಗೆ ಕ್ರೀಡಾ ಚಟುವಟಿಕೆಗೂ ಆದ್ಯತೆ ನೀಡುವ ಮೂಲಕ ಗುಳೆ ಗ್ರಾಮದ ಯುವಕರು ಹಬ್ಬ ಮತ್ತು ಜಾತ್ರಾ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿರುವುದು ಮೆಚ್ಚುಗೆಗೆ ಪಾತ್ರವಾಯಿತು.

ತಂಡಗಳ ಮಾಲೀಕರಾದ ನಿಂಗಪ್ಪ ಮಾದರ, ಬಸವರಾಜ ಎಸ್. ಮಂತ್ರಿ, ಮುಕ್ಕಣ್ಣ ಹೊಸಳ್ಳಿ, ಕನಕಪ್ಪ ಹಡಪದ ಹಾಗೂ ಪಂದ್ಯಾವಳಿಗೆ ಪ್ರಥಮ ಬಹುಮಾನ ಸೋಮಶೇಖರ ಪಾಟೀಲ್, ತೃತೀಯ ಬಹುಮಾನ ಗುರು ಹಿರಿಯರು, ತೃತೀಯ ಬಹುಮಾನ ನಾಗರಾಜ ತಳವಾರ, ಚತುರ್ಥ ಬಹುಮಾನ ಪರಶುರಾಮ‌ ಚೌಡ್ಕಿ ಅವರು ನೀಡದರು.

ನಿರ್ಣಾಯಕರಾದ ಬಿ.ಎಸ್. ಚಂದ್ರಗಿರಿ, ಶರಣಪ್ಪ ಏಳುಗುಡ್ಡದ, ಶಿವಶರಣ ಹುಗ್ಗಿ ಕಾರ್ಯ ನಿರ್ವಹಿಸಿದರು. ಪ್ರಮುಖರಾದ ಬಸವರಾಜ ಹೂಗಾರ, ಯಮನೂರಪ್ಪ ಮಂತ್ರಿ, ಶರಣಪ್ಪ ಕಂದಕೂರ, ಹನುಮಂತಪ್ಪ ಉಚ್ಚಲಕುಂಟಿ, ಶಿವರಾಜ ಪೊಲೀಸ್ ಪಾಟೀಲ್, ಪ್ರಭಾಕರ ನಿಡಶೇಸಿ, ಮರೇಗೌಡ ಗೌಡ್ರ, ಸಿರಿಯಾಳಪ್ಪ ಹರಿಜನ, ಮಂಜು ಕೋಳೂರ, ಪರಶುರಾಮ ಬಳೂಟಗಿ, ಪರಮೇಶ, ರಮೇಶ ಹೊಸಳ್ಳಿ, ರಮೇಶ ಟಣಕನಕಲ್, ಶಿಕ್ಷಕರಾದ ಶರಣಪ್ಪ ಉಚ್ಚಲಕುಂಟಿ, ಈಶಪ್ಪ ತಳವಾರ್, ಪಿಡಿಒ ಪರಶುರಾಮ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

12, 13ರಂದು ಪುಣ್ಯಾರಾಧನೆ, ಸ್ಮರಣೋತ್ಸವ, ಜನಜಾಗೃತಿ ಧರ್ಮ ಸಮ್ಮೇಳನ
ಟನಲ್ ಮಾಡಿದ್ರೂ ಆಗಲ್ಲ, ಎಲಿವೇಟೆಡ್‌ ಮಾಡಿದರೂ ಅಪಾದನೆ: ಡಿಕೆಶಿ ಆಕ್ರೋಶ