ಕನ್ನಡಪ್ರಭ ವಾರ್ತೆ ಶಹಾಪುರ :
ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಪರ ಶನಿವಾರ ನಗರದ ಸಿ.ಬಿ. ಕಮಾನದಿಂದ ಬಸವೇಶ್ವರ ವೃತ್ತದ ವರೆಗೆ ರೋಡ್ ಶೋ ನಡೆಸಿದ ನಂತರ, ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಮುಸಲ್ಮಾನರ ಪರ ದೇಶದಲ್ಲಿ 52 ಪಕ್ಷಗಳಿವೆ, ಆದರೆ ಹಿಂದೂಗಳಿಗೆ ಬಿಜೆಪಿ ಒಂದೇ ಪಕ್ಷ ಎಂದರು.
ನಾನು ಲಿಂಗಾಯಿತ, ದಲಿತ, ಗಾಣಿಗ, ಬಣಜಿಗ ಆ ಜಾತಿ, ಈ ಜಾತಿಯೆಂದು ಬೇರೆ ಬೇರೆಯಾದರೆ ಈ ದೇಶದಲ್ಲಿ ಹಿಂದೂಗಳಿಗೆ ಉಳಿಗಾಲವಿಲ್ಲ. ಹಿಂದೂಗಳ ಪರವಾದ ಏಕೈಕ ಪಕ್ಷ ಎಂದರೆ ಬಿಜೆಪಿ. ದೇಶದ ರಕ್ಷಣೆ, ಅಭಿವೃದ್ಧಿ ಹಾಗೂ ಭಯೋತ್ಪಾದಕ ಮುಕ್ತ ಭಾರತಕ್ಕಾಗಿ, ಹಿಂದೂ ರಾಷ್ಟ್ರಕ್ಕಾಗಿ ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಮಾಡಬೇಕಾಗಿರುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಎಂದರು. ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಈ ಬಾರಿ ನಡೆಯುವ ಲೋಕ ಚುನಾವಣೆ ಇಡೀ ದೇಶದ ಭವಿಷ್ಯ ರೂಪಿಸುವ ಮಹಾ ಚುನಾವಣೆ. ದೇಶದ ಉಜ್ವಲ ಭವಿಷ್ಯದ ವಿಶಾಲವಾದ ದೃಷ್ಟಿಕೋನ ಇಟ್ಟುಕೊಂಡ ಚುನಾವಣೆ ಆಗಿದೆ ಎಂದರು.ಇದೇ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಅಮಿನ್ ರೆಡ್ಡಿ ಯಾಳಗಿ ಮಾತನಾಡಿದರು. ಈ ವೇಳೆ ನಗರ ಮಂಡಲ ಅಧ್ಯಕ್ಷ ದೇವೇಂದ್ರ ಕೊನೇರ, ತಾಲೂಕು ಮಂಡಲ ಅಧ್ಯಕ್ಷ ರಾಜುಗೌಡ ಉಕ್ಕಿನಾಳ, ಜಿಲ್ಲಾ ಕಾರ್ಯದರ್ಶಿ ಗುರು ಕಾಮಾ, ಬಿಜೆಪಿಯ ಹಿರಿಯ ಮುಖಂಡ ಡಾ. ಚಂದ್ರಶೇಖರ್ ಸುಬೇದಾರ್, ಬಸವರಾಜ ವಿಭೂತಿಹಳ್ಳಿ, ಶಿವರಾಜ್ ದೇಶಮುಖ್, ರಾಘವೇಂದ್ರ ಯಕ್ಷಿಂತಿ, ಮಲ್ಲಿಕಾರ್ಜುನ ಕಂಕಕೂರ, ಅಡಿವೆಪ್ಪ ಜಾಕಾ, ತಿರುಪತಿ ಹಟ್ಟಿ ಕಟ್ಟಿಗಿ, ರಾಜಶೇಖರ್ ಗೂಗಲ್ ಸೇರಿದಂತೆ ಅನೇಕ ನಾಯಕರು ಇದ್ದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: