ನನ್ನ ಮಾನ-ಮರ್ಯಾದೆ ಉಳಿಸಲು ಬಿಜೆಪಿ ಮತ ಹಾಕಿ: ದೊಡ್ಡನಗೌಡ ಪಾಟೀಲ

KannadaprabhaNewsNetwork |  
Published : Apr 27, 2024, 01:18 AM IST
ಫೋಟೋ26ಕೆಎಸಟಿ3: ಕುಷ್ಟಗಿ ತಾಲೂಕಿನ ದೋಟಿಹಾಳದಲ್ಲಿ ಬಿಜೆಪಿ ಚುನಾವಣೆ ಪ್ರಚಾರ ಅಂಗವಾಗಿ ಮತಯಾಚನೆ ಕಾರ್ಯಕ್ರಮ ನಡೆಯಿತು. ಶಾಸಕ ದೊಡ್ಡನಗೌಡ ಪಾಟೀಲ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿರುವದು. ಮತಯಾಚನೆ ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಮಾತನಾಡಿದರು. | Kannada Prabha

ಸಾರಾಂಶ

ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಮಾನ, ಮರ್ಯಾದೆ ಉಳಿಯಬೇಕು ಎಂದಾದರೆ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ ಎಂದು ವಿರೋಧ ಪಕ್ಷದ ಮುಖ್ಯ ಸಚೇತಕ, ಶಾಸಕ ದೊಡ್ಡನಗೌಡ ಪಾಟೀಲ ಜನರಲ್ಲಿ ಮನವಿ ಮಾಡಿದ್ದಾರೆ.

ಕುಷ್ಟಗಿ: ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಮಾನ, ಮರ್ಯಾದೆ ಉಳಿಯಬೇಕು ಎಂದಾದರೆ, ನಾನು ಮುಂದಿನ ಚುನಾವಣೆ ಎದುರಿಸಬೇಕು ಎಂದಾದರೆ ಕ್ಷೇತ್ರದ ಮತದಾರರು ನನ್ನ ಕೈ ಹಿಡಿದಂತೆ ಡಾ. ಬಸವರಾಜ ಅವರ ಕೈ ಹಿಡಿಯಬೇಕು ಎಂದು ವಿರೋಧ ಪಕ್ಷದ ಮುಖ್ಯ ಸಚೇತಕ, ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ಲೋಕಸಭಾ ಚುನಾವಣೆ ಅಂಗವಾಗಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಈ ಕ್ಷೇತ್ರದ ಜನತೆಯ ಕಷ್ಟ-ಸುಖದಲ್ಲಿ ನಾನು ಭಾಗಿಯಾಗಬೇಕು ಹಾಗೂ ನನ್ನ ಕಷ್ಟ-ಸುಖದಲ್ಲಿ ಕ್ಷೇತ್ರದ ಜನತೆ ಭಾಗಿಯಾಗಬೇಕು. ಬೇರೆಯವರ ಹೇಳುವ ಸುಳ್ಳುಗಳಿಗೆ, ಆಸೆ-ಆಮಿಷಗಳಿಗೆ ಬಲಿಯಾಗದೆ, ಬಿಜೆಪಿಗೆ ಮತ ನೀಡಿ ಎಂದರು.

ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ ಮಾತನಾಡಿ, ಭಾರತದ ರಕ್ಷಣಾ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳು, ಬದಲಾವಣೆಗಳು ಆಗಿವೆ. ಇತ್ತೀಚಿಗೆ ಸ್ವದೇಶಿ ಬುಲೆಟ್ ಪ್ರೂಪ್ ಜಾಕೆಟ್ ಉದಾಹರಣೆ ಕೂಡಾ ಒಂದು. ಆತ್ಮನಿರ್ಭರ ಭಾರತ ಎಂಬ ಘೋಷಣೆ ಕೇವಲ ಮಾತಾಗಿ ಉಳಿಯದೆ ಕಾರ್ಯರೂಪಕ್ಕೆ ತರಲಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಮಾಜಿ ಶಾಸಕ ಕೆ. ಶರಣಪ್ಪ, ಕುಷ್ಟಗಿ ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ್ ಬಾದಾಮಿ, ಲಾಡಸಾಬ್ ಕೊಳ್ಳಿ, ಗುರುಮೂರ್ತಿ ಸ್ವಾಮಿ ಅಳವಂಡಿ ಮಾತನಾಡಿದರು. ಪಕ್ಷದ ಮುಖಂಡರಾದ ಅಶೋಕ್ ಬಳೂಟಗಿ, ಫಕೀರಪ್ಪ ಚಳಗೇರಿ, ಸಂಗಪ್ಪ ಕಡಿವಾಲ, ಶಂಕರಗೌಡ ಜಾಲಿಹಾಳ, ವಿಜಯಕುಮಾರ್ ಹಿರೇಮಠ, ಬಾಲಾಜಿ, ಕ್ಯಾದಿಗೆಪ್ಪ ಹೆಸರೂರು, ಚನ್ನಪ್ಪ, ಶೇಖರಗೌಡ, ಶಿವನಗೌಡ ಪಾಟೀಲ್, ಬನ್ನನಗೌಡ, ಸಿದ್ದನಗೌಡ, ಕಾಳೇಶ ಬಡಿಗೇರ, ದೇವಪ್ಪ ಬಾಗೇವಾಡಿ ಉಪಸ್ಥಿತರಿದ್ದರು.ಬಿಜೆಪಿ ಅಭ್ಯರ್ಥಿಯಿಂದ ಬೈಕ್ ರ‍್ಯಾಲಿ: ದೋಟಿಹಾಳ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕೆ. ಶರಣಪ್ಪ ಅವರಿಗೆ ಅದ್ಧೂರಿ ಸ್ವಾಗತ ದೊರೆಯಿತು. ಬಿಜೆಪಿ ಕಾರ್ಯಕರ್ತರು ನೂರಾರು ಬೈಕ್‌ಗಳಲ್ಲಿ ರ‍್ಯಾಲಿ ನಡೆಸಿದರು. ರ‍್ಯಾಲಿಯುದ್ದಕ್ಕೂ ದೇಶದ ಭದ್ರತೆಗೆ ಬಿಜೆಪಿಗೆ ಮತ ನೀಡಿ ಎಂದು ಘೋಷಣೆ ಕೂಗಿದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ