ವೋಟ್‌ ಚೋರ್‌ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ

KannadaprabhaNewsNetwork |  
Published : Nov 04, 2025, 12:45 AM IST
ಹರಪನಹಳ್ಳಿಯ ಕಾಂಗ್ರೆಸ್‌ ಭವನದಲ್ಲಿ ಹಮ್ಮಿಕೊಂಡಿದ್ದ ವೋಟ್‌ ಚೋರ್‌ ಗದ್ದಿ ಚೋಡ್‌ ಅಭಿಯಾನಕ್ಕೆ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಚಾಲನೆ ನೀಡಿದರು.  | Kannada Prabha

ಸಾರಾಂಶ

ನ.6ನೇ ತಾರೀಕಿನಂದು ಜಿಲ್ಲಾ ಘಟಕದ ಮೂಲಕ ಕೆಪಿಸಿಸಿಗೆ ಕಳಿಸಿ ಕೊಡಲಾಗುತ್ತದೆ

ಹರಪನಹಳ್ಳಿ: ಮತಗಳ್ಳತನ ಕುರಿತು ಇಲ್ಲಿಯ ಬ್ಲಾಕ್‌ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ವೋಟ್‌ ಚೋರ್‌ ಗದ್ದಿ ಚೋಡ್‌ ಅಭಿಯಾನಕ್ಕೆ ಪಟ್ಟಣದ ಕಾಶಿ ಬಡಾವಣೆಯಲ್ಲಿರುವ ಕಾಂಗ್ರೆಸ್‌ ಭವನದಲ್ಲಿ ಭಾನುವಾರ ಚಾಲನೆ ನೀಡಲಾಯಿತು.

ಸಹಿ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು ಸಂವಿಧಾನ ಹಕ್ಕು ಕಸಿದುಕೊಳ್ಳುವ ಪ್ರಯತ್ನ ಮಾಡಲಾಗುತ್ತದೆ. ದೇಶಕ್ಕೆ ಸಂದೇಶ ಕಳಿಸಿ ಕೊಡಲು ಈ ಕಾರ್ಯಕ್ರಮ ಮಾಡಲಾಗುತ್ತದೆ ಎಂದರು.

ಹರಪನಹಳ್ಳಿ ಬ್ಲಾಕ್ ನಿಂದ 20 ಸಾವಿರ ಹಾಗೂ ಚಿಗಟೇರಿ ಬ್ಲಾಕ್‌ ನಿಂದ 10 ಸಾವಿರ ಸಹಿ ಸಂಗ್ರಹ ಮಾಡಿ ನ.6ನೇ ತಾರೀಕಿನಂದು ಜಿಲ್ಲಾ ಘಟಕದ ಮೂಲಕ ಕೆಪಿಸಿಸಿಗೆ ಕಳಿಸಿ ಕೊಡಲಾಗುತ್ತದೆ ಎಂದು ಅವರು ತಿಳಿಸಿದರು.

ಮುಖಂಡ ಎಚ್.ಎಂ. ಮಲ್ಲಿಕಾರ್ಜುನ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಎಂ.ವಿ. ಅಂಜಿನಪ್ಪ, ಕುಬೇರಗೌಡ, ಮುಖಂಡ ಗೌತಮಪ್ರಭು, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಕಂಚಿಕೇರಿ ಜಯಲಕ್ಷ್ಮಿ, ಪಿಕಾರ್ಡ ಬ್ಯಾಂಕ್‌ ಅಧ್ಯಕ್ಷ ಲಾಟಿದಾದಾಪೀರ, ವಕೀಲ ಬಸವರಾಜ ಸಂಗಪ್ಪನವರ್, ಪುರಸಭಾ ಸದಸ್ಯರಾದ

ಅಬ್ದುಲ್‌ ರಹಿಮಾನ್, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅದ್ಯಕ್ಷ ಉದಯಶಂಕರ, ಅಂಜುಮನ್‌ ಕಾರ್ಯಾದ್ಯಕ್ಷ ಕೂಲ್‌ ಇರ್ಪಾನ್, ಮುಸ್ಲಿಂ ಸಂಘಟನೆಯ ಶಮಿವುಲ್ಲಾ ಎಸ್.ಕೆ. ಮೈದೂರು ಒ,ರಾಮಣ್ಣ, ತಿಮ್ಮನಾಯ್ಕ, ಗುಂಡಗತ್ತಿ ಕೊಟ್ರಪ್ಪ, ಸುಮಾ ಜಗದೀಶ, ಗಾಯತ್ರಮ್ಮ , ಹಲಗೇರಿ ಮಂಜಪ, ಇಸ್ಮಾಯಿಲ್‌ ಎಲಿಗಾರ ಇತರರು ಇದ್ದರು.

ಹರಪನಹಳ್ಳಿಯ ಕಾಂಗ್ರೆಸ್‌ ಭವನದಲ್ಲಿ ಹಮ್ಮಿಕೊಂಡಿದ್ದ ವೋಟ್‌ ಚೋರ್‌ ಗದ್ದಿ ಚೋಡ್‌ ಅಭಿಯಾನಕ್ಕೆ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಚಾಲನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೃಹಲಕ್ಷ್ಮಿ ಹಣ ಮುಂದಿನ ವಾರ ಖಾತೆಗೆ ಜಮೆ: ಎಂ.ಎಲ್.ದಿನೇಶ್
ಗೆಜ್ಜಲಗೆರೆ ಗ್ರಾಮಸ್ಥರ ಪ್ರತಿಭಟನೆ ರಾಜಕೀಯ ಪ್ರೇರಿತ: ಸತೀಶ್ ಆರೋಪ