ಅಳ್ನಾವರ:
ಕೇಂದ್ರ ಸರ್ಕಾರ ಸುಳ್ಳು ಭರವಸೆ ನೀಡುವ ಮೂಲಕ ಕಾಲಹರಣ ಮಾಡುತ್ತಿದೆ. ಬಡವರಿಗೆ ಪೂರಕವಾದ ಯಾವುದೇ ಯೋಜನೆ ಈ ವರೆಗೂ ಜಾರಿಗೊಳಿಸಿಲ್ಲ. 2014ರಲ್ಲಿ ಅಧಿಕಾರಕ್ಕೆ ಬರುವ ಮೊದಲು ನರೇಂದ್ರ ಮೋದಿ ಅವರು ಬಡವರ ಖಾತೆಗೆ ₹ 15 ಲಕ್ಷ ಹಾಕುವುದಾಗಿ ಹೇಳಿದ್ದರು. ಅದು ಈ ವರೆಗೂ ಈಡೇರಿಲ್ಲ ಎಂದು ದೂರಿದ ಸಚಿವರು, ಶ್ರೀಮಂತರ ಕಪ್ಪು ಹಣವನ್ನು ವೈಟ್ ಮನಿ ಮಾಡಲು ನೋಟ್ ಬ್ಯಾನ್ ಮಾಡಿದರು. ಇದರಲ್ಲಿ 103 ಬಡವರು ಜೀವ ಕಳೆದುಕೊಂಡರು ಎಂದು ಆಪಾದಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆ ಘೋಷಿಸುವ ಮೂಲಕ ಬಡವರಿಗೆ ನೆರವಾಗಿದೆ. ಇದಕ್ಕೆ ₹ 58 ಸಾವಿರ ಕೋಟಿ ಮೀಸಲಿಡಲಾಗಿದೆ ಎಂದ ಸಚಿವರು, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬದ ಮಹಿಳೆಗೆ ₹ 1 ಲಕ್ಷ ನೀಡುವುದಾಗಿ ಘೋಷಿಸಿದೆ. ಆದರಿಂದ ಮತದಾರರು ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವ ಮೂಲಕ ಗೆಲ್ಲಿಸಬೇಕು ಎಂದರು.ಶಾಸಕ ಎನ್.ಎಚ್. ಕೊನರೆಡ್ಡಿ ಮಾತನಾಡಿ, ರಾಜ್ಯದಲ್ಲಿ ತೀವ್ರ ಬರಗಾಲ ಇದ್ದರೂ ಕೇಂದ್ರ ಸರ್ಕಾರ ಪರಿಹಾರ ನೀಡುತ್ತಿಲ್ಲ. ಬಡವರ ಬಗ್ಗೆ ಗಮನಕೊಡದ ಸರ್ಕಾರ ನಮಗೆ ಬೇಡ ಎಂದರು.
ಅಭ್ಯರ್ಥಿ ವಿನೋದ ಅಸೂಟಿ ಮಾತನಾಡಿದರು.ವಿದೇ ವೇಳೆ ತಾಲೂಕಿನ ಅನೇಕ ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆಗೊಂಡರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶಗೌಡ ಕರಿಗೌಡರ, ಮಯೂರ ಮೋರೆ, ಮಲ್ಲನಗೌಡ ಪಾಟೀಲ, ಛಗನಲಾಲ ಪಟೇಲ, ಹಸನಲಿ ಶೇಖ, ಮಧು ಬಡಸ್ಕರ, ಭಾಗ್ಯವತಿ ಕುರುಬರ, ಸತ್ತಾರ ಬಾತಖಂಡೆ, ಶ್ರೀಕಾಂತ ಗಾಯಕವಾಡ, ಎಸ್.ಆರ್. ಪಾಟೀಲ, ಪೈರೋಜ ಪಠಾಣ, ವಿನಾಯಕ ಕುರುಬರ ಇದ್ದರು.