ಅರ್ಹರು ಮತ್ತು ಶ್ರೇಷ್ಠರಿಗೆ ಮತ ನೀಡಿ: ಪ್ರೊ.ಎನ್.ಕೆ. ಲೋಲಾಕ್ಷಿ ಕರೆ

KannadaprabhaNewsNetwork | Published : Apr 19, 2024 1:05 AM

ಸಾರಾಂಶ

ಮತದಾನ ಸಂವಿಧಾನ ಮತ್ತು ಪ್ರಜಾಪ್ರತ್ವದ ಸೌಂದರ್ಯ ಯಾವುದೇ ಜಾತಿ, ಧರ್ಮ, ಉಡುಗೊರೆ ಇತ್ಯಾದಿಗಳ ಮೋಹಕ್ಕೆ ಸಿಲುಕದೆ ಅರ್ಹರಿಗೆ, ಶ್ರೇಷ್ಠರಿಗೆ ನಮ್ಮ ಮತವನ್ನು ನೀಡಿದರೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯ ಹೆಚ್ಚುತ್ತದೆ. ಅಂಬೇಡ್ಕರ್ ಅವರು ಮತದಾನದ ಹಕ್ಕನ್ನು ಸಾಂವಿಧಾನಿಕವಾಗಿ ದೊರಕಿಸಿಕೊಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಜಾತಿ, ಧರ್ಮ, ಉಡುಗೊರೆ ಇತ್ಯಾದಿ ಮೋಹಕ್ಕೆ ಸಿಲುಕದೆ ಅರ್ಹರಿಗೆ ಮತ್ತು ಶ್ರೇಷ್ಠರಿಗೆ ಮತ ನೀಡುವಂತೆ ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ.ಎನ್.ಕೆ. ಲೋಲಾಕ್ಷಿ ಹೇಳಿದರು.

ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕವು ಪ್ರಜಾಪ್ರಭುತ್ವದ ಉಳಿವಿಗಾಗಿ ಮತದಾನ ಮತಜಾಗೃತಿ ಅಭಿಯಾನಕ್ಕೆ ನಗರದ ಪುರಭವನ ಎದುರಿನ ಡಾ.ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಗುರುವಾರ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಮತದಾನ ಸಂವಿಧಾನ ಮತ್ತು ಪ್ರಜಾಪ್ರತ್ವದ ಸೌಂದರ್ಯ ಯಾವುದೇ ಜಾತಿ, ಧರ್ಮ, ಉಡುಗೊರೆ ಇತ್ಯಾದಿಗಳ ಮೋಹಕ್ಕೆ ಸಿಲುಕದೆ ಅರ್ಹರಿಗೆ, ಶ್ರೇಷ್ಠರಿಗೆ ನಮ್ಮ ಮತವನ್ನು ನೀಡಿದರೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯ ಹೆಚ್ಚುತ್ತದೆ. ಅಂಬೇಡ್ಕರ್ ಅವರು ಮತದಾನದ ಹಕ್ಕನ್ನು ಸಾಂವಿಧಾನಿಕವಾಗಿ ದೊರಕಿಸಿಕೊಟ್ಟಿದ್ದಾರೆ. ಮತದಾನವನ್ನು ನಾವು ಹಕ್ಕಾಗಿ ಹೇಗೆ ಪ್ರತಿಪಾದಿಸುತ್ತೇವೆಯೋ ಹಾಗೆಯೇ ಕರ್ತವ್ಯವಾಗಿಯೂ ಎಚ್ಚರಿಕೆಯಿಂದ ಗಮನಿಸಿಕೊಳ್ಳಬೇಕು ಎಂದರು.

ವಿದ್ಯಾವಂತರು ಮತ್ತು ತಿಳಿದವರು ಪ್ರಜಾಪ್ರಭುತ್ವ ಮತ್ತು ಮತದಾನದ ಬಗ್ಗೆ ಭಾಷಣ ಮಾಡುತ್ತಾರೆ. ಅಷ್ಟೇ ಉತ್ಸಾಹದಿಂದ ಮತದಾನವನ್ನು ಮಾಡುವ ಮೂಲಕ ಪ್ರಜಾಪ್ರಭುತ್ವಕ್ಕೆ ಶಕ್ತಿ ತುಂಬಬೇಕು ಎಂದು ಅವರು ತಿಳಿಸಿದರು.

ವಿಶ್ವಮೈತ್ರಿ ಬುದ್ಧ ವಿಹಾರದ ಡಾ. ಕಲ್ಯಾಣಸಿರಿ ಭಂತೇಜಿ ಮಾತನಾಡಿದರು. ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಾ. ರಂಗಸ್ವಾಮಿ ಕಾಳಿಹುಂಡಿ, ಉಪಾಧ್ಯಕ್ಷ ಡಾ. ಮಂಜು ಟಿ. ಸತ್ತಿಗೆಹುಂಡಿ, ಖಜಾಂಚಿ ಡಾ.ಬಿ. ಶಿವಶಂಕರ್, ಜಿಲ್ಲಾ ಸಂಯೋಜಕ ಡಾ. ಚಂದ್ರಗುಪ್ತ, ದಲಿತ ಸಹಿತ್ಯ ಪರಿಷತ್ತಿನ ಪ್ರಕಾಶನ ಸಲಹೆಗಾರ ಡಾ.ಬಿ. ಮೂರ್ತಿ, ಸಹ ಕಾರ್ಯದರ್ಶಿ ಡಾ.ಟಿ.ಎಂ. ಪವಿತ್ರ, ಜಿಲ್ಲಾ ವಕೀಲಕರ ಸಂಘದ ಅಧ್ಯಕ್ಷ ಎಸ್. ಲೋಕೇಶ್, ವಕೀಲ ಎಸ್. ಉಮೇಶ್, ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಕೆ.ಸಿ. ನಾಗರಾಜು ಮೊದಲಾದವರು ಇದ್ದರು.

Share this article