ತೇರದಾಳ: ದೇಶದಲ್ಲಿ ಚುನಾವಣೆ ಗೆದ್ದ ನಂತರ ಬೇರೆ ದೇಶಕ್ಕೆ ಜಿಂದಾಬಾದ್ ಹೇಳುವ ಕಾಂಗ್ರೆಸ್ ಪಕ್ಷದವರಿಗೆ ಮತ ನೀಡದೆ, ದೇಶ ಪ್ರೇಮ ಹೊಂದಿರುವ ಬಿಜೆಪಿಗೆ ಮತ ನೀಡುಬೇಕೆಂದು ಎಂದು ಮಾಜಿ ಸಚಿವ ಸಿ.ಟಿ.ರವಿ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ತೇರದಾಳ (ರ-ಬ)ದೇಶದಲ್ಲಿ ಚುನಾವಣೆ ಗೆದ್ದ ನಂತರ ಬೇರೆ ದೇಶಕ್ಕೆ ಜಿಂದಾಬಾದ್ ಹೇಳುವ ಕಾಂಗ್ರೆಸ್ ಪಕ್ಷದವರಿಗೆ ಮತ ನೀಡದೆ, ದೇಶ ಪ್ರೇಮ ಹೊಂದಿರುವ ಬಿಜೆಪಿಗೆ ಮತ ನೀಡುಬೇಕೆಂದು ಎಂದು ಮಾಜಿ ಸಚಿವ ಸಿ.ಟಿ.ರವಿ ಮನವಿ ಮಾಡಿದರು.
ಬಿಜೆಪಿ ಅಭ್ಯರ್ಥಿ ಗದ್ದಿಗೌಡರ ಪರ ತೇರದಾಳದಲ್ಲಿ ಬೃಹತ್ ರೋಡ್ ಶೋ ನಡೆಸಿ, ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು, ದೇಶದ ಚಿನ್ನವನ್ನು ಬೇರೆ ರಾಷ್ಟ್ರದ ಬಳಿ ಒತ್ತೆಯಿಟ್ಟು ಸಾಲ ತರುವ ಸ್ಥಿತಿಗೆ ಕಾಂಗ್ರೆಸ್ ತಂದು ನಿಲ್ಲಿಸಿತ್ತು. ಮೋದಿ ಆಡಳಿತ ಬಂದ ಮೇಲೆ ಜಗತ್ತಿನ ಹಲವು ರಾಷ್ಟ್ರಗಳಿಗೆ ನೆರವು ನೀಡುವ ಮಟ್ಟಿಗೆ ಬೆಳೆದಿದ್ದು ಜನರ ಕಣ್ಣ ಮುಂದಿದೆ. ಈ ದೇಶಕ್ಕೆ ಮೋದಿಗಿಂತ ಸಮರ್ಥ ನಾಯಕ ಬೇರೊಬ್ಬರಿಲ್ಲ. ಅವರು ಮತ್ತೊಮ್ಮೆ ಅವರು ಪ್ರಧಾನಿಯಾಗಬೇಕು. ಅಂಬೇಡ್ಕರ್ ಸೇರಿದಂತೆ ಈ ದೇಶದ ಬಹಳಷ್ಟು ನಾಯಕರಿಗೆ ಕಾಂಗ್ರೆಸ್ ಮೋಸ ಮಾಡಿದೆ. ಮೋದಿ ಮತ್ತೆ ಪ್ರಧಾನಿಯಾದರೆ ಕೆಲವೇ ವರ್ಷಗಳಲ್ಲಿ ಭಾರತ ಜಗತ್ತಿನ ಬಲಿಷ್ಠ ರಾಷ್ಟ್ರವಾಗುವುದರಲ್ಲಿ ಸಂದೇಹವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿದರು. ಮಹಾವೀರ ಕೊಕಟನೂರ, ರಾಮಣ್ಣ ಹಿಡಕಲ್, ಭುಜಬಲಿ ಕೇಂಗಾಲಿ, ಡಾ.ಪುಷ್ಪದಂತ ದಾನಿಗೊಂಡ, ಸುರೇಶ ಅಕಿವಾಟ, ರಾಜು ಬೆಳವಣಕಿ, ಪ್ರಕಾಶ ಮಾನಶೆಟ್ಟಿ, ಮಹಾಂತೇಶ ಹುಂಡೇಕಾರ, ಲಕ್ಕಪ್ಪ ಪಾಟೀಲ, ಅನಿಲ ಗುಬಚೆ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು. ಪಟ್ಟಣದ ಕಲ್ಲಟ್ಟಿ ಗಲ್ಲಿಯಿಂದ ಆರಂಭವಾದ ರೋಡ ಶೋ ಪಟ್ಟಣದ ಹಲವು ಗಲ್ಲಿಗಳ ಮೂಲಕ ಸಂಚರಿಸಿ ಜೋಳದ ಬಜಾರ್‌ನಲ್ಲಿ ಸಮಾಪ್ತಿಗೊಂಡಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.