ವರನ ತಂದೆ ನೋಡಿ ಮದುವೆ ಮಾಡಬೇಡಿ: ಮಾಜಿ ಉಪಮುಖ್ಯಮಂತ್ರಿ
ಕನ್ಯಾ ದಾನ ಮಾಡಲು ಉತ್ತಮ ವರ ನೋಡಬೇಕು. ವರನ ತಂದೆ ನೋಡಿ ಮದುವೆ ಮಾಡಬೇಡಿ ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ಗ್ರಾಮದ ಎಪಿಎಂಸಿ ಮೈನಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ ಪರ ಪ್ರಚಾರದಲ್ಲಿ ಮಾತನಾಡಿದರು.ಅಭ್ಯರ್ಥಿ ಬಿಟ್ಟು ಮೋದಿಯನ್ನ, ರಾಹುಲ್ ಗಾಂಧಿಯನ್ನು ನೋಡಿ ಮತ ಹಾಕುವುದಲ್ಲ. ನಮ್ಮ ಭಾಗದಲ್ಲಿ ಯಾವ ಅಭ್ಯರ್ಥಿ ಯೋಗ್ಯವಾಗಿದ್ದಾರೆ. ಜನರ ಸೇವೆ ಮಾಡಲು ಯಾರು ಲಭ್ಯವಿರುತ್ತಾರೆ ಎಂದು ನೋಡಿ ಅಂತಹವರಿಗೆ ಮತ ಹಾಕಬೇಕು. ಆಶ್ವಾಸನೆಯಂತೆ ಗ್ಯಾರಂಟಿ ಜಾರಿ ಮಾಡಿ ಮತ ಕೇಳುವ ಹಕ್ಕನ್ನು ಹೊಂದಿ ಮತ ಕೇಳಲು ಬಂದಿದ್ದೇವೆ. ಬಿಜೆಪಿಯವರು ಯಾವ ಮುಖ ಇಟ್ಟುಕೊಂಡು ಓಟು ಕೇಳಲು ಬಂದಿದ್ದಾರೆ ಎಂದು ಪ್ರಶ್ನಿಸಿದರು.ರೈತರು ಉಪಯೋಗಿಸುವ ಗೊಬ್ಬರ, ಬೀಜ ಸೇರಿದಂತೆ ಎಲ್ಲ ಬೆಲೆಗಳು ಗಗನಕ್ಕೇರಿವೆ. ಬಿಜೆಪಿ ಸಾಲಮನ್ನಾ ಮಾಡಿಲ್ಲ. ಕಾಂಗ್ರೆಸ್ ಮಾತ್ರ ಸಾಲ ಮನ್ನಾ ಮಾಡಿದೆ. ಈ ಬಾರಿ ಮೋದಿ ಪ್ರಧಾನಿ ಆಗಲ್ಲ. ಇದು ಬರೆದುಕೊಳ್ಳಿ. ಬಿಜೆಪಿ ೨೨೦ ದಾಟುವುದಿಲ್ಲ. ಬಿಜೆಪಿ ತಂತಿ ಹರೆದ ತಂಬೂರಿಯಂತಾಗಿದೆ. ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ. ಮತದಾರರೆಂಬ ನ್ಯಾಯಾಧೀಶರು ಮೇ೭ರಂದು ತೀರ್ಪು ಕೊಡಬೇಕು ಎಂದರು.
ಮಾಜಿ ಶಾಸಕ ಹಸನಸಾಬ ದೋಟಿಹಾಳ ಮಾತನಾಡಿದರು.