ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಬಿಜೆಪಿ ಯಾವ ಯಾವ ರಾಜ್ಯದಲ್ಲಿ ಗೆದ್ದಿದೆ ಅಲ್ಲಿ ನಾವು ವೋಟ್ ಚೋರ್ ಅಭಿಯಾನವನ್ನು ಹಮ್ಮಿಕೊಂಡು ಜನರಿಗೆ ಅಸಲಿ ವೋಟ್ ಚೋರ್ ಯಾರೆಂಬುದನ್ನು ಬಹಿರಂಗಪಡಿಸುವೆವು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.ಪಟ್ಟಣದ ಪುರಸಭೆ ಕಚೇರಿಯಲ್ಲಿ ಯೋಜನಾ ಪ್ರಾಧಿಕಾರದ ನೂತನ ಕಚೇರಿ ಹಾಗೂ ಅದರ ಅಧ್ಯಕ್ಷರಾದ ಮುನಿರಾಜು ಅಧಿಕಾರ ಸ್ವೀಕಾರ ಸಭಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮತಗಳ್ಳತನ ಮಾಡಿಯೇ ಬಿಜೆಪಿ ಗೆದ್ದಿದೆ, ದೇಶದಲ್ಲಿ ಬಿಜೆಪಿ ಯಾವ ರಾಜ್ಯದಲ್ಲಿ ಗೆದ್ದಿದೆ. ಎಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಓಟ್ ಚೋರ್ ಅಭಿಯಾನವನ್ನು ಮಾಡಲಿದೆ. ಅದರಂತೆ ಬಂಗಾರಪೇಟೆ ಕ್ಷೇತ್ರದಲ್ಲಿಯೂ ಸಹ ಅಭಿಯಾನ ಮಾಡಿ ವೋಟ್ ಚೋರ್ ವಿರುದ್ಧ 2 ಲಕ್ಷ ಸಹಿ ಸಂಗ್ರಹ ಮಾಡಲಿದೆ ಎಂದು ತಿಳಿಸಿದರು.ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಸರ್ವಜನಾಂಗಕ್ಕೆ ಸಾಮಾಜಿಕ ನ್ಯಾಯಸಿಗಲಿದೆ. ಪಕ್ಷ ತಾಯಿ ಇದ್ದಂತೆ ಯಾರು ಪಕ್ಷಕ್ಕಾಗಿ ದುಡಿಯುವರೋ ಅವರನ್ನು ಪಕ್ಷ ಗುರುತಿಸಿ ಅಧಿಕಾರ ನೀಡಲಿದೆ. ಹಾಗಂತೆ ಎಲ್ಲರಿಗೂ ಒಮ್ಮೆಲೆ ಅಧಿಕಾರ ಸಿಗಲ್ಲ ಹಂತ ಹಂತವಾಗಿ ಸಿಗಲಿದೆ ಎಂದರು.ಮುಂದೆ ಬರುವ ಜಿಪಂ ತಾಪಂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲಬೇಕಾಗದರೆ ಗ್ರಾಮಪಂ ಚಾಯಿತಿಗಳಲ್ಲಿ ಯಾವ ಕಾಮಗಾರಿ ಕೈಗೊಳ್ಳಬೇಕೆಂಬುದನ್ನು ಪಟ್ಟಿ ಮಾಡಿ ಕೊಡಿ ನಾನು ಅಭಿವೃದ್ದಿ ಮಾಡುವೆ, ಆಗ ಅಧಿಕಾರ ಸಿಗಲಿದೆ. ಅಧಿಕಾರ ಸಿಕ್ಕಾಗ ಜನರಿಗೆ ಅನುಕೂಲವಾಗುವ ಕೆಲಸ ಮಾಡಬೇಕು. ಅದು ಬಿಟ್ಟು ಅಧಿಕಾರದ ದರ್ಪದಲ್ಲಿ ಮೆರೆಯಬಾರದು ಎಂದು ಹೇಳಿದರು.ನನ್ನ ರಾಜಕೀಯ ಭವಿಷ್ಯ ನಿರ್ಧಾರ ಮಾಡುವುದು ಕ್ಷೇತ್ರದ ಜನರೇ ಹೊರತು ಹೊರಗಿನಿಂದ ಬಂದು ಇಲ್ಲಿ ರಾಜಕೀಯ ಮಾಡುವವರಲ್ಲ ಎಂದು ಹೆಸರು ಹೇಳದೆ ಮಾಜಿ ಸಂಸದ ಎಸ್.ಮುನಿಸ್ವಾಮಿ ಅವರ ಕಾರ್ಯವೈಖರಿಯನ್ನು ಟೀಕಿಸಿದರು. ಅವರಿಗೆ ಅಧಿಕಾರವಿದ್ದಾಗ ಜಿಲ್ಲೆಗೆ ಏನು ಕೊಡುಗೆ ನೀಡಿಲ್ಲ. ಬದಲಾಗಿ ಹೋದ ಕಡೆಯಲ್ಲ ಬೆಂಕಿ ಹಚ್ಚಿ ರಾಜಕೀಯ ಮಾಡಲು ಯತ್ನಿಸುವರು ಇದನ್ನು ಜನರು ಸಹಿಸುವುದಿಲ್ಲ. ಕ್ಷೇತ್ರದ ಜನರು ನನ್ನ ಸೇವೆ ಸಾಕು ಎಂದರೆ ರಾಜಕೀಯದಿಂದ ದೂರ ಸರಿಯುವೆ ಅದು ಬಿಟ್ಟು ನನ್ನ ಮಗಳ ಮದುವೆಯಲ್ಲಿ ನಾನು ಕುಣಿದರೆ ಇದು ಕೊನೆ ಕುಣಿತ ಕುಣಿಯಲಿ ಎಂದು ಲೇವಡಿ ಮಾಡಿರುವುದಕ್ಕೆ ಕಿಡಿಕಾರಿದರು.ನೂತನ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್.ಮುನಿರಾಜು, ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ಪುರಸಭೆ ಅಧ್ಯಕ್ಷ ಗೋವಿಂದ, ಉಪಾಧ್ಯಕ್ಷೆ ಚಂದ್ರವೇಣಿ, ಮುಖಂಡರಾದ ಶಂಷುದ್ದಿಬಾಬು, ರಾಕೇಶ್ ಗೌಡ, ಶಫಿ, ವಸಂತ್, ಅರುಣಾಚಲಂಮಣಿ, ಗ್ರಾಪಂ ಅಧ್ಯಕ್ಷ ಆದಿನಾರಾಯಣ, ಎಸ್.ಕೆ.ಜಯಣ್ಣ, ಕುರುಬ ಸಂಘದ ಅಧ್ಯಕ್ಷ ಎಲ್. ರಾಮಕೃಷ್ಣ, ಸಿ.ಅಪ್ಪಯ್ಯಗೌಡ, ಡಿಸಿಸಿ ಬ್ಯಾಂಕಿನ ನಿರ್ದೇಶಕ ರಂಗಾಚಾರಿ, ಅ.ನಾ.ಹರೀಶ್, ಇತರರು ಇದ್ದರು.