ಚುನಾವಣಾ ಆಯೋಗದಿಂದ ಮತ ಕಳ್ಳತನ: ಸಚಿವ ಪುಟ್ಟರಂಗಶೆಟ್ಟಿ

KannadaprabhaNewsNetwork |  
Published : Oct 04, 2026, 01:30 AM IST
ಎಸ್‌ಐಆರ್‌ ಪ್ರಕ್ರಿಯೆ ರದ್ದಾಗಬೇಕು | Kannada Prabha

ಸಾರಾಂಶ

ಎಸ್‌ಐಆರ್‌ ಪ್ರಕ್ರಿಯೆ ರದ್ದಾಗಬೇಕು, ಚುನಾವಣಾ ಆಯೋಗ ವೋಟ್ ಕಳ್ಳತನ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಹನೂರು

ಎಸ್‌ಐಆರ್‌ ಪ್ರಕ್ರಿಯೆ ರದ್ದಾಗಬೇಕು, ಚುನಾವಣಾ ಆಯೋಗ ವೋಟ್ ಕಳ್ಳತನ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಆರೋಪಿಸಿದರು.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ಎಸ್‌ಐಆರ್‌ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ತೀವ್ರವಾಗಿ ನಮ್ಮ ಪಕ್ಷ ವಿರೋಧಿಸುತ್ತಿದೆ ಎಂದು ತಿಳಿಸಿದರು.

ಈ ಎಸ್‌ಐಆರ್‌ ಪ್ರಕ್ರಿಯೆಯನ್ನು ಮೊದಲಿನಿಂದಲೂ ನಾವು ವಿರೋಧ ಮಾಡಿಕೊಂಡೇ ಬಂದಿದ್ದೇವೆ. ಕಾಂಗ್ರೆಸ್ ಇರಬಹುದು, ಎಎಪಿ ಸೇರಿದಂತೆ ಎಲ್ಲ ವಿರೋಧ ಪಕ್ಷಗಳು ಇದನ್ನು ವಿರೋಧ ಮಾಡಿವೆ. ನಾವು ಸಹಕಾರವನ್ನು ನೀಡಿದ್ದೆವು. ಆದರೆ ಈಗ ಫಾರಂ ನಂ.7 ಅಂತ ಹೇಳಿ ಯಾರಿಗೆ ಕೊಟ್ಟರು, ಏನಾಯ್ತು ಗೊತ್ತಿಲ್ಲ, ಎಲ್ಲ ಆನ್‌ಲೈನ್ ಅಂತ ಹೇಳಿ ಅಮಾಯಕರ ಹೆಸರುಗಳನ್ನೆಲ್ಲ ಡಿಲೀಟ್ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಕೆಲವು ಕಡೆ ಅವರು ಒಪ್ಪಿಕೊಂಡಿದ್ದಾರೆ. ಸುಮಾರು ನೂರಾರು ಪ್ರಕರಣಗಳು ಆಗಿವೆ ಎಂದು ದೂರಿದರು.

ವೋಟ್ ಅಂದ್ರೆ ಅಸ್ತಿತ್ವ, ವೋಟ್ ಕಳ್ಳತನ ಸರಿಯೇ?:

ವೋಟ್ ಅತ್ಯಂತ ಮಹತ್ವದ್ದು. ಒಬ್ಬನ ವೋಟ್ ಅಂದ್ರೆ ಅವನ ಅಸ್ತಿತ್ವ ಇದ್ದಾಗೆ. ನಾವು ಸತ್ತಾಗ ವೋಟ್ ಇಲ್ಲ ಅನ್ನೋ ಮಹತ್ವದ ವಿಷಯದಲ್ಲೇ ಕಳ್ಳತನ ಮಾಡುವ ವ್ಯವಸ್ಥೆಯನ್ನು ಕೇಂದ್ರ ಚುನಾವಣಾ ಆಯೋಗ ಮಾಡುತ್ತಿದೆ ಅಂದರೆ ಅದು ಎಷ್ಟರ ಮಟ್ಟಿಗೆ ಸರಿ? ಹಾಗಾಗಿ ಕಾಂಗ್ರೆಸ್ ಒಂದೇ ವಿರೋಧ ಮಾಡ್ತಾ ಇಲ್ಲ, ಅನೇಕ ವಿರೋಧ ಪಕ್ಷಗಳು ವಿರೋಧ ಮಾಡಿದ ಪರಿಣಾಮ ಈಗ ಅವರು ವಾಪಸ್ ತೆಗೆದುಕೊಳ್ಳುವ ಮಟ್ಟಕ್ಕೆ, ತಪ್ಪಾಗಿದೆ ಅನ್ನೋ ಮಟ್ಟಕ್ಕೆ ಹೋಗಿದ್ದಾರೆ. ಎಸ್‌ಐಆರ್‌ ರದ್ದಾದರೆ ಎಲ್ಲರಿಗೂ ಮತದಾನ ಸಿಗುತ್ತದೆ ಎಂಬುದು ನನ್ನ ಭಾವನೆ ಎಂದರು.

ಬಿಜೆಪಿಯವರು ಕಾಂಗ್ರೆಸ್ ಹೋರಾಟ ಮಾಡುತ್ತಿದೆ ಎಂದು ದೂರು ಕೊಟ್ಟಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅನ್ಯಾಯ ಆದರೂ ಹೋರಾಟ ಮಾಡುವುದು ಬೇಡ ಅಲ್ಲವೇ? ವಿರೋಧ ಪಕ್ಷ ತಪ್ಪು ಮಾಡಿದರೆ ಆಡಳಿತ ಪಕ್ಷದವರು ಹೋರಾಟ ಮಾಡುತ್ತಾರೆ. ಕೇಂದ್ರದಲ್ಲಿ ಆಡಳಿತ ಪಕ್ಷ ಬಿಜೆಪಿ ತಪ್ಪು ಮಾಡಿದರೆ ನಾವು ಯಾಕೆ ಕೇಳಬಾರದು? ನಾವು ಕೇಳುತ್ತಿದ್ದೇವೆ ಎಂದರು.

ನಾವು ಬಡವರ ಪರವಾಗಿ ಕೇಳುತ್ತಿದ್ದೇವೆ. ಅವರ ತರ ಶ್ರೀಮಂತರ ಪರ ಕೇಳಲ್ಲ. ಕಾಂಗ್ರೆಸ್ ಅಂದರೆ ಬಡವರ ಪರ, ಸೂಕ್ಷ್ಮ ಸಮಾಜಗಳ ಪರ, ದಲಿತರ ಪರ, ಅಲ್ಪಸಂಖ್ಯಾತರ ಪರ ಇರುವ ಪಕ್ಷ. ಈ ರಾಜ್ಯದಲ್ಲಿ, ರಾಷ್ಟ್ರದಲ್ಲಿ ಇದ್ದರೆ ಅದು ಕಾಂಗ್ರೆಸ್. ಹಾಗಾಗಿ ಅವರ ಪರ ಕೇಳುತ್ತಿದ್ದೇವೆ. ಮಹಾರಾಷ್ಟ್ರದಲ್ಲಿ ಮೂರು ಕೋಟಿಗೂ ಹೆಚ್ಚು ಮತಗಳು ನಕಲಿ ಆಗಿದೆ. ನಮ್ಮ ರಾಜ್ಯದಲ್ಲಿ ಎಷ್ಟು ಮತಗಳು ಇವೆ ಎಂದು ಪರಿಶೀಲಿಸಬೇಕು ಎಂದರು.

ಹನೂರು ವಿಧಾನಸಭಾ ಕ್ಷೇತ್ರ ಶಾಸಕ ಎಂ.ಆರ್. ಮಂಜುನಾಥ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಗೀತ, ನೃತ್ಯದಿಂದ ಒತ್ತಡ ಕಡಿಮೆ: ದಿನೇಶ್ ಗೂಳಿಗೌಡ
ಹಾಲಿನಪುಡಿ ಕಲಬೆರಕೆ ಪ್ರಕರಣ: ಮೂರು ದಿನ ಜಾಧವ್ ಪೊಲೀಸರ ವಶಕ್ಕೆ