ಗದಗ: ಯುವಕರಲ್ಲಿ ರಾಷ್ಟ್ರಾಭಿಮಾನದ ಜತೆಗೆ ನಮ್ಮ ದೇಶದ ಉತ್ತಮ ಭವಿಷ್ಯಕ್ಕಾಗಿ ಸಮಾಜದ, ಪ್ರಜಾಭುತ್ವದ, ಕುಟುಂಬದ, ರೈತರ, ಕಾರ್ಮಿಕರ, ಹಿತಕ್ಕಾಗಿ ನಾವು ನೀವೆಲ್ಲರೂ ಒಳ್ಳೆಯ ಆಡಳಿತ ತರಬೇಕೆಂದರೆ ನಮ್ಮಲ್ಲಿರುವ ಮತದಾನದ ಹಕ್ಕು ಪಾರದರ್ಶಕವಾಗಿ ಮತಚಲಾಯಿಸಲು ಪ್ರತಿಯೊಬ್ಬ ನಾಗರಿಕರು ಮುಂದಾಗಬೇಕು ಎಂದು ಕಲ್ಯಾಣ ಶಿರಿ ಪದವಿ ಕಾಲೇಜಿನ ಸಂಸ್ಥಾಪಕ ಪ್ರಾ.ಬಿ.ಬಿ. ಗೌಡರ ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಐಕ್ಯುಎಸಿ ಅಡಿ ಹಾಗೂ ರಾಜ್ಯಶಾಸ್ತ್ರ ವಿಭಾಗದಿಂದ ಮತದಾನದಲ್ಲಿ ಯುವಕರ ಪಾತ್ರದ ಕುರಿತು ಜರುಗಿದ ವಿಚಾರ ಸಂಕಿರಣದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿ, ಜಗತ್ತಿನಲ್ಲಿ ಇಲ್ಲಿಯವರೆಗೂ ರಾಷ್ಟ್ರದ ಹಿತಕ್ಕಾಗಿ ಕ್ರಾಂತಿಗಳು ಆಗಿರುವುದು ಯುವಕರಿಂದ, ಆ ದೃಷ್ಟಿಯಿಂದ ವಿದ್ಯಾರ್ಥಿಗಳು ಪ್ರಜಾಪ್ರಭುತ್ವ ಪಾರದರ್ಶಕವಾಗಿಸಲು ಮುಂದಾಗಬೇಕು ಎಂದರು.ಕಾಲೇಜಿನ ಪ್ರಾ.ಎಂ.ಯು. ಹಿರೇಮಠ, ರಾಜ್ಯಶಾಸ್ತ್ರ ಹಿರಿಯ ಉಪನ್ಯಾಸಕ ಎಸ್.ಜಿ. ಕಡ್ಡಿ ಮಾತನಾಡಿ, ಪ್ರಜಾಪ್ರಭುತ್ವದ ಆಸೆಗಳು ಗ್ರಾಪಂ, ತಾಪಂ, ಜಿಪಂ, ಪುರಸಭೆ, ನಗರಸಭೆ, ಎಪಿಎಂಸಿ, ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ, ರಾಜ್ಯಸಭೆಯ ಸದಸ್ಯರುಗಳ ಚುನಾವಣೆಗಳು ನಿಮ್ಮ ಅಮೂಲ್ಯವಾದ ಮತದಾನದ ಮೂಲಕ ಮಾತ್ರ ಆ ಹಿನ್ನೆಲೆ ರಾಷ್ಟ್ರದ ಹಿತ ಅಭಿವೃದ್ಧಿ ಶಕ್ತಿ ಹೆಚ್ಚಿಸುವ ಜವಾಬ್ದಾರಿ ಇರುವುದು ಮತದಾರರಲ್ಲಿ ಮಾತ್ರ ಎಂದು ತಿಳಿಸಿದರು.
ಐಕ್ಯುಎಸಿ ಸಂಯೋಜಕ ಪ್ರೊ.ಎಸ್.ಎಚ್. ಬಡೇಖಾನ್ನವರ ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ವೇಳೆ ಪ್ರೊ.ಪಿ.ಜಿ. ದೇಶಪಾಂಡೆ, ಪ್ರೊ. ಪ್ರಕಾಶ ಕರಿಗಾರ, ಪ್ರೊ.ಎಸ್.ಯು. ಸಜ್ಜನಶೆಟ್ಟರ, ಡಾ.ಎಸ್.ಕೆ. ಪೂಜಾರ, ಪ್ರೊ.ರೂಪಾ ಶ್ರೀನಿವಾಸ, ಪ್ರೊ. ಮಹಾಲಕ್ಷ್ಮಿ ಹುಟಗಿ, ವ್ಯವಸ್ಥಾಪಕ ಎಫ್.ಎಸ್. ಕರಬುಡ್ಡಿ, ಪ್ರೊ.ಸತೀಶ ಸರ್ವಿ, ಡಾ. ದ್ಯಾಮಣ್ಣ ಮನಕಟ್ಟಿ, ಪ್ರೊ. ಕೃಷ್ಣಪ್ಪ ಬೆಂತೂರ, ಡಾ. ಸುಜಾತಾ ಬರದೂರ, ಪ್ರೊ. ರಶ್ಮಿ ಹೂಗಾರ, ಪ್ರೊ. ಶ್ರೀದೇವಿ ದಾಸರ, ಪ್ರೊ. ಶ್ರೀದೇವಿ ಮ್ಯಾದರ, ಪ್ರೊ. ರಿಯಾಜಅಹ್ಮದ ದೊಡ್ಡಮನಿ ಹಾಗೂ ಸಿಬ್ಬಂದಿ, ವಿದ್ಯಾರ್ಥಿನಿಯರು ಇದ್ದರು.