ಯುವ ಜನರು ಯಾವುದೇ ಆಮಿಷಕ್ಕೆ ಒಳಗಾಗದೆ ಮತ ಚಲಾಯಿಸಿ: ದಾಸರಿ ಕ್ರಾಂತಿ ಕಿರಣ್

KannadaprabhaNewsNetwork |  
Published : Jan 24, 2024, 02:04 AM IST
ನರಸಿಂಹರಾಜಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಮತದಾನ ದಿನ ಕಾರ್ಯಕ್ರಮವವನ್ನು ಇಲ್ಲಿನ ನ್ಯಾಯಾಧೀಶ ದಾಸರಿ ಕ್ರಾಂತಿ ಕಿರಣ್ ಉದ್ಘಾಟಿಸಿದರು.ತಾಲೂಕು ವಕೀಲರ ಸಂಘದ ಅಧ್ಯಕ್ಷ ಸಂತೋಷಕುಮಾರ್ ಮತ್ತಿತರರು ಇದ್ದರು. | Kannada Prabha

ಸಾರಾಂಶ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಸರ್ಕಾರಿ ಅಭಿಯೋಜನಾ ಇಲಾಖೆ ಆಶ್ರಯದಲ್ಲಿ ನಡೆದ ಮತದಾನ ದಿನ ಮತ್ತು ರಾಷ್ಟ್ರೀಯ ಯುವ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ನ್ಯಾಯಾಧೀಶ ದಾಸರಿ ಕ್ರಾಂತಿಕಿರಣ್ ಯುವ ಜನರು ಯಾವುದೇ ಆಮಿಷಗಳಿಗೆ ಬಲಿಯಾಗದೆ ಜವಾಬ್ಧಾರಿಯಿಂದ ತಮ್ಮ ಪ್ರತಿನಿಧಿಗಳನ್ನು ಚುನಾಯಿಸಬೇಕು ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತದಾನ ದಿನ ಹಾಗೂ ರಾಷ್ಟೀಯ ಯುವ ದಿನ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಯುವ ಜನರು ಯಾವುದೇ ಆಮಿಷಗಳಿಗೆ ಬಲಿಯಾಗದೆ ಜವಾಬ್ಧಾರಿಯಿಂದ ತಮ್ಮ ಪ್ರತಿನಿಧಿಗಳನ್ನು ಚುನಾಯಿಸಬೇಕು ಎಂದು ನ್ಯಾಯಾಧೀಶ ದಾಸರಿ ಕ್ರಾಂತಿಕಿರಣ್ ಹೇಳಿದರು.ಮಂಗಳವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಸರ್ಕಾರಿ ಅಭಿಯೋಜನಾ ಇಲಾಖೆ ಆಶ್ರಯದಲ್ಲಿ ನಡೆದ ಮತದಾನ ದಿನ ಮತ್ತು ರಾಷ್ಟ್ರೀಯ ಯುವ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಜ್ಞಾವಂತ ಯುವ ಸಮುದಾಯ ದೇಶದ ಬೆನ್ನೆಲುಬಾಗಿದೆ ಎಂದರು.

ವಕೀಲ ಎಚ್.ಆರ್.ವೆಂಕಟೇಶ್ ಮೂರ್ತಿ ಮತದಾನ ದಿನ ಮತ್ತು ರಾಷ್ಟ್ರೀಯ ಯುವ ದಿನದ ಬಗ್ಗೆ ಉಪನ್ಯಾಸ ನೀಡಿ, ಯುವಕರು ಸ್ವಾಮಿ ವಿವೇಕಾನಂದರ ತತ್ವ ಆದರ್ಶಗಳನ್ನು ಪಾಲಿಸಬೇಕು. ಸತ್ಪುರುಷರ ಆದರ್ಶಗಳನ್ನು ತಮ್ಮಲ್ಲಿ ರೂಢಿಸಿಕೊಳ್ಳಬೇಕು. ಧರ್ಮಗಳು ಹಲವಾದರೂ ಅವುಗಳ ಸಾರ ಒಂದೇ ಆಗಿದೆ. ಪ್ರತಿಯೊಬ್ಬರೂ ತಮ್ಮ ಧರ್ಮವನ್ನು ಪಾಲಿಸುವ ಜತೆಗೆ ಪರ ಧರ್ಮವನ್ನು ಗೌರವಿಸಬೇಕು ಎಂದರು.ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಸಂತೋಷ್ ಕುಮಾರ್ ಮಾತನಾಡಿ, ಸ್ಥಳೀಯ ಸಂಸ್ಥೆಗಳ ಚುನಾವಣೆಯಿಂದ ರಾಷ್ಟ್ರಮಟ್ಟದವರೆಗಿನ ಚುನಾವಣೆಗಳಲ್ಲಿ ಯುವ ಮತದಾರರ ಪಾತ್ರ ಮಹತ್ವದ್ದಾಗಿದೆ. ದೇಶದ ಕಾನೂನುಗಳನ್ನು ರೂಪಿಸುವಂತಹ ಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ಅತ್ಯಂತ ಜವಾಬ್ಧಾರಿಯಿಂದ ಯೋಗ್ಯರನ್ನು ಚುನಾಯಿಸಬೇಕೆಂದರು.ಅಧ್ಯಕ್ಷತೆ ವಹಿಸಿದ್ದ ಇತಿಹಾಸ ವಿಭಾಗದ ಮುಖ್ಯಸ್ಥ ಡಿ.ನಾಗೇಶಗೌಡ ಮಾತನಾಡಿ, ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವ ದೇಶ ಭಾರತ. ನಮ್ಮ ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಶಿಕ್ಷಿತ ಮತದಾರರು ಮತ ಚಲಾಯಿಸುವುದು ಅವಶ್ಯಕ ನಮ್ಮೊಳಗಿನ ದೈವತ್ವವನ್ನು ಕಂಡುಕೊಂಡರೆ ದೇಶದ ಧಾರ್ಮಿಕ ದಳ್ಳುರಿಯನ್ನು ಶಮನಗೊಳಿಸಬಹುದು. ಇದು ಬಹು ಧರ್ಮಿಯ ದೇಶದ ಪ್ರಗತಿಗೆ ಪೂರಕವಾಗುತ್ತದೆ ಎಂದರು.ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಮಂಜುನಾಥ್ ನಾಯ್ಕ್. ಸಮಾಜ ಕಾರ್ಯವಿಭಾಗದ ಮುಖ್ಯಸ್ಥ ದಿನಕರ್, ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥ ಲಕ್ಷ್ಮಣನಾಯಕ್, ಕನ್ನಡವಿಭಾಗದ ಮುಖ್ಯಸ್ಥೆ ರೂಪ, ಉಪನ್ಯಾಸಕ ಟಿ.ಮಂಜುನಾಥ್ರು,ರುಖಿಯತ್, ವಿದ್ಯಾರ್ಥಿ ಮಹಮ್ಮದ್ ಸಹಾದ್ ಉಪಸ್ಥಿತರಿದ್ದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ