ಕನ್ನಡಪ್ರಭ ವಾರ್ತೆ ಬೆಳಗಾವಿನನ್ನ ಜನ್ಮ ಭೂಮಿ ಹುಬ್ಬಳ್ಳಿ. ಬೆಳಗಾವಿ ನನ್ನ ಕರ್ಮಭೂಮಿ, ಬೆಳಗಾವಿ ಜೊತೆಗೆ 30 ವರ್ಷಗಳಿಂದ ಸಂಬಂಧ ಇದೆ. ನನ್ನನ್ನು ಹೊರಗಿನವ ಎಂದು ಟೀಕಿಸುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಕ್ಷೇತ್ರದ ಮತದಾರರು ಭಾರೀ ಬಹುಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ತಕ್ಕ ಉತ್ತರ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ನೂತನ ಸಂಸದ ಜಗದೀಶ ಶೆಟ್ಟರ್ ಹೇಳಿದರು.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ನನ್ನನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಲು ಕಾರಣರಾದ ಕ್ಷೇತ್ರದ ಪಕ್ಷದ ಕಾರ್ಯಕರ್ತರನ್ನು, ನಾಯಕರನ್ನು ನಾನು ಅಭಿನಂದನೆ ಸಲ್ಲಿಸುತ್ತೇನೆ. ಕ್ಷೇತ್ರದ ಮತದಾರರಿಗೆ ನಾನು ಚಿರಋಣಿಯಾಗಿರುತ್ತೇನೆ. ನನ್ನನ್ನು ಹೊರಗಿನವನಲ್ಲ. ಬೆಳಗಾವಿ ಜೊತೆಗೆ 30 ವರ್ಷಗಳ ಸಂಬಂಧವಿದೆ. ಆ ಸಂಬಂಧವನ್ನು ಸಾಬೀತು ಪಡಿಸಲು ಕ್ಷೇತ್ರದ ಮತದಾರರು ನನ್ನನ್ನು ಗೆಲ್ಲಿಸಿದ್ದಾರೆ ಎಂದರು.ಬೆಳಗಾವಿ ಲೋಕಸಭಾ ಕ್ಷೇತ್ರದ ಅನೇಕ ಕಾರ್ಯಕರ್ತರು ತಾನೊಬ್ಬ ಮಾಜಿ ಮುಖ್ಯಮಂತ್ರಿ ಮತ್ತು ತಮ್ಮ ನಾಯಕ ಅಂತ ಗೌರವಿಸಿ ಹಗಲು ರಾತ್ರಿ ತನಗಾಗಿ ಪ್ರಚಾರ ಮಾಡಿದರು. ಅವರ ಸಹಾಯ ಮತ್ತು ಬೆಂಬಲವನ್ನು ತಾನ್ಯಾವತ್ತೂ ಮರೆಯಲಾರೆ, ಅವರ ಪರಿಶ್ರಮದಿಂದ ತಾನು 1.75 ಲಕ್ಷ ಮತಗಳ ಭಾರೀ ಅಂತರದಿಂದ ಗೆಲ್ಲಲು ಸಾಧ್ಯವಾಗಿದೆ ಎಂದರು.ಸುರೇಶ್ ಅಂಗಡಿಯವರನ್ನು 4 ಬಾರಿ ಇಲ್ಲಿಂದ ಸಂಸತ್ತಿಗೆ ಕಳಿಸಲಾಗಿತ್ತು ಮತ್ತು ಅವರು ಅಕಾಲಿಕವಾಗಿ ನಿಧನರಾದ ಹಿನ್ನೆಲೆಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಮಂಗಲ ಅಂಗಡಿಯವರನ್ನು ಜನ ಆಯ್ಕೆ ಮಾಡಿದರು. ತಾನು ಇಲ್ಲಿಗೆ ಬಂದಾಗ, ಇಲ್ಲಿನ ಶಾಸಕರು, ಮಾಜಿ ಶಾಸಕರು, ಪಕ್ಷದ ಮುಖಂಡರು, ಸದಸ್ಯರು ಮತ್ತು ಕ್ಷೇತ್ರದ ಅನೇಕ ಕಾರ್ಯಕರ್ತರು ತಾನೊಬ್ಬ ಮಾಜಿ ಮುಖ್ಯಮಂತ್ರಿ ಮತ್ತು ತಮ್ಮ ನಾಯಕ ಅಂತ ಗೌರವಿಸಿ ಹಗಲು ರಾತ್ರಿ ತನಗಾಗಿ ಪ್ರಚಾರ ಮಾಡಿದರು. ಪಕ್ಷದ ಕಾರ್ಯಕರ್ತರು, ನಾಯಕರ ಸಹಾಯ ಮತ್ತು ಬೆಂಬಲವನ್ನು ತಾನ್ಯಾವತ್ತೂ ಮರೆಯಲಾರೆ, ಅವರ ಪರಿಶ್ರಮದಿಂದ ತಾನು 1.75 ಲಕ್ಷ ಮತಗಳ ಭಾರೀ ಅಂತರದಿಂದ ಗೆಲ್ಲಲು ಸಾಧ್ಯವಾಗಿದೆ ಎಂದು ತಿಳಿಸಿದರು.