ಬಿಜೆಪಿಯ ಅಭಿವೃದ್ಧಿ ಹಾಗೂ ಕಾಂಗ್ರೆಸ್‌ನ ಒಡೆದು ಆಳುವ ನೀತಿಯ ನಡುವೆ ಲೋಕಸಭಾ ಚುನಾವಣೆ ನಡೆದಿದೆ, ಜಾತಿ ಜಾತಿ ಮಧ್ಯೆ ಜಗಳ ಹಚ್ಚುವ ಕಾಂಗ್ರೆಸ್ ಸರ್ಕಾರಕ್ಕೆ ಮತದಾರರೇ ಚುನಾವಣೆಯಲ್ಲಿ ಉತ್ತರ ನೀಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ, ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ಗುತ್ತಲ: ಬಿಜೆಪಿಯ ಅಭಿವೃದ್ಧಿ ಹಾಗೂ ಕಾಂಗ್ರೆಸ್‌ನ ಒಡೆದು ಆಳುವ ನೀತಿಯ ನಡುವೆ ಲೋಕಸಭಾ ಚುನಾವಣೆ ನಡೆದಿದೆ, ಜಾತಿ ಜಾತಿ ಮಧ್ಯೆ ಜಗಳ ಹಚ್ಚುವ ಕಾಂಗ್ರೆಸ್ ಸರ್ಕಾರಕ್ಕೆ ಮತದಾರರೇ ಚುನಾವಣೆಯಲ್ಲಿ ಉತ್ತರ ನೀಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ, ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದ ಬೀದಿಗಳಲ್ಲಿ ರೋಡ್ ಶೋ ಮೂಲಕ ಮತಯಾಚಿಸಿದ ಅವರು, ಕೋವಿಡ್‌ನಂತ ಸಂದಿಗ್ಧ ಪರಿಸ್ಥಿತಿಯಲ್ಲಿ ಉಚಿತ ಲಸಿಕೆ ನೀಡುವ ಮೂಲಕ ವಿಶ್ವವನ್ನೇ ಬೆರಗಾಗಿಸಿದ ಮೋದಿಜೀ ಅವರ ಕಾರ್ಯ, ಪ್ರವಾಹಕ್ಕೆ ಮನೆ ಕಳೆದುಕೊಂಡವರಿಗೆ ರು. 5 ಲಕ್ಷ ಪರಿಹಾರ, ರೈತರಿಗೆ ಕಿಸಾನ್ ಸಮ್ಮಾನ ಯೋಜನೆ, ಫಸಲ್ ಬೀಮಾ ಯೋಜನೆ ಮೂಲಕ ರೈತರಿಗೆ ಪರಿಹಾರ, ಉಚಿತ ಅಕ್ಕಿ ಸೇರಿದಂತೆ ಜನರ ಅಭಿವೃದ್ಧಿ ಪೂರಕವಾದ ಸುದೀರ್ಘ 10 ವರ್ಷದ ಆಡಳಿತ ನೀಡಿದ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸುವ ಮೂಲಕ ಸುಭದ್ರ ಭಾರತ ದೇಶಕ್ಕೆ ಕೈ ಜೋಡಿಸುವ ಸಲುವಾಗಿ ಬಿಜೆಪಿ ಕಮಲದ ಗುರುತಿಗೆ ಮತ ನೀಡಬೇಕು ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಜಾರಿಗೆ ತಂದ ಬ್ಯಾಂಕ್ ಸಾಲ ಮನ್ನಾ, ಪ್ರತ್ಯೇಕ ಕೃಷಿ ಬಜೆಟ್, ಪಂಪಸೆಟ್‌ಗಳಿಗೆ ಉಚಿತ ವಿದ್ಯುತ್, ಭಾಗ್ಯಲಕ್ಷಿ ಬಾಂಡ್, ನಿರಂತರ ಜ್ಯೋತಿ, ಸುವರ್ಣ ಗ್ರಾಮ ಯೋಜನೆ ಸೇರಿದಂತೆ ಹಲವು ರೈತಪರ ಯೋಜನೆಗಳನ್ನು ಕೈಗೊಳ್ಳುವ ಮೂಲಕ ರೈತರ ಧ್ವನಿಯಾಗಿದ್ದರು. ಅವರಂತೆ ಬೊಮ್ಮಾಯಿ ಅವರು ನೀರಾವರಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಸೇರಿದಂತೆ ಜನಪರ ಯೋಜನೆಗಳನ್ನು ಕೈಗೊಳ್ಳುವ ಮೂಲಕ ಜಿಲ್ಲೆ ಹಾಗೂ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದರು ಎಂದರು.
ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಅಲೆಗೆ ಕಾಂಗ್ರೆಸ್ ಧೂಳಿಪಟವಾಗಲಿದೆ, ಅಭಿವೃದ್ಧಿ ಹೆಸರಲ್ಲಿ ಮತ ಕೇಳುವವರು ನಾವು, ಕಾಂಗ್ರೆಸ್‌ನಂತೆ ಬೋಗಸ್ ಭಾಗ್ಯಗಳ ಆಸೆ ತೋರಿಸಿ ಮತದಾರರಿಗೆ ವಂಚನೆ ಮಾಡುವದಿಲ್ಲ. ಈ ಬಾರಿ ಕರ್ನಾಟಕದ 28 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಜಿಡಿಎಸ್ ಮೈತ್ರಿ ಅಭ್ಯರ್ಥಿಗಳು ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಮೆರವಣಿಗೆಯಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸಿದ್ಧರಾಜ ಕಲಕೋಟಿ, ಮುಖಂಡರಾದ ಗವಿಸಿದ್ಧಪ್ಪ ದ್ಯಾಮಣ್ಣನವರ, ಪರಮೇಶಪ್ಪ ಮೇಗಳಮನಿ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಎಸ್. ಸಿದ್ಧಬಸಪ್ಪ ಯಾದವ, ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ಪಟ್ಟಣ ಪಂಚಾಯಿತಿ ಸದಸ್ಯರಾದ ಮಾಲತೇಶ ಶಿತಾಳದ, ಪರಶುರಾಮ ಯಲಗಚ್ಚ, ಗಣೇಶ ಆರೇಮಲ್ಲಾಪುರ, ವಿಜಯ ಲಮಾಣಿ, ಮಾಜಿ ಸದಸ್ಯ ರಮೇಶ ಮಠದ, ಅನಸೂಯ ಯರವಿನತಲಿ, ಗುಡ್ಡಪ್ಪ ಅನ್ವೇರಿ, ರಾಜಾರಾಮ ಕುಲಕರ್ಣಿ, ಮಲ್ಲಿಕಾರ್ಜುನ ಮರಿಯಾನಿ, ಮುಕ್ತಾಬಾಯಿ ಬಿಸೆ, ಅಜ್ಜಪ್ಪ ತರ್ಲಿ, ತೇಜರಾಜ ಜಾನ್ಮನೆ, ಮಂಜುನಾಥ ಸಿದ್ದಣ್ಣವರ, ಮಾಲತೇಶ ಕೋಣನವರ, ಅಶೋಕ ಆರಿಕಟ್ಟಿ, ಪರಮೇಶ ಲಮಾಣಿ, ರಾಜು ತೋಟದ, ಗಫರಸಾಬ ಹಾಲಗಿ, ಅಬ್ದುಲಸಾಬ ಹಾವನೂರ, ರಜಾಕಸಾಬ ಕೊಕ್ಕರಗುಂದಿ, ಮಲ್ಲಪ್ಪ ಗಿರಿಯಪ್ಪನವರ, ಪ್ರಕಾಶ ಕೆಂಚಮಲ್ಲ, ಮರಿಯಪ್ಪ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.