ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಕೂರ್ಗಳ್ಳಿಯಲ್ಲಿರುವ ಶಾಹಿ ಎಕ್ಸ್ ಪೊರ್ಟ್ ಪ್ರೈ.ಲಿ. ಸಂಸ್ಥೆಯ ಘಟಕ 37 ಮತ್ತು ಘಟಕ 42 ರಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮಂಗಳವಾರ ನಡೆದ ಮತದಾರರ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನವು 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಭಾರತೀಯನಿಗೂ ಮತಚಲಾಯಿಸುವ ಹಕ್ಕನ್ನು ನೀಡಿದೆ. ಅದನ್ನು ಸರಿಯಾದ ಸಮಯದಲ್ಲಿ ಬಳಸಿಕೊಂಡು ಉತ್ತಮ ಪ್ರಜಾಪ್ರಭುತ್ವವನ್ನು ನಿರ್ಮಿಸಬೇಕು ಎಂದರು.
ದೇಶದಾದ್ಯಂತ 96 ಕೋಟಿ ಮತದಾರರಿದ್ದು, 10 ಲಕ್ಷ ಮತಗಟ್ಟೆಗಳಲ್ಲಿ 57 ಲಕ್ಷ ಇವಿಎಂಗಳನ್ನು ಮತದಾನಕ್ಕಾಗಿ ಬಳಸಗುತ್ತಿದ್ದೆ. ಈ ಚುನಾವಣೆಯನ್ನು ಯಶಸ್ವಿಯಾಗಿ ಮುಗಿಸಲು ಚುನಾವಣಾ ಆಯೋಗವು ವ್ಯಾಪಾಕವಾಗಿ ಪ್ರಚಾರ ಮಾಡುತ್ತಿದೆ. ಹಾಗಿದ್ದಾಗ ಕಡ್ಡಾಯವಾಗಿ ಮತದಾನ ಮಾಡುವುದು ಪ್ರತಿಯೊಬ್ಬ ಮತದಾರನ ಕರ್ತವ್ಯ. ಹೀಗಾಗಿ ಎಲ್ಲರೂ ಮತದಾನ ಮಾಡಿ ಹಾಗೂ ಬೇರೆಯವರಿಗೂ ಮಾತ ಹಾಕುವಂತೆ ಪ್ರೇರೇಪಿಸಿ ಚುನಾವಣೆಯನ್ನು ಗೆಲ್ಲಿಸಬೇಕು ಎಂದು ಅವರು ಹೇಳಿದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೇ.70 ರಷ್ಟು ಮತದಾನವಾಗಿದ್ದು, ಈ ಚುನಾವಣೆಯಲ್ಲಿ ಅದಕ್ಕಿಂತ ಹೆಚ್ಚು ಮತದಾನ ಆಗುವ ನೀರಿಕ್ಷೆ ಇದೆ. ಮತದಾರರು ಚುನಾವಣೆಯ ಬಗ್ಗೆ ಯಾವುದೇ ಮಾಹಿತಿ ಬೇಕಿದ್ದರು ವೋಟರ್ ಹೆಲ್ಪಿಂಗ್ ಆಪ್ ಅನ್ನು ಡೌನ್‌ಲೋಡ್ ಮಾಡಿ ಅದರಿಂದ ಎಲ್ಲಾ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದರು.
ಶಾಹಿ ಎಕ್ಸ್ ಪೋರ್ಟ್ 37ರ ಘಟಕ ಮುಖ್ಯಸ್ಥ ಜೆ.ಸಿ. ಗುರುಮೂರ್ತಿ, ಘಟಕ 42ರ ಮುಖ್ಯಸ್ಥ ಸಂತೋಷ್ ಕುಮಾರ್, ವ್ಯವಸ್ಥಾಪಕ ನಿರ್ದೇಶಕರಾದ ಶುಭ ದೇವರಾಜೇ ಅರಸ್, ಕಾರ್ಮಿಕ ಕಲ್ಯಾಣಾಧಿಕಾರಿ ಚೈತ್ರಾ ಮೊದಲಾದವರು ಇದ್ದರು.